ಬ್ರಹ್ಮಾವರ: ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೂರಾಡಿ, ಮಹೇಶ್ ಆಸ್ಪತ್ರೆ ಬ್ರಹ್ಮಾವರ ಸಹಯೋಗದಲ್ಲಿ ಸ್ಪೂರ್ತಿ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್ ಕೂರಾಡಿ, ಮಹಾಲಿಂಗೇಶ್ವರ ಭಜನಾ ಮಂಡಳಿ, ಪದ್ಮ ಕ್ಲಿನಿಕ್ ಕೂರಾಡಿ ಇವರ ನೇತೃತ್ವದಲ್ಲಿ 9ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಉಚಿತ ನೇತ್ರ ತಪಾಸಣಾ ಶಿಬಿರವು ಇಂದು ಬಿಎಂಎಂ ಪ್ರೌಢಶಾಲೆಯಲ್ಲಿ ಜರಗಿತು.
ಹನೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ನಲ್ಕುದ್ರು ಕಾರ್ಯಕ್ರಮ ಉದ್ಘಾಟಿಸಿದರು. ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶೇಖರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಗಣೇಶೋತ್ಸವ ಸ್ಥಾಪಕ ಪ್ರಥ್ವೀರಾಜ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು.
ಕೂರಾಡಿಯಲ್ಲಿ ಅಂಚೆಪೇದೆಯಾಗಿ 23 ವರ್ಷಗಳ ಸೇವೆ ಸಲ್ಲಿಸಿರುವ ಕೂರಾಡಿ ಕೇಶವ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು. ಸೇವಾ ನಿವೃತ್ತಿ ಹೊಂದಿದ ಬಾಬು ಕೆ ನಾಯ್ಕ್, ದೈಹಿಕ ಶಿಕ್ಷಕ ಎನ್ ಸಂತೋಷ್ ಕುಮಾರ್ ಶೆಟ್ಟಿ, ಗೋಪಾಲ್ ಆಚಾರ್ಯ ಬಂಡೀಮಠ, ಅರುಣ್ ಕುಮಾರ್ ಶೆಟ್ಟಿ, ಸೀತಾರಾಮ್ ಪೂಜಾರಿ ಎಳ್ಳಂಪಳ್ಳಿ ಇವರನ್ನು ಗೌರವಿಸಲಾಯಿತು.
ಬಿಎಂಎಂ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಮೂರ್ತಿ ರಾವ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಡಾ. ಸುರೇಶ್ ಶೆಟ್ಟಿ, ಮಹೇಶ್ ಆಸ್ಪತ್ರೆಯ ವೈದ್ಯೆ ಡಾ. ವೀಣಾ ಯು.ಎಚ್, ಗ್ರಾಮ ಪಂಚಾಯತ್ ಸದಸ್ಯ ಚಂದ್ರ ಮರಕಾಲ, ಮಲ್ಲಿಕಾ ಪೂಜಾರಿ, ಗಣೇಶೋತ್ಸವ ಸಮಿತಿ, ಸ್ಪೂರ್ತಿ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್,ಮಹಾಲಿಂಗೇಶ್ವರ ಭಜನಾ ಮಂಡಳಿಯ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.
80 ಮಂದಿ ಗ್ರಾಮಸ್ಥರು ನೇತ್ರ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಂಡರು. ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.