Saturday, October 3, 2026
Saturday, October 3, 2026

ಜಮಾಅತೆ ಇಸ್ಲಾಮಿ ಹಿಂದ್ ಹೂಡೆ: 26ನೇ ಮನೆ ಹಸ್ತಾಂತರ

ಜಮಾಅತೆ ಇಸ್ಲಾಮಿ ಹಿಂದ್ ಹೂಡೆ: 26ನೇ ಮನೆ ಹಸ್ತಾಂತರ

Date:

ದಾನಿಗಳ ಸಹಾಯದಿಂದ ಸೂರಿಲ್ಲದ ಕುಟುಂಬಕ್ಕೆ ಸೂರು ಒದಗಿಸುವ ಕಾರ್ಯಕ್ರಮದಡಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಅರ್ಥಿಕವಾಗಿ ಹಿಂದುಳಿದ ಜಫ್ರು ಸಾಹೇಬ್ ಎಂಬುವವರಿಗೆ ಮನೆ ಹಸ್ತಾಂತರಿಸಲಾಯಿತು. ಜಮಾಅತೆ ಇಸ್ಲಾಮಿ ಹಿಂದ್’ನ ಜಿಲ್ಲಾ ಸಂಚಾಲಕರಾದ ಶಬ್ಬೀರ್ ಮಲ್ಪೆಯವರು ಸಾಂಕೇತಿಕವಾಗಿ ಮನೆ ಮಾಲಿಕ ಜಫ್ರು ಸಾಹೇಬ್ ಅವರಿಗೆ ಮನೆಯ ಕೀಲಿಕೈ ನೀಡಿ ಹಸ್ತಾಂತರಿಸಿದರು.

ಸಂಘಟನೆಯ ವತಿಯಿಂದ ಜಾತಿ ಮತ ಧರ್ಮದ ಭೇದವಿಲ್ಲದೆ ಹಸ್ತಾಂತರಿಸಲ್ಪಡುತ್ತಿರುವ 26 ನೇ ಮನೆಯಿದಾಗಿದ್ದು ದಾನಿಗಳ ಸಹಾಯದೊಂದಿಗೆ ಈ ಕಾರ್ಯವನ್ನು ನೆರವೇರಿಸಲಾಗುತ್ತಿದೆ. ಅದರೊಂದಿಗೆ ಸಂಘಟನೆಯು ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಪ್ರಮುಖವಾಗಿ ತನ್ನ ಅಂಗ ಸಂಸ್ಥೆ ಎಚ್.ಆರ್.ಎಸ್ ಮುಖಾಂತರ ಕೋವಿಡ್ ಸಂದರ್ಭದಲ್ಲಿ ಜನ ಸೇವೆಯಲ್ಲಿ ತೊಡಗಿಸಿಕೊಂಡು ಸಾವಿರಾರು ಮಂದಿಗೆ ರೇಷನ್ ಕಿಟ್, ಆಕ್ಸಿಜನ್ ವ್ಯವಸ್ಥೆ, ಇನ್ನಿತರ ಸಹಾಯ ಮಾಡಿರುವುದರ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದ ಇದ್ರಿಸ್ ಹೂಡೆ ತಿಳಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ಹೂಡೆಯ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮೊಯ್ದಿನ್, ಶಬ್ಬೀರ್ ಮಲ್ಪೆ ಮಾತನಾಡಿ ಶುಭ ಹಾರೈಸಿದರು.

ಮಹೇಶ್ ಹೂಡೆ, ಎಚ್.ಆರ್.ಎಸ್ ಹೂಡೆಯ ಹೊಣೆಗಾರರಾದ ಝೈನುಲ್ಲಾ, ವೆಲ್ಫೇರ್ ಪಾರ್ಟಿಯ ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ರಝಾಕ್ ನಕ್ವಾ, ಮೌಲನ ತಾರೀಖ್, ಎಸ್.ಐ.ಓನ ಅಫ್ವಾನ್ ಹೂಡೆ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ನಿಯಮಿತ- ದಶಮಾನೋತ್ಸವ ಕಾರ್ಯಕ್ರಮ ಹಾಗೂ ವಾರ್ಷಿಕ ಸಾಮಾನ್ಯ ಸಭೆ

ಉಡುಪಿ, ಅ.2: ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ನಿಯಮಿತ, ಉಡುಪಿ...

ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ

ಬೆಂಗಳೂರು, ಅ.2: ಮಹಾತ್ಮ ಗಾಂಧಿ ಜಯಂತಿಯ ಅಂಗವಾಗಿ ಬೆಂಗಳೂರಿನ ಗಾಂಧಿ ಭವನದಲ್ಲಿ...

ಏಷ್ಯನ್ ಗೇಮ್ಸ್: ಭಾರತದ ಒಟ್ಟು ಪದಕಗಳ ಸಂಖ್ಯೆ 76ಕ್ಕೆ ಏರಿಕೆ; ಪದಕ ಪಟ್ಟಿಯಲ್ಲಿ ಐದನೇ ಸ್ಥಾನ

ಯು.ಬಿ.ಎನ್.ಡಿ., ಅ.2: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪದಕ...
error: Content is protected !!