Friday, May 15, 2026
Friday, May 15, 2026

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನೌಕಾಪಡೆಯ ಎಂ.ಪಿ. ಜಬೀರ್

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನೌಕಾಪಡೆಯ ಎಂ.ಪಿ. ಜಬೀರ್

Date:

ಭಾರತೀಯ ನೌಕಾಪಡೆಯ ಎಂ.ಪಿ ಜಬೀರ್ 400 ಮೀ ಹರ್ಡಲ್ಸ್‌ ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ತನ್ಮೂಲಕ ಒಲಿಂಪಿಕ್ಸ್ ನಲ್ಲಿ 400 ಮೀ ಹರ್ಡಲ್ಸ್‌ ವಿಭಾಗದಲ್ಲಿ ಅರ್ಹತೆ ಪಡೆದ ದೇಶದ ಮೊದಲ ಪುರುಷ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 25 ವರ್ಷದ ಜಬೀರ್ ಕೇರಳದ ಮಲಪ್ಪುರಂ ಮೂಲದವರು.

ಪಟಿಯಾಲದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಅಂತರರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ನೌಕಾಪಡೆಯ ಜಬೀರ್ 400 ಮೀ ಹರ್ಡಲ್ಸ್‌ನಲ್ಲಿ 49.78 ಸೆಕೆಂಡುಗಳಲ್ಲಿ ಓಟ ಮುಗಿಸಿ ಚಿನ್ನದ ಪದಕ ಗೆಲ್ಲುವ ಮೂಲಕ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಕೇರಳದ ಪಿ.ಟಿ.ಉಷಾ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ 400 ಮೀಟರ್ ಹರ್ಡಲ್ಸ್‌ನಲ್ಲಿ ಸ್ಪರ್ಧಿಸಿದ್ದರು. ಇದೀಗ ಅದೇ ರಾಜ್ಯದ ಜಬೀರ್ ಅವರು ಒಲಿಂಪಿಕ್ಸ್‌ನಲ್ಲಿ 400 ಮೀ ಹರ್ಡಲ್ಸ್‌ನಲ್ಲಿ ಸ್ಪರ್ಧಿಸುತ್ತಿರುವುದು ಮತ್ತೊಂದು ದಾಖಲೆಯಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಎರಡನೇ ಆವೃತ್ತಿಯ ಎಸ್.ಆರ್.ಎಸ್ ಪ್ರೀಮಿಯರ್ ಲೀಗ್ 2026

ಬಾರಕೂರು, ಮೇ 15: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ...

ಗೋಪಾಲಪುರ ಗರಡಿಮಜಲು ರಸ್ತೆಯ ಬದಿ ನಿರಂತರವಾಗಿ ತ್ಯಾಜ್ಯ ಎಸೆಯುವ ಕಿಡಿಗೇಡಿಗಳು

ಉಡುಪಿ, ಮೇ 14: ಉಡುಪಿ ಜಿಲ್ಲೆ ಸ್ವಚ್ಛತೆಯಲ್ಲಿ ರಾಜ್ಯಮಟ್ಟದಲ್ಲೇ ಹೆಸರು ಗಳಿಸಿದೆ....

ಶ್ರೀಕೃಷ್ಣ ಮಠಕ್ಕೆ ಆನಂದ ಗುರೂಜಿ ಭೇಟಿ

ಉಡುಪಿ, ಮೇ 14: ಜೀ ಕನ್ನಡ ವಾಹಿನಿಯ ಮಹರ್ಷಿವಾಣಿ ಖ್ಯಾತಿಯ ಡಾ....

ಕಾಳಾವರ ವರದರಾಜ ಕಾಲೇಜು ವಾರ್ಷಿಕೋತ್ಸವ

ಕೋಟೇಶ್ವರ, ಮೇ 14: ದೃಢತೆಯಿಂದ ಕೂಡಿದ ಅವಿರತವಾದ ಪರಿಶ್ರಮ, ತಾಳ್ಮೆ ಮತ್ತು...
error: Content is protected !!