ಗೋಪಾಲಪುರ: ಆರೋಗ್ಯವಂತ ಜೀವನಶೈಲಿಯಿಂದ ಒತ್ತಡ ನಿರ್ವಹಣೆ ಸಾಧ್ಯ ಎಂದು ಬೆಂಗಳೂರಿನ ನಾರಾಯಣ ಹ್ರದಯಾಲಯದ ನರರೋಗ ತಜ್ಞರಾದ ಡಾ. ಹರಿರಾಮ ಆಚಾರ್ಯ ಹೇಳಿದರು.
ಅವರು ಗೋಪಾಲಪುರ ಸಾರ್ವಜನಿಕ ನಾಗಬನದಲ್ಲಿ ’ಆರೋಗ್ಯವೇ ಐಶ್ವರ್ಯ ಅನ್ನುವುದು ಯಾಕೆ’? ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಎಷ್ಟೇ ಸಂಪತ್ತಿದ್ದರೂ ಆರೋಗ್ಯ ಕೈಕೊಟ್ಟರೆ ಎಲ್ಲವೂ ವ್ಯರ್ಥ. ಆರೋಗ್ಯವನ್ನು ಸುಧಾರಿಸಿ ಉತ್ತಮಪಡಿಸಲು ಕ್ರಿಯಾಶೀಲ ಪ್ರಯತ್ನಗಳನ್ನು ನಡೆಸಬೇಕು. ನಿಯಮಿತ ವ್ಯಾಯಾಮ, ಪೌಷ್ಟಿಕ ಆಹಾರ, ಉತ್ತಮ ಜೀವನಶೈಲಿ ಇವುಗಳಿಂದ ಒತ್ತಡರಹಿತ ಜೀವನ ನಡೆಸುಬಹುದು.
ದೈನಂದಿನ ದಿನಚರಿಗೆ ಅಂಟಿಕೊಂಡು ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮಾಡಿದರೆ ಕ್ರಿಯಾಶೀಲವಾಗಿ ಇರಲು ಸಾಧ್ಯ ಎಂದರು.
ಮೋಹನ್ ರಾವ್, ಭಜನಾ ಮಂಡಳಿಯ ಅಧ್ಯಕ್ಷೆ ಲತಾ, ಭಜನಾ ಮಂಡಳಿ ಸದಸ್ಯರು, ಸಾರ್ವಜನಿಕ ನಾಗಬನ ಸಮಿತಿ ಪದಾಧಿಕಾರಿಗಳು ಸ್ಥಳೀಯರು ಉಪಸ್ಥಿತರಿದ್ದರು.
ಬಿ.ಪಿ. ಭಂಡಾರಿ ಸ್ವಾಗತಿಸಿ ನಿರೂಪಿಸಿದರು.