ಮಂಗಳೂರು, ನ.24: ಓಂ ಶ್ರೀ ಗಣೇಶ ಯುವಕ ಮಂಡಲ (ರಿ) ಹಾಗೂ ಮಹಿಳಾ ಮಂಡಳಿ ಪಾಣೇಲ ಶಾಂತಿನಗರ ಇದರ ನೇತೃತ್ವದಲ್ಲಿ ಆದಿತ್ಯವಾರ ಕುರ್ನಾಡು ಪಡೀಲ್ ನಿಂದ ಪಾಣೇಲ ಶಾಂತಿನಗರ ಮೈದಾನದ ವರೆಗೆ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲು, ಫಜೀರು ಗ್ರಾಮ ಪಂಚಾಯತ್ ಸದಸ್ಯರಾದ ಮಹಮ್ಮದ್ ಪಾಣೇಲ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ನವೀನ್ ಪಾದಲ್ಪಾಡಿ, ಯುವ ವಕೀಲರಾದ ಮಹಮ್ಮದ್ ಅಸ್ಗರ್ ಮುಡಿಪು, ಬಿಜೆಪಿ ಫಜೀರು ಶಕ್ತಿ ಕೇಂದ್ರದ ಅಧ್ಯಕ್ಷರಾದ ಶಿವಕುಮಾರ್ ಅಡಪ ಫಜೀರುಗುತ್ತು, ಓಂ ಶ್ರೀ ಗಣೇಶ ಯುವಕ ಮಂಡಲದ ಅಧ್ಯಕ್ಷರಾದ ಜಗದೀಶ್ ಕೋಟ್ಯಾನ್ ಪಾಣೇಲ ಹಾಗೂ ಯುವಕ ಮಂಡಲ ಮತ್ತು ಮಹಿಳಾ ಮಂಡಳಿಯ ಸದಸ್ಯರು ಭಾಗವಹಿಸಿದರು.




By
ForthFocus™