ಕಾರ್ಕಳ: ಶ್ರೀನಿವಾಸ ಸೇವಾ ಟ್ರಸ್ಟ್ (ರಿ) ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಷನ್ ವತಿಯಿಂದ ಒಂದು ವಾರದ ಉಚಿತ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಕಳ ಪುರಸಭೆಯ ಮುಖ್ಯಾಧಿಕಾರಿ ರೂಪ ಶೆಟ್ಟಿಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮಹಿಳೆಯರು ಸ್ವಾವಲಂಬಿಯಾಗಲು ಸರಕಾರದಿಂದ ಹಲವಾರು ಪೂರಕ ಯೋಜನೆಗಳಿವೆ. ಇದನ್ನು ಸದುಯೋಗಪಡಿಸಿಕೊಳ್ಳುವ ಪ್ರಯತ್ನಗಳಾಗಬೇಕು ಎಂದರು.
ಸಮಾಜಸೇವಕಿ ರಮಿತಾ ಶೈಲೇಂದ್ರ ಅವರು ಮಾತನಾಡುತ್ತಾ, ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಟ್ ಬೆಳೆದು ಬಂದ ಹಾದಿ ಪ್ರೇರಣೆ ನೀಡುವಂತದ್ದಾಗಿದೆ. ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಟ್ ಮಹಿಳೆಯರಿಗೆ ಸ್ವಾವಲಂಬಿಯಾಗಿ ಬದುಕಲು ಪೂರಕ ವಾತಾವರಣ ನಿರ್ಮಿಸಿರುವುದು ಕಾರ್ಕಳ ಜನತೆಯ ಪಾಲಿಗೆ ಹೆಮ್ಮೆಯ ವಿಷಯವಾಗಿದೆ ಎಂದರು. ಸೂರ್ಯ ಪುರೋಹಿತ್ ಉಪಸ್ಥಿತರಿದ್ದರು. ಸಾಧನ ಸ್ವಾಗತಿಸಿ, ಸಹನಾ ಶ್ರೀಶ ಕಾರ್ಯಕ್ರಮ ನಿರೂಪಿಸಿದರು.