ನಾಳೆಯಿಂದ (ಜೂನ್ 15) ಜೂನ್ 19ರವರೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಹಲವೆಡೆ ಗುಡುಗು ಸಹಿತ ಭಾರಿ ಗಾಳಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ 15 ಮತ್ತು 16ರಂದು 204.5 ಮಿಮೀ ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಜೂನ್ 17 ಹಾಗೂ 18ರಂದು 115.6 ರಿಂದ 204.4 ಮಿಮಿವರೆಗೆ ಮಾಳೆಯಾಗಲಿದೆ. ಜೂನ್ 19ರಂದು 64.5ಮಿಮೀ ರಿಂದ 115.5 ಮಿಮೀವರೆಗೆ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ.
ಸೋಮವಾರ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು ಮುಂಗಾರು ಮತ್ತಷ್ಟು ಚುರುಕು ಪಡೆದುಕೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಸೋಮವಾರದಿಂದ ಅನ್ ಲಾಕ್ ಆರಂಭಗೊಂಡರೂ ವರುಣನ ಆರ್ಭಟದಿಂದ ಹೆಚ್ಚಿನ ಜನರು ರಸ್ತೆಗೆ ಇಳಿಯಲಿಲ್ಲ.