Monday, February 24, 2025
Monday, February 24, 2025

ಉಡುಪಿ ನಗರಸಭೆ ಬಳಿ ಕೃತಕ ಜಲಾಶಯ

ಉಡುಪಿ ನಗರಸಭೆ ಬಳಿ ಕೃತಕ ಜಲಾಶಯ

Date:

ಉಡುಪಿ: ಕವಿ ಮುದ್ದಣ ಮಾರ್ಗ ಇಲ್ಲಿಯ ನಗರಸಭೆ ಕಛೇರಿ ಸನಿಹ, ಹಲವು ವರ್ಷಗಳಿಂದ ಕಾರ್ಯನಿರ್ವಸಿಸುತ್ತಿದ್ದ ಹಾಜಿ ಆಬ್ದುಲ್ಲಾ ಚಿಕಿತ್ಸಾಲಯ, ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಯನ್ನು ಅಭಿವೃದ್ಧಿಯ ಕಾರಣದಿಂದ ಎರಡು ವರ್ಷಗಳ ಹಿಂದೆ ನೆಲಸಮಗೊಳಿಸಲಾಯಿತು. ಅದೇ ವಿಶಾಲವಾದ ಸ್ಥಳದಲ್ಲಿ ಇವಾಗ ಸುಮಾರು ಅರವತ್ತು ಅಡಿ ಆಳದ ಗುಂಡಿ ತೋಡಿಡಲಾಗಿದೆ. ಗುಂಡಿಯಲ್ಲಿ ಮಳೆ ನೀರು, ಒಸರು ನೀರು ಜಲಾಶಯದಂತೆ ಸಂಗ್ರಹಗೊಂಡಿದೆ. ನೀರಿನ ಮಟ್ಟವು ಐವತ್ತು ಅಡಿಯ ಆಳದವರೆಗೆ ಇರಬಹುದೆಂದು ಅಂದಾಜಿಸಲಾಗಿದೆ.

ಗುಂಡಿಯ ಅಂಚಿನ ಸುತ್ತಲೂ ಮಣ್ಣು ಕುಸಿಯದಂತೆ ತಡೆಯೊಡ್ಡಲು, ಯಾವೊಂದು ರಕ್ಷಣೆಯ ನಿರ್ಮಾಣಗಳು ಇಲ್ಲಿಲ್ಲ. ಜೇಡಿ ಮಣ್ಣು ಮೆದುವಾಗಿರುವುದರಿಂದ ಇಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆಯೂ ಇದೆ. ಗುಂಡಿಯ ಅಂಚಿನ ಸ್ಥಳಗಳಲ್ಲಿ ವಾಣಿಜ್ಯ ಸಂಕೀರ್ಣಗಳು, ಬಹುಮಹಡಿ ಕಟ್ಟಡ, ವಾಸದ ಮನೆಗಳು ಇವೆ. ಅಕಸ್ಮಾತ್ ಅತಿಯಾಗಿ ಮಳೆ ಸುರಿದು ನೀರಿನ ಮಟ್ಟ ಏರಿಕೆಯಾದರೆ ಭೂಕುಸಿತ ಸಂಭವಿಸಬಹುದು!

ಅಕ್ಕ ಪಕ್ಕದ ಕಟ್ಟಡಗಳು ಉರುಳಿ ಬಿದ್ದು ದೊಡ್ಡ ಮಟ್ಟದ ದುರಂತ ಸಂಭವಿಸಲೂಬಹುದು. ಸ್ಥಳದ ಸುತ್ತಲು ಎತ್ತರದವರೆಗೆ ತಗಡು ಶೀಟಿನ ಬೇಲಿ ಹಾಕಿರುವುದರಿಂದ, ಇಲ್ಲಿಯ ಸಮಸ್ಯೆ ಅಧಿಕಾರಿಗಳ ಸಾರ್ವಜನಿಕರ ಅರಿವಿಗೆ ಬಾರದೆ ಅಜ್ಞಾತವಾಗಿದೆ. ಪರಿಸರದಲ್ಲಿ ಆತಂಕ ಮನೆಮಾಡಿದೆ. ತುರ್ತಾಗಿ ಜಿಲ್ಲಾಡಳಿತ, ನಗರಸಭೆ, ಅಪಾಯ ಆಹ್ವಾನಿಸುವ ಈ ಸ್ಥಳವನ್ನು, ಭೂ ವಿಜ್ಞಾನಿ- ಭೂಗರ್ಭ ಶಾಸ್ತ್ರಜ್ಞರ ಮೂಲಕ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹಪಡಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ- ಶ್ರೀಕೃಷ್ಣ ಮಠದ ವತಿಯಿಂದ ಹೊರೆಕಾಣಿಕೆ

ಉಡುಪಿ, ಫೆ.23: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾಪು ಅಮ್ಮನ ಪ್ರತಿಷ್ಠಾ...

ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನಕ್ಕೆ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಕೊಡುಗೆ

ಕುಕ್ಕಿಕಟ್ಟೆ, ಫೆ.23: ಮಣಿಪಾಲದ ಟಾಪ್ಮಿಅಲ್ಯುಮ್ನಿ ಅಸೋಸಿಯೇಷನ್ ನಿಂದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ...

ಕೊಹ್ಲಿ ಶತಕ; ಪಾಕಿಸ್ತಾನ ವಿರುದ್ಧ ಭಾರತ ದಿಗ್ವಿಜಯ

ಯು.ಬಿ.ಎನ್.ಡಿ., ಫೆ.23: ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈ...

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....
error: Content is protected !!