ಕಠ್ಮಂಡು: 22 ಪ್ರಯಾಣಿಕರಿದ್ದ ವಿಮಾನವೊಂದು ಸಂಪರ್ಕ ಕಳೆದುಕೊಂಡ ಘಟನೆ ನೇಪಾಳದ ಮುಸ್ತಾಂಗ್ ನಲ್ಲಿ ಸಂಭವಿಸಿದೆ.
ಮೂವರು ಕ್ರಿವ್ ಸಿಬ್ಬಂದಿ ಸಹಿತ 22 ಮಂದಿಯೊಂದಿಗೆ ಪೋಖರಾದಿಂದ ನೇಪಾಳದ ಜೋಮ್ಸೋಮ್ ಗೆ ಇಂದು ಬೆಳಿಗ್ಗೆ 9.55 ಗಂಟೆಗೆ ಟೇಕ್ ಆಫ್ ಆದ ತಾರಾ ಏರ್‌ನ 9 NAET ಅವಳಿ-ಎಂಜಿನ್ ವಿಮಾನವು ಸ್ವಲ್ಪ ಸಮಯದ ನಂತರ ರಾಡಾರ್ ನಿಂದ ಸಂಪರ್ಕ ಕಳೆದುಕೊಂಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನವನ್ನು ಪತ್ತೆ ಹಚ್ಚಲು ಹೆಲಿಕಾಪ್ಟರ್ ಕಳುಹಿಸಲಾಗಿದೆ.
ನಾಪತ್ತೆಯಾಗಿರುವ ವಿಮಾನದಲ್ಲಿ ಪ್ರಯಾಣಿಕರ ಪೈಕಿ ನಾಲ್ವರು ಭಾರತೀಯರು ಹಾಗೂ ಇಬ್ಬರು ವಿದೇಶಿ ಪ್ರಜೆಗಳಿದ್ದಾರೆ.
ವಿಮಾನ ಪತನ?
ಪೊಲೀಸ್ ಮೂಲಗಳ ಪ್ರಕಾರ ಹಲವಾರು ಪರ್ವತ ಶ್ರೇಣಿಗಳಿರುವ ಮುಸ್ತಾಂಗ್ ಜಿಲ್ಲೆಯ ಟಿತಿ ಪ್ರದೇಶದಲ್ಲಿ ವಿಮಾನ ಪತನಗೊಂಡಿರಬಹುದು ಎಂದು ಹೇಳಲಾಗುತ್ತಿದ್ದು, ಅಲ್ಲಿಯ ಸ್ಥಳೀಯರಿಗೆ ಸದ್ದು ಕೇಳಿಸಿದೆ ಎನ್ನಲಾಗುತ್ತಿದೆ.
ಇಂದು ನಾಪತ್ತೆಯಾದ ನೇಪಾಳಿ ವಿಮಾನಕ್ಕೆ ಸಂಬಂಧಿಸಿದಂತೆ ಕಠ್ಮಂಡುವಿನಲ್ಲಿನ ಭಾರತದ ರಾಯಭಾರ ಕಚೇರಿ ತುರ್ತು ಹಾಟ್‌ಲೈನ್ ಸಂಖ್ಯೆ +977-9851107021 ಅನ್ನು ತೆರೆದಿದೆ.