Home ಸುದ್ಧಿಗಳು ಪ್ರಾದೇಶಿಕ ಬಂದರಿನಲ್ಲಿ ದುಡಿಮೆಯೊಂದಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದ ಪುನೀತ್ ಸಾಧನೆ ಶ್ಲಾಘನೀಯ: ಯಶ್ಪಾಲ್ ಸುವರ್ಣ

ಬಂದರಿನಲ್ಲಿ ದುಡಿಮೆಯೊಂದಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದ ಪುನೀತ್ ಸಾಧನೆ ಶ್ಲಾಘನೀಯ: ಯಶ್ಪಾಲ್ ಸುವರ್ಣ

801
0

ಉಡುಪಿ: ಮಲ್ಪೆ ಮೀನುಗರಿಕಾ ಬಂದರಿನಲ್ಲಿ ಮುಂಜಾನೆ ಕೆಲಸ ಮಾಡಿ ಮಲ್ಪೆ ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿದ ಪುನೀತ್ ಸಾಧನೆ ಶ್ಲಾಘನೀಯ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಹೇಳಿದರು.

ಮೀನು ಮಾರಾಟ ಫೆಡರೇಷನ್ ಹಂಗಾರಕಟ್ಟೆ ಶಾಖೆಯ ಬ್ಯಾಂಕಿಂಗ್ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ಪುನೀತ್ ರವರನ್ನು ಫೆಡರೇಶನ್ ವತಿಯಿಂದ ಮುಂದಿನ ವಿದ್ಯಭ್ಯಾಸಕ್ಕಾಗಿ ರೂ. 25000 ಮೊತ್ತದ ಚೆಕ್ ನೀಡಿ ಸನ್ಮಾನಿಸಿ ಮಾತನಾಡಿದರು.

ಸಮಾರಂಭದಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ ಕುಂದರ್, ರಾಜ್ಯದ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್,ಐರೋಡಿ ಗ್ರಾ.ಪಂ ಅಧ್ಯಕ್ಷೆ ಗೀತಾ ಶೆಟ್ಟಿ, ಯಾಂತ್ರಿಕೃತ ಮೀನುಗಾರ ಸಂಘ ಹಂಗಾರಕಟ್ಟೆ -ಕೋಡಿ ಬೇಂಗ್ರೆ ಅಧ್ಯಕ್ಷ ಬಿ.ಬಿ. ಕಾಂಚನ್, ಹಂಗಾರಕಟ್ಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಬಿ.ಕೇಶವ ಕುಂದರ್, ಕೋಡಿಬೇಂಗ್ರೆ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಜಯ ಎಸ್ ಕುಂದರ್, ಕೋಡಿಬೇಂಗ್ರೆ ವಿಠ್ಠಲ ರುಖುಮಾಯಿ ದೇವಸ್ಥಾನದ ಅಧ್ಯಕ್ಷ ಚಂದ್ರ ಕುಂದರ್, ಕೋಡಿ ಬೇಂಗ್ರೆ ಶ್ರೀ ದುರ್ಗಾದೇವಿ ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಚಂದ್ರಶೇಖರ್ ನಾಯ್ಕ್, ಐರೋಡಿ ಬಾಳೆಕುದ್ರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಕೃಷ್ಣಪ್ಪ ಬೆನ್ನು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.