ವಾಷಿಂಗ್ಟನ್, ಮಾ. 20: ಅಮೆಜಾನ್ ನಲ್ಲಿ ಉದ್ಯೋಗದಲ್ಲಿರುವ ಸುಮಾರು 9000 ನೌಕರರನ್ನು ಮನೆಗೆ ಕಳುಹಿಸಲು ಕಂಪನಿ ತಯಾರಿ ನಡೆಸುತ್ತಿದೆ. ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಅವರು ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ದೀರ್ಘಾವಧಿಯಲ್ಲಿ ಕಂಪನಿಯ ಯಶಸ್ಸಿಗೆ ಇದು ಪೂರಕ ಎಂದಿದ್ದಾರೆ. ಜನವರಿ ತಿಂಗಳಲ್ಲಿ ಕಂಪನಿ ತನ್ನ 18,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದನ್ನು ಇಲ್ಲಿ ಸ್ಮರಿಸಬಹುದು.
ಯಾರಿಗೆ ತೊಂದರೆ?: ಮುಂದಿನ ವಾರದಿಂದಲೇ ಈ ಪ್ರಕ್ರಿಯೆ ಆರಂಭವಾಗಲಿದ್ದು, ಅಮೆಜಾನ್ ವೆಬ್ ಸರ್ವಿಸಸ್, ಪೀಪಲ್ ಎಕ್ಸ್ ಪೀರಿಯನ್ಸ್ ಆಂಡ್ ಟೆಕ್ನಾಲಜಿ ಸೊಲ್ಯುಶನ್ಸ್, ಅಡ್ವರ್ಟೈಸಿಂಗ್ ಆಂಡ್ ಟ್ವಿಚ್ ವಿಭಾಗದ ನೌಕರರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇದು ಅತ್ಯಂತ ಕಟಿಲ ನಿರ್ಧಾರವಾಗಿದೆ, ಆದರೆ ಈ ನಿರ್ಧಾರದಿಂದ ಕಂಪನಿಗೆ ದೀರ್ಘಾವಧಿಯಲ್ಲಿ ಪೂರಕವಾಗಲಿದೆ ಎಂದು ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಹೇಳಿದ್ದಾರೆ.