Sunday, January 19, 2025
Sunday, January 19, 2025

ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್- ತ್ಯಾಜ್ಯ ನಿರ್ವಹಣೆಯಲ್ಲಿ ಸಮಾಜದ ಪಾತ್ರ ಕಾರ್ಯಾಗಾರ

ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್- ತ್ಯಾಜ್ಯ ನಿರ್ವಹಣೆಯಲ್ಲಿ ಸಮಾಜದ ಪಾತ್ರ ಕಾರ್ಯಾಗಾರ

Date:

ಮಂಗಳೂರು: ಲಕ್ಷೀ ಮೆಮೋರಿಯಲ್ ಎಜ್ಯುಕೇಶನ್ ಟ್ರಸ್ಟ್ (ಎಲ್.ಎಂ.ಇ.ಟಿ) ಅಂಗ ಸಂಸ್ಥೆಯಾದ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಧೆ ಮತ್ತು ಕರ್ನಾಟಕ ಸರಕಾರ ತೋಟಗಾರಿಕೆ ಇಲಾಖೆ, ದಕ್ಷಿಣ ಕನ್ನಡ, ಮಂಗಳೂರು ಇವರ ಸಹಭಾಗಿತ್ವದಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಸಮಾಜದ ಪಾತ್ರ ಮತ್ತು ತಾರಸಿ ತೋಟದ ನಿರ್ವಹಣೆ ಎಂಬ ವಿಷಯದ ಬಗ್ಗೆ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರವೀಣಾ ಕೆ., ಹಿರಿಯ ನಿರ್ದೇಶಕರು, ತೋಟಗಾರಿಕಾ ವಿಭಾಗ, ಮಂಗಳೂರು ಇವರು ನಗರ ಪ್ರದೇಶದಲ್ಲಿ ತಾರಸಿ ತೋಟ ಅನಿವಾರ‍್ಯ. ಸವಾಲಾಗಿರುವ ತ್ಯಾಜ್ಯ ನಿರ್ವಹಣೆಗೆ ಇದು
ಸಹಕಾರಿಯಾಗಿದೆ. ತ್ಯಾಜ್ಯವನ್ನು ಕೃಷಿಗೆ ಬಳಸುವ ಮೂಲಕ ನಿರ್ವಹಣೆ ಮಾಡಬಹುದು.

ಕೃಷಿಯಲ್ಲಿ ನಿರ್ವಹಣೆಯ ತತ್ವವನ್ನು ಅಳವಡಿಸಿಕೊಂಡು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಲಾಭದಾಯಕ ಉದ್ಯಮವನ್ನಾಗಿ ಕೃಷಿಯನ್ನು ಪರಿಗಣಿಸಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ರೀಟಾ ನೊರೋನ್ಹಾ, ನಿರ್ದೇಶಕರು, ಸೆಂಟರ್ ಫಾರ್ ಡೆವೆಲಪ್‌ಮೆಂಟ್ ಸ್ಟಡೀಸ್ ಅಂಡ್ ಎಜ್ಯುಕೇಶನ್ ಇವರು ತ್ಯಾಜ್ಯ ನಿರ್ವಹಣೆಯ ಮಹತ್ವದ ಕುರಿತಾಗಿ ಮಾತನಾಡಿ, ಮಾನವ ಇಲ್ಲದಿದ್ದರೂ ಪ್ರಕೃತಿಯು ದೀರ್ಘಾವಧಿಯ ತನಕ ಇರುತ್ತದೆ. ಆದರೆ, ಪ್ರಕೃತಿ ಇಲ್ಲದೆ ಮಾನವ ಜೀವಿಸಲು ಅಸಾಧ್ಯ. ಆದುದರಿಂದ, ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.

ಪ್ರಕಾಶ್ ನಡಹಳ್ಳಿ, ಮತ್ತು ಸರೋಜ ಪ್ರಕಾಶ್, ಸಲಹೆಗಾರರು, ಮನಸಿರಿ ಕೌನ್ಸ್ಲಿಂಗ್ ಸೆಂಟರ್, ಮಂಗಳೂರು ಇವರು ಕಾರ್ಯಕ್ರಮ ಉದ್ದೇಶಿಸಿ ಇಂದಿನ ದಿನಗಳಲ್ಲಿ ಪ್ರತಿಯೊಂದು ಕುಟುಂಬವು ತಮ್ಮ ಪರಿಸರದಲ್ಲಿ ಒಂದು ಕೈತೋಟ
ಹೊಂದುವ ಅವಶ್ಯಕತೆಯನ್ನು ಹೇಳುತ್ತಾ, ಗಿಡಗಳನ್ನು ನೆಡಲು ಸ್ಥಳಾವಕಾಶ ಕೊರತೆಯಿದ್ದರೂ, ಹಲವಾರು ಪ್ರಾಕ್ರತಿಕವಾಗಿ ಪಡೆಯುವ ವಸ್ತುಗಳನ್ನು ಉಪಯೋಗಿಸಿ ಗಿಡಗಳನ್ನು ನೆಟ್ಟು ಪೋಷಿಸಬಹುದು ಎಂದರು. ಗಿಡಗಳಿಗೆ ಸಾವಯವ ವಿಧಾನದಲ್ಲಿ ಗೊಬ್ಬರವನ್ನು ಮನೆಯಲ್ಲಿ ತಯಾರಿಸುವ ವಿಧಾನವನ್ನು ತಿಳಿಸಿದರು. ಬೇರೆ ಬೇರೆ ರೀತಿಯ ಔಷಧೀಯ ಮತ್ತು ಅಲಂಕಾರಿಕ ಗಿಡಗಳನ್ನು ಹೇಗೆ ಬೆಳೆಸಬಹುದು ಹಾಗೂ ಅದರ ಉಪಯೋಗವನ್ನು ಕೂಡ ತಿಳಿಸಿದರು.

ಸಾವಯವ ಗೊಬ್ಬರವನ್ನು ಬಳಸಿ ಕೃಷಿ ತರಕಾರಿಗಳನ್ನು ತಮ್ಮ ಮನೆಯಲ್ಲಿ ತಾವೇ ಹೇಗೆ ಬೆಳೆಸಬಹುದೆಂದು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕರಾದ ಡಾ. ಟಿ. ಜಯಪ್ರಕಾಶ್ ರಾವ್, ಇವರು ಸಮಾಜಮುಖಿಯಾಗಿ ವಿದ್ಯಾ ಸಂಸ್ಥೆಯನ್ನು ಬೆಳೆಸುವುದು ಇವತ್ತಿನ ಕಾಲಘಟ್ಟದಲ್ಲಿ ಮುಖ್ಯ. ಅದರ ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶೈಕ್ಷಣಿಕ ಮೌಲ್ಯ ಮತ್ತು ಸಾಮಾಜಿಕ ಮೌಲ್ಯದೊಂದಿಗೆ ಆಧುನಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಆಯೋಜಿಸಲು ತೋಟಗಾರಿಕಾ ಇಲಾಖೆಯು ಮಾರ್ಗದರ್ಶನ ನೀಡಬೇಕೆಂದು ತಿಳಿಸಿದರು.

ಕಾಲೇಜಿನ ವಿದ್ಯಾರ್ಥಿ ಸಂಘದ ಸಲಹೆಗಾರರಾದ ಪ್ರೊ. ಚೇತನ್ ಕುಮಾರ್ ಹಾಗೂ ವಿದ್ಯಾರ್ಥಿಗಳಾದ ರ‍್ಹಾನ್ ಶೇಖ್ ಮತ್ತು ಗೌತಮಿ ಕೆ. ಪದ್ಮಶಾಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹೇಶ್ ಪಿ.ಜಿ. ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿ, ಪ್ರೊ. ಗಾನವಿ ಕೆ.ಕೆ. ವಂದಿಸಿದರು. ಅಮೃತಾ ರಾಜೀವ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!