Friday, November 22, 2024
Friday, November 22, 2024

ಉಡುಪಿ ಇ-ಸ್ಯಾಂಡ್ ಆ್ಯಪ್, ಮರಳು ಮಿತ್ರ ಆ್ಯಪ್ ಮೂಲಕ ಮರಳು ಲಭ್ಯ

ಉಡುಪಿ ಇ-ಸ್ಯಾಂಡ್ ಆ್ಯಪ್, ಮರಳು ಮಿತ್ರ ಆ್ಯಪ್ ಮೂಲಕ ಮರಳು ಲಭ್ಯ

Date:

ಉಡುಪಿ: ಜಿಲ್ಲಾ ವ್ಯಾಪ್ತಿಯ ಕುಂದಾಪುರ ತಾಲೂಕು ಗುಲ್ವಾಡಿ, ಕಾವ್ರಾಡಿ, ಬಳ್ಕೂರು ಗ್ರಾಮದ ಮರಳು ಬ್ಲಾಕ್ ಸಂಖ್ಯೆ 4, ಹಳ್ನಾಡು, ಜಪ್ತಿ ಗ್ರಾಮದ ಮರಳು ಬ್ಲಾಕ್ ಸಂಖ್ಯೆ 6 ರಲ್ಲಿನ ಮರಳು ಸ್ಟಾಕ್‌ಯಾರ್ಡ್ನಲ್ಲಿ ಲಭ್ಯವಿರುವ ಮರಳನ್ನು ಸಾರ್ವಜನಿಕರು, ಖಾಸಗಿಯವರು & ಸರ್ಕಾರಿ ಕಾಮಗಾರಿಗಳಿಗೆ ಉಡುಪಿ ಇ-ಸ್ಯಾಂಡ್ ಆ್ಯಪ್ ಮೂಲಕ ಹಾಗೂ ಕಾರ್ಯಪಾಲಕ ಅಭಿಯಂತರರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ, ಮಂಗಳೂರು ರವರಿಗೆ ಸರ್ಕಾರಿ ಕಾಮಗಾರಿಗೆ ಮೀಸಲಿರಿಸಿರುವ ಅಂಪಾರು ಗ್ರಾಮದ ಮರಳು ಬ್ಲಾಕ್ ಸಂಖ್ಯೆ 11 ರಲ್ಲಿ ಸರ್ಕಾರಿ ಕಾಮಗಾರಿಗಾಗಿ ಹಾಗೂ ಕೆ.ಎಸ್.ಎಂ.ಸಿ.ಎಲ್, ಬೆಂಗಳೂರು ರವರಿಗೆ ಬೈಂದೂರು ಮತ್ತು ಕುಂದಾಪುರ ತಾಲೂಕಿನ ಸೇನಾಪುರ, ಹೊಸಾಡು & ಹಕ್ಲಾಡಿ, ಹೆಮ್ಮಾಡಿ, ಕಟ್‌ಬೆಲ್ತೂರು ಗ್ರಾಮದಲ್ಲಿ ಅಣೆಕಟ್ಟಿನ ಹಿನ್ನೀರಿನ ನದಿ ಪಾತ್ರದ ವ್ಯಾಪ್ತಿಯಲ್ಲಿ ಹೂಳಿನಲ್ಲಿ ದೊರಕುವ ಮರಳನ್ನು ತೆಗೆಯಲು ಕಾರ್ಯಾದೇಶ ನೀಡಿರುವ ಮರಳು ಬ್ಲಾಕ್‌ನಲ್ಲಿ ಕೆ.ಎಸ್.ಎಂ.ಸಿ.ಎಲ್, ಬೆಂಗಳೂರು ರವರಿಗೆ ಒದಗಿಸಿರುವ ಕರ್ನಾಟಕ ಸರ್ಕಾರದ ಮರಳು ಮಿತ್ರ ಆ್ಯಪ್ ಮೂಲಕ ಅಕ್ಟೋಬರ್ 27 ರಿಂದ ಸಾರ್ವಜನಿಕರಿಗೆ ಹಾಗೂ ಸರ್ಕಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಲಭ್ಯವಿರುತ್ತದೆ.

ಮರಳನ್ನು ಪಡೆದುಕೊಳ್ಳಲು ಇಚ್ಚಿಸುವವವರು ಸದರಿ ಮರಳು ಬ್ಲಾಕ್‌ಗಳಿಗೆ ಸಂಬಂಧಿಸಿದ ಸ್ಟಾಕ್ ಯಾರ್ಡ್ನಿಂದ ಉಡುಪಿ ಇ-ಸ್ಯಾಂಡ್ ಆ್ಯಪ್ ಮತ್ತು ಕರ್ನಾಟಕ ಸರ್ಕಾರದ ಮರಳು ಮಿತ್ರ ಆ್ಯಪ್ ಮುಖಾಂತರ ಪಡೆದುಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಹಿರಿಯ ಭೂವಿಜ್ಞಾನಿಯವರ ಕಚೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ರಜತಾದ್ರಿ, ಮಣಿಪಾಲ, ಉಡುಪಿ, ಮರಳು ಮಿತ್ರ ದೂರವಾಣಿ ಸಂಖ್ಯೆ: 8028055000, ಉಡುಪಿ ಇ-ಸ್ಯಾಂಡ್ ಆ್ಯಪ್ ದೂರವಾಣಿ ಸಂಖ್ಯೆ – 6366248666, 6366743888 ಹಾಗೂ 6366871888 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಭೂ ವಿಜ್ಞಾನಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ

ಉಡುಪಿ, ನ.21: ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ತಾಲೂಕು ಮಟ್ಟದ...

ಜಿಲ್ಲಾಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ

ಉಡುಪಿ, ನ.21: ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳ-2025 ರ...

ನ.22: ಉಡುಪಿಯಲ್ಲಿ ನೇರ ಸಂದರ್ಶನ

ಉಡುಪಿ, ನ.21: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ನವೆಂಬರ್...

ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ

ಉಡುಪಿ, ನ.21: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಮೈಸೂರಿನ ಭಾರತೀಯ...
error: Content is protected !!