ಸಿಡ್ನಿ, ಡಿ.21: ಕಳೆದ ವಾರದ ಬೋಂಡಿ ಬೀಚ್ ದಾಳಿಯ ನಂತರ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಪೊಲೀಸ್ ಮತ್ತು ರಾಷ್ಟ್ರೀಯ ಗುಪ್ತಚರ ಸಂಸ್ಥೆಗಳ ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಿದ್ದಾರೆ. ಸಿಡ್ನಿ ಬೀಚ್‌ನಲ್ಲಿ ನಡೆದ ಯಹೂದಿ ಉತ್ಸವದಲ್ಲಿ ಇಬ್ಬರು ಬಂದೂಕುಧಾರಿಗಳು ಗುಂಡು ಹಾರಿಸಿದ ನಂತರ ಸಾವನ್ನಪ್ಪಿದ 15 ಜನರಿಗೆ ಸಂತಾಪ ಸೂಚಿಸುವ ಸಭೆಯ ನಂತರ ಉಗ್ರವಾದವನ್ನು ಮಟ್ಟ ಹಾಕಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಪ್ರಧಾನಿ ಸೂಚನೆ ನೀಡಿದ್ದು, ಬಂದೂಕು ನಿಯಂತ್ರಣಗಳನ್ನು ಬಿಗಿಗೊಳಿಸುವ ಯೋಜನೆಗಳನ್ನು ಘೋಷಿಸಿದ್ದಾರೆ ಮತ್ತೊಂದೆಡೆ ದ್ವೇಷ ಭಾಷಣವನ್ನು ಹತ್ತಿಕ್ಕಲು ಸರ್ಕಾರ ಮುಂದಾಗಿದೆ.
ಉಗ್ರವಾದ ಮಟ್ಟಹಾಕಲು ಸಜ್ಜಾಗಿ: ಆಸ್ಟ್ರೇಲಿಯಾ ಪ್ರಧಾನಿ
ಉಗ್ರವಾದ ಮಟ್ಟಹಾಕಲು ಸಜ್ಜಾಗಿ: ಆಸ್ಟ್ರೇಲಿಯಾ ಪ್ರಧಾನಿ
Date:




By
ForthFocus™