Tuesday, March 24, 2026
Tuesday, March 24, 2026

48 ವರ್ಷಗಳ ಬಳಿಕ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ವಿಶ್ವಕಪ್ ವಿಜೇತ ತಂಡ

48 ವರ್ಷಗಳ ಬಳಿಕ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ವಿಶ್ವಕಪ್ ವಿಜೇತ ತಂಡ

Date:

ಹರಾರೆ, ಜು.2: ಹರಾರೆಯಲ್ಲಿ ಶನಿವಾರ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಕ್ವಾಲಿಫೈಯರ್ ಸೂಪರ್ ಸಿಕ್ಸ್ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ತಂಡವು ಏಳು ವಿಕೆಟ್ ಗಳ ಸೋಲನುಭವಿಸಿತು. ಈ ಸೋಲಿನಿಂದಾಗಿ ವೆಸ್ಟ್ ಇಂಡೀಸ್ ತನ್ನ 48 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್ ನಿಂದ ಹೊರಬಿದ್ದಿದೆ. ವೆಸ್ಟ್ ಇಂಡೀಸ್ ನೀಡಿದ್ದ 182 ರನ್ ಗಳ ಗುರಿಯನ್ನು ಮ್ಯಾಥ್ಯೂ ಕ್ರಾಸ್ (ಔಟಾಗದೆ 74) ಮತ್ತು ಬ್ರಾಂಡನ್ ಮೆಕ್ ಮುಲ್ಲನ್ (69) ಅವರ ಅರ್ಧಶತಕಗಳ ನೆರವಿನಿಂದ ಸ್ಕಾಟ್ಲೆಂಡ್ ಬೆನ್ನಟ್ಟಿತು.

ಕ್ಲೈವ್ ಲಾಯ್ಡ್ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ 1975 ಮತ್ತು 1979 ರಲ್ಲಿ ವಿಶ್ವಕಪ್ ನ್ ಮೊದಲ ಎರಡು ಆವೃತ್ತಿಗಳನ್ನು ಗೆದ್ದಿತ್ತು ಮತ್ತು 1983 ರಲ್ಲಿ ಭಾರತದ ವಿರುದ್ಧ ರನ್ನರ್ಸ್ ಅಪ್ ಸ್ಥಾನ ಪಡೆಯಿತು. 1996 ರಲ್ಲಿ ವೆಸ್ಟ್ ಇಂಡೀಸ್ ವಿಶ್ವಕಪ್ನ ಸೆಮಿಫೈನಲ್ ತಲುಪಿದನ್ನು ಇಲ್ಲಿ ಸ್ಮರಿಸಬಹುದು. ವೆಸ್ಟ್ ಇಂಡೀಸ್ 2011 ಮತ್ತು 2015 ರ ವಿಶ್ವಕಪ್ಗಳಲ್ಲಿ ಕ್ವಾರ್ಟರ್ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿತ್ತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಆಸ್ಟ್ರೋ ಮೋಹನ್ ಅವರಿಗೆ ಅಂತರರಾಷ್ಟ್ರೀಯ ಗೌರವ

ಉಡುಪಿ, ಮಾ.23: ಅಂತರರಾಷ್ಟ್ರೀಯ ಖ್ಯಾತಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕರು ಹಾಗೂ ಕ್ಯಾನನ್ ಇಓಎಸ್...

ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಪೂರೈಸಲು ನೂತನ ವ್ಯವಸ್ಥೆ

ಬೆಂಗಳೂರು, ಮಾ.23: ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಪೂರೈಸಲು ನೂತನ ವ್ಯವಸ್ಥೆ ರೂಪಿಸಲಾಗಿದೆ...

ಅಡಿಕೆ ಹಾನಿಕಾರಕವಲ್ಲ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

ಬೆಂಗಳೂರು, ಮಾ.23: ಅಡಿಕೆ ಮತ್ತು ಅಡಿಕೆ ಹಾಳೆಯು ಕ್ಯಾನ್ಸರ್ ಕಾರಕ ಎಂಬುದರ...

ಸ್ವಸ್ಥ ಸಮಾಜ ನಿರ್ಮಾಣಕ್ಕೆ ಅವಿರತ ಶ್ರಮ ವಹಿಸಿದ ದೇವರ ದಾಸಿಮಯ್ಯ: ಎಂ.ಎ.ಗಫೂರ್

ಉಡುಪಿ, ಮಾ.23: ಹನ್ನೊಂದನೇ ಶತಮಾನದ ಆದ್ಯ ವಚನಕಾರ, ನೇಕಾರ ಸಮುದಾಯದ ಆರಾಧ್ಯ...
error: Content is protected !!