Friday, July 24, 2026
Friday, July 24, 2026

ಅಂತರರಾಷ್ಟ್ರೀಯ ಸಹಕಾರವೇ ಕೋವಿಡ್ ಸವಾಲಿಗೆ ಉತ್ತರ: ವಿದೇಶಾಂಗ ಸಚಿವ

ಅಂತರರಾಷ್ಟ್ರೀಯ ಸಹಕಾರವೇ ಕೋವಿಡ್ ಸವಾಲಿಗೆ ಉತ್ತರ: ವಿದೇಶಾಂಗ ಸಚಿವ

Date:

ಕೋವಿಡ್ ಸವಾಲಿಗೆ ಅಂತರರಾಷ್ಟ್ರೀಯ ಸಹಕಾರವೇ ಉತ್ತರ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಹೇಳಿದ್ದಾರೆ. ಮಂಗಳವಾರ ಇಟಲಿಯ ಮಾಟೆರಾದಲ್ಲಿ ನಡೆದ ಜಿ 20 ವಿದೇಶಾಂಗ ಮಂತ್ರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಸಮಾನವಾದ ಗುರಿಗಳನ್ನು ಹೊಂದಿರುವ ರಾಷ್ಟ್ರಗಳು ಒಗ್ಗಟ್ಟಿನ ಪ್ರಯತ್ನಗಳನ್ನು ನಡೆಸುತ್ತಿವೆ.

ಇದು ಸದ್ಯದ ಪರಿಸ್ಥಿತಿಯಲ್ಲಿ ಅತ್ಯಂತ ಮಹತ್ವಪೂರ್ಣವಾಗಿದೆ. ಲಸಿಕೆಗಳು, ಔಷಧಿಗಳು, ಪಿಪಿಇ ಅಥವಾ ಆಮ್ಲಜನಕ ಹೀಗೆ ದೇಶಗಳ ನಡುವೆ ಪರಸ್ಪರ ಸಹಕಾರದಿಂದ ಇಂದಿನ ಸಂದಿಗ್ಧ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ವಾತಾವರಣ ನಿರ್ಮಾಣವಾಗಿದೆ. ಸುಧಾರಣೆಗಳು ಹಲವು ರೂಪಗಳನ್ನು ಹೊಂದಿವೆ. ಲಸಿಕೆಗಳನ್ನು ಸಮಾನವಾಗಿ ಹಂಚಿಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಗಮನವನ್ನು ನೀಡುವ ಅಗತ್ಯತೆಯಿದೆ.

ಉತ್ಪಾದನೆ, ಆಹಾರ ಮತ್ತು ಆರೋಗ್ಯ ಸೇರಿದಂತೆ ನೈಜ ಆರ್ಥಿಕತೆಗೆ ವಿಕೇಂದ್ರೀಕೃತ ಜಾಗತೀಕರಣದ ಅಗತ್ಯವಿದೆ. ಜಾಗತಿಕ ಮಟ್ಟದ ಪೂರೈಕೆ ವಿಚಾರದಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ಸಚಿವ ಜೈಶಂಕರ್ ಒತ್ತಿ ಹೇಳಿದರು.

ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರನ್ನು ವಿದೇಶಾಂಗ ಸಚಿವ ಜೈಶಂಕರ್ ಭೇಟಿಯಾಗಿ ಮಾತುಕತೆ ನಡೆಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತ್ರಿಶಾ ವಿದ್ಯಾ ಕಾಲೇಜು: ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮ

ಕಟಪಾಡಿ, ಜು.23: ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಅಂಡ್...

ಶೈಕ್ಷಣಿಕ ಬದುಕಿನ ಅರ್ಥವನ್ನು ಅರಿತುಕೊಳ್ಳಿ: ವಿದ್ಯಾರ್ಥಿಗಳಿಗೆ ಡಾ. ಕೆ. ಉಮೇಶ್ ಶೆಟ್ಟಿ ಕರೆ

ಕುಂದಾಪುರ, ಜು.23: ವಿದ್ಯಾರ್ಥಿಗಳು ಪಠ್ಯಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಧನಾತ್ಮಕವಾಗಿ ಚಿಂತಿಸಿ,...

ಕಟ್ಟಡ ಕಾಮಗಾರಿ ಕೆಲಸ ನಿರ್ವಹಿಸುತ್ತಿದ್ದ ಬಾಲ ಕಾರ್ಮಿಕನ ರಕ್ಷಣೆ

ಉಡುಪಿ, ಜು.23: ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರ್ ಗ್ರಾಮದಲ್ಲಿ ನಡೆಯುತ್ತಿರುವ ಕಟ್ಟಡ...
error: Content is protected !!