ಬ್ರಹ್ಮಾವರ: ಜಿಲ್ಲಾ ಪಂಚಾಯತ್ ಉಡುಪಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಉಡುಪಿ, 38ನೇ ಕಳತ್ತೂರು ಗ್ರಾಮ ಪಂಚಾಯತ್ ಇದರ ಆಶ್ರಯದಲ್ಲಿ ಕೆಂಜೂರು ಕಲ್ಲುಗುಡ್ಡೆ ಕೊರಗ ಕಾಲೋನಿಯ ಸಂಜೀವಿನಿ ಸ್ವಸಹಾಯ ಸಂಘಗಳ 10 ಫಲಾನುಭವಿಗಳಿಗೆ ಕೋಳಿ ಘಟಕ ವಿತರಣಾ ಕಾರ್ಯಕ್ರಮ ನಡೆಯಿತು.
ಶಾಸಕ ಕೆ. ರಘುಪತಿ ಭಟ್ ಉದ್ಘಾಟನೆ ನೆರವೇರಿಸಿ ಫಲಾನುಭವಿಗಳಿಗೆ ಕೋಳಿ ಘಟಕ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಕೊರಗ ಸಮುದಾಯದವರು ತಮ್ಮ ಸಾಂಪ್ರದಾಯಿಕ ಕಸುಬಿನೊಂದಿಗೆ ಇಂತಹ ಆರ್ಥಿಕ ಬಲವರ್ಧನೆಯ ಚಟುವಟಿಕೆಗಳನ್ನು ನಡೆಸುವ ಮೂಲಕ ಮಹಿಳೆಯರು ಕೂಡ ಸದೃಢರಾಗಿ ಸಮಾಜಕ್ಕೆ ಮಾದರಿಯಾಗಬೇಕೆಂದು ಕರೆ ನೀಡಿದರು.
ಕಳತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಕನ್ಯಾ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ಕಳತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನವೀನ ಕುಮಾರ್, ಸದಸ್ಯರಾದ ಆದರ್ಶ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಮಂಜುಳಾ ನಾಯ್ಕ್, ಉಷಾ, ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ, ಕಳತ್ತೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಬನಶಂಕರಿ, ಕೊಕ್ಕರ್ಣೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಿರಿಯಣ್ಣ ಶೆಟ್ಟಿ, ಕೊರಗ ಮುಖಂಡರಾದ ಬೊಗ್ರ, ಗೌರಿ, ಕೊರಗ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಅಮ್ಮಣ್ಣಿ, ಸ್ಫೂರ್ತಿ ಸಂಜೀವಿನಿ ಸಂಘದ ಅಧ್ಯಕ್ಷರಾದ ಗಿರಿಜಾ, ಸಂಕಲ್ಪ ಸಂಜೀವಿನಿ ಸಂಘದ ಅಧ್ಯಕ್ಷರಾದ ಶಾಂತಾ ಬಾಯಿ, ಉಪಸ್ಥಿತರಿದ್ದರು.
ಜಿಲ್ಲಾ ವ್ಯಸ್ಥಾಪಕರಾದ ಅವಿನಾಶ್ ಸ್ವಾಗತಿಸಿ ನವ್ಯಾ ವಂದಿಸಿದರು. ಎನ್ .ಆರ್.ಎಲ್.ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ನಿರೂಪಿಸಿದರು.