ಬೈಂದೂರು: ಬೈಂದೂರು ಯೋಜನಾ ನಗರದ ದರ್ಖಾಸ್ತ್ ಕಾಲೊನಿ ಸೇರಿದಂತೆ ಸುತ್ತಲಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಯೋಜನಾ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪುಟಾಣಿ ಮಕ್ಕಳಿಗೆ ಶಾಲೆ ಪ್ರವೇಶ ದ್ವಾರದ ಬಳಿ ಇರುವ ಕೆಸರಿನ ಹಾದಿ ಕಿರಿ ಕಿರಿ ಉಂಟುಮಾಡಿದೆ.
ಇಲ್ಲಿನ ಸುತ್ತಮುತ್ತಲಿನ ಪ್ರದೇಶದಿಂದ ಚರಂಡಿಗೆ ಹೋಗಬೇಕಾದ ನೀರು ಇಲ್ಲಿನ ಶಾಲಾ ದಾರಿಯಲ್ಲಿ ಹರಿದು ವಿದ್ಯಾರ್ಥಿಗಳು ಶಾಲೆಗೆ ಹೋಗಲು ತುಂಬಾ ಕಷ್ಟವಾಗಿದ್ದು ವಿದ್ಯಾರ್ಥಿಗಳ ಪೋಷಕರು ಹಾಗೂ ಸುತ್ತಲಿನ ನಾಗರಿಕರು ಈ ಕುರಿತು ಅಳಲನ್ನು ತೋಡಿಕೊಂಡಿದ್ದು ಇದಕ್ಕೆ ಸಂಬಂಧಿಸಿ ಶಿಕ್ಷಣ ಇಲಾಖೆ ಕೂಡ ಇದರ ಪಕ್ಕದಲ್ಲೇ ಇದ್ದು ಅವರು ಇದೇ ಹಾದಿಯಲ್ಲಿ ಹಾದು ಹೋಗುತ್ತಾರೆ ಆದರೂ ಕೂಡ ಗಮನ ಹರಿಸಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಸಂಬಂಧಿಸಿದ ಇಲಾಖೆಗಳು ಆದಷ್ಟು ಬೇಗ ಇಲ್ಲಿನ ಸಮಸ್ಯೆಗೆ ಸ್ಪಂದಿಸಿ ವಿದ್ಯಾರ್ಥಿಗಳಿಗೆ ಕೆಸರಿನ ದಾರಿಯಿಂದಾಗುವ ಕಿರಿಕಿರಿಯನ್ನು ತಪ್ಪಿಸಬೇಕಿದೆ.
“ಇಲ್ಲಿನ ಚರಂಡಿಗೆ ಹರಿದು ಹೋಗಬೇಕಾದ ಚರಂಡಿ ನೀರು ಶಾಲಾ ದಾರಿಯಲ್ಲಿ ನಿಂತು ಕೆಸರುಮಯವಾಗಿದ್ದು ವಿದ್ಯಾರ್ಥಿಗಳು ಶಾಲೆಗೆ ಹೋಗಲು ತ್ರಾಸ ಪಡಬೇಕಾಗಿದೆ ಅದರ ಪಕ್ಕದಲ್ಲೆ ಶಿಕ್ಷಣ ಇಲಾಖೆ ಕೂಡ ಇದ್ದು ಈ ಕುರಿತು ಗಮನ ಹರಿಸಿಲ್ಲ. ಆದಷ್ಟು ಬೇಗ ಸಂಭಂದಿಸಿದ ಇಲಾಖೆಗಳು ಈ ಕುರಿತು ಗಮನ ಹರಿಸಬೇಕು”
-ಶಿವರಾಜ್ (ಸ್ಥಳೀಯರು)
ವರದಿ: ರವಿರಾಜ್ ಬೈಂದೂರು