ಒರೆಗಾನ್: ಇಂದು ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಪುರುಷರ ಜಾವೆಲಿನ್ ಫೈನಲ್‌ನಲ್ಲಿ ಟೋಕ್ಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದಾರೆ. ಇದು ಭಾರತಕ್ಕೆ ಐತಿಹಾಸಿಕ ಕ್ಷಣವಾಗಿದ್ದು, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡೆಯಲ್ಲಿ ಪ್ರಪ್ರಥಮ ಬೆಳ್ಳಿ ಪದಕವಾಗಿದೆ.
ನಾಲ್ಕನೇ ಪ್ರಯತ್ನದಲ್ಲಿ ನೀರಜ್ 88.13 ಮೀಟರ್ ದೂರ ಜಾವೆಲಿನ್ ಎಸೆದು 2ನೇ ಸ್ಥಾನಕ್ಕೆ ತೃಪ್ತಿಪಟ್ಟರು. 90.54 ದೂರ ಜಾವೆಲಿನ್ ಎಸೆದು ಆಂಡರ್ಸನ್ ಪೀಟರ್ಸ್ ಚಿನ್ನದ ಪದಕ ಗೆದ್ದರು.
ಪ್ರಧಾನಿ ಅಭಿನಂದನೆ: ಉತ್ತಮ ಸಾಧನೆ. ಭಾರತೀಯ ಕ್ರೀಡಾ ಲೋಕಕ್ಕೆ ಇದೊಂದು ವಿಶೇಷ ಕ್ಷಣ. ನೀರಜ್ ಅವರಿಗೆ ಭವಿಷ್ಯದಲ್ಲಿ ಮತ್ತಷ್ಟು ಯಶಸ್ಸು ಲಭಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ.