Sunday, October 4, 2026
Sunday, October 4, 2026

ಜಾತಿ ಮೀರಿದ ರಾಜಕಾರಣ, ಪ್ರಯೋಗಶೀಲತೆ ಅರಸರ ಉತ್ಕೃಷ್ಟ ಗುಣ: ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

ಜಾತಿ ಮೀರಿದ ರಾಜಕಾರಣ, ಪ್ರಯೋಗಶೀಲತೆ ಅರಸರ ಉತ್ಕೃಷ್ಟ ಗುಣ: ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

Date:

ಉಡುಪಿ: ದಿ. ದೇವರಾಜ ಅರಸರು ಈ ನಾಡು ಕಂಡ ಒಬ್ಬ ಶ್ರೇಷ್ಠ ಮುಖ್ಯಮಂತ್ರಿ ಅನ್ನುವ ಕೀರ್ತಿಗೆ ಭಾಜನರಾಗಿರುವುದು ಜಾತಿ ಆಧರಿತ ರಾಜಕಾರಣದಿಂದಾಗಿ ಅಲ್ಲ, ಬದಲಾಗಿ ಅವರಲ್ಲಿದ್ದ ಜಾತಿ ಮೀರಿದ ರಾಜಕಾರಣ, ಆಡಳಿತದಲ್ಲಿ ಪ್ರಯೋಗಶೀಲತೆ. ಅವರ ಪ್ರತಿಯೊಂದು ನಿರ್ಧಾರ ದೀನ ದಲಿತರ ಹಿಂದುಳಿದ ವರ್ಗದ ಶ್ರೇಯೋಭಿೃದ್ದಿಯ ದಿಕ್ಕಿನಲ್ಲಿಯೇ ಸಾಗಿತ್ತು.

ಭೂಸುಧಾರಣಾ ಕಾನೂನನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕೀರ್ತಿ ಅರಸರಿಗೆ ಸಲ್ಲುತ್ತದೆ. ಅರಸರ ಆಡಳಿತದ ಅವಧಿ ಸಾರ್ವತ್ರಿಕ ಸಾರ್ವಕಾಲಿಕವಾಗಿ ನೆನಪಿಸಬೇಕಾದ ಅರಸು ಯುಗವನ್ನೇ ಸೃಷ್ಟಿ ಮಾಡಿದೆ ಎಂದು ಅಂಕಣಕಾರ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು.

ಉಡುಪಿ ಜಿಲ್ಲಾ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸುರವರ 106 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲಾಧಿಕಾರಿ ಜಿ.ಜಗದೀಶ್ ಅರಸು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ದೇವಿಂದ್ರ ಎಸ್ ಬಿರಾದರ ಉಪಸ್ಥಿತರಿದ್ದರು.

ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ನರಸಿಂಹ ಪೂಜಾರಿ ವಂದಿಸಿದರು, ಲೆಕ್ಕಾಧೀಕ್ಷಕಿ ಸುಗುಣಾ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತೆಂಕನಿಡಿಯೂರು ಕಾಲೇಜು: ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ

ತೆಂಕನಿಡಿಯೂರು, ಅ.3: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ...

ವಿಧಿಕ್ತ–2026 ಉದ್ಘಾಟನೆ

ಕುಂದಾಪುರ, ಅ.3: ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ವಾಣಿಜ್ಯ ವಿಭಾಗದ...

ಕ್ರಿಯೇಟಿವ್ ಕಾಲೇಜು: ಗಾಂಧಿ ಜಯಂತಿ ಸಂಭ್ರಮ

ಕಾರ್ಕಳ, ಅ.3: ಕ್ರಿಯೇಟಿವ್ ಪದವಿ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಜಯಂತಿ ಹಾಗೂ...
error: Content is protected !!