Sunday, January 19, 2025
Sunday, January 19, 2025

ಲಾರ್ಡ್ಸ್: ಭಾರತಕ್ಕೆ ಶರಣಾದ ಇಂಗ್ಲೆಂಡ್

ಲಾರ್ಡ್ಸ್: ಭಾರತಕ್ಕೆ ಶರಣಾದ ಇಂಗ್ಲೆಂಡ್

Date:

ಲಾರ್ಡ್ಸ್: (ಉಡುಪಿ ಬುಲೆಟಿನ್ ವರದಿ) ಇಂಗ್ಲೆಂಡ್ ವಿರುದ್ಧ ಅವರ ನೆಲದಲ್ಲೇ ಭಾರತ ಅಭೂತಪೂರ್ವ ಪ್ರದರ್ಶನ ನೀಡುವ ಮೂಲಕ 151 ರನ್ನುಗಳ ಭರ್ಜರಿ ಜಯಗಳಿಸಿದೆ. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 364 ರನ್ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿ ಡಿಕ್ಲೇರ್ ಮಾಡಿತು.

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 391 ರನ್ ಗಳಿಸಿ ಎರಡನೇ ಇನ್ನಿಂಗ್ಸ್ ನಲ್ಲಿ 120 ರನ್ನುಗಳಿಗೆ ಸರ್ವಪತನವಾಗುವ ಮೂಲಕ ತವರಿನ ನೆಲ ಕ್ರಿಕೆಟ್ ಕಾಶಿ ಎಂದೇ ಖ್ಯಾತಿ ಪಡೆದ ಲಾರ್ಡ್ಸ್ ನಲ್ಲಿ ಭಾರತಕ್ಕೆ ಶರಣಾಯಿತು. ತನ್ಮೂಲಕ ಭಾರತ ಕ್ರಿಕೆಟ್ ತಂಡ ವಿಶೇಷ ರೀತಿಯಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಗಿಫ್ಟ್ ನೀಡಿದೆ.

ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತಕ್ಕೆ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಆರಂಭಿಕ ಆಘಾತದಿಂದ ಪಾರು ಮಾಡಿದರೂ 194 ರನ್ ಆಗುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಭಾರತ ಸೋಲಿನ ಭೀತಿಯಲ್ಲಿತ್ತು.

ಆಗ ತಂಡಕ್ಕೆ ಆಪತ್ಬಾಂಧವನಾಗಿ ಬಂದಿದ್ದು ಮಹಮ್ಮದ್ ಶಮಿ. ಅಪ್ಪಟ ಬ್ಯಾಟ್ಸ್ಮೆನ್ ರೀತಿಯಲ್ಲಿ ಆಟವಾಡಿದ ಶಮಿ ಇಂಗ್ಲೆಂಡ್ ಬೌಲರ್ ಗಳನ್ನು ಮನಸೋಇಚ್ಚೆ ದಂಡಿಸಿದರು. 70 ಎಸೆತಗಳನ್ನು ಎದುರಿಸಿದ ಶಮಿ 6 ಬೌಂಡರಿ ಮತ್ತು ಒಂದು ಮೆಗಾ ಸಿಕ್ಸರ್ ಮೂಲಕ ಅಜೇಯ 56 ರನ್ ಗಳಿಸಿದರು. ಸಿಕ್ಸರ್ ಬಾರಿಸಿ ಮಹಮ್ಮದ್ ಶಮಿ ತನ್ನ ಅರ್ಧಶತಕ ಗಳಿಸಿ ಅಭಿಮಾನಿಗಳನ್ನು ರಂಜಿಸಿದರು.

ಶಮಿಗೆ ಸಾಥ್ ನೀಡಿದ್ದ ಬುಮ್ರಾ. ಇಬ್ಬರು ಬೌಲರ್ ಗಳಾದರೂ ಆರಂಭಿಕ ದಾಂಡಿಗರಂತೆ ಬ್ಯಾಟ್ ಬೀಸಿದರು. ಜಸ್ಪ್ರೀತ್ ಬುಮ್ರಾ 64 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ ಅಜೇಯ 34 ರನ್ ಗಳಿಸಿದರು. ಇಬ್ಬರು 9ನೇ ವಿಕೆಟಿಗೆ 89 ರನ್ನುಗಳ ದಾಖಲೆ ಜೊತೆಯಾಟ ನೀಡಿ ಪಂದ್ಯವನ್ನು ಸಂಪೂರ್ಣವಾಗಿ ಭಾರತದತ್ತ ತಿರುಗಿಸಿದರು.

ಗೆಲುವಿನ ಗುರಿಯನ್ನು ಬೆನ್ನಟ್ಟಲು ಸಜ್ಜಾದ ಆಂಗ್ಲರಿಗೆ ಆರಂಭದಲ್ಲೇ ಶಮಿ, ಸಿರಾಜ್, ಇಶಾಂತ್ ಮತ್ತು ಬುಮ್ರಾ ಮರ್ಮಾಘಾತ ನೀಡಿದರು. 67 ರನ್ ಆಗುವಷ್ಟರಲ್ಲಿ 5 ಪ್ರಮುಖ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ದಯನೀಯ ಸ್ಥಿತಿಯಲ್ಲಿತ್ತು. ಜೊ ರೂಟ್ ಅತ್ಯಧಿಕ 33 ರನ್ ಗಳಿಸಿದು ಬಿಟ್ಟರೆ, ಉಳಿದಂತೆ ಇಂಗ್ಲೆಂಡ್ ಆಟಗಾರರು ಒಂದಂಕಿ ಗಳಿಸಿ ಪೆವಿಲಿಯನ್ ಸೇರಿದರು.

ಅಂತಿಮವಾಗಿ ಇಂಗ್ಲೆಂಡ್ 120ಕ್ಕೆ ಸರ್ವಪತನವಾಯಿತು. ಮೊಹಮ್ಮದ್ ಸಿರಾಜ್ 4, ಬುಮ್ರಾ 3 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಶತಕ ಗಳಿಸಿದ ಕೆ.ಎಲ್. ರಾಹುಲ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!