Home ಓದುಗರ ಮನದಾಳ ಹ್ವಾಯ್ ನಾವ್ ಕುಂದಾಪ್ರದವ್ರ್

ಹ್ವಾಯ್ ನಾವ್ ಕುಂದಾಪ್ರದವ್ರ್

1487
0

ನಮ್ದ್ ನೆಲ ನಮ್ದ್ ಜಲ
ನಾಲ್ಕ್ ತಾಲೂಕಿತ್ತ್- ಕುಂದಾಪ್ರ, ಬೈಂದೂರ್, ಬ್ರಹ್ಮಾವರ, ಹೆಬ್ರಿ.
ಆಡು ಭಾಷೆಯೊಂದ್ ಕುಂದಗನ್ನಡ
ಒಂದೇ ತಾಯಿಯ ಮಕ್ಳ್ ನಾವ್ ನಾಲ್ಕ್ ಕಡೆಯವ್ರ್.

ಎಲ್ ಹೋರೂ ನಾವ್ ಕುಂದಾಪ್ರ ಬದಿಯವ್ರ್
ತಿರ್ಗಾಟ ಮಾಡೋರ್ಗೆ ಸ್ವರ್ಗವಿದು ನಮ್ಮೂರ್
ಸೋಮೇಶ್ವರ, ಸೌಪರ್ಣಿಕಾ, ಮರವಂತೆ, ಕೊಲ್ಲೂರ್
ದೇವಾಲಯಗಳ ಬೀಡು ಬಾರ್ಕೂರ್
ಸಂಸ್ಕೃತಿ ಸಾಹಿತ್ಯದ ನೆಲೆವೀಡು ನಮ್ಮೂರ್
ಅಡಿಗರು, ಕಾರಂತರು ಸಾಹಿತ್ಯಕೆ ಮೆರುಗು ತಂದವ್ರ್
ಇವರೆಲ್ಲ ನಮ್ಮವ್ರ್.

ಒಂದೆಡೆ ಗಿರಿ ಶಿಖರ ಮತ್ತೊಂದೆಡೆ ನದಿ ಸಮುದ್ರಗಳ ಸಂಗಮ ಸ್ಥಳ
ಇದು ನಮ್ ಕುಂದಾಪ್ರ್.
ನಮ್ದ್ ಊರ್ ನೆಮ್ಮದಿಯ ಊರ್
ಆಸಾಡಿ, ಸ್ವಾಣಿ ಹಬ್ಬಗಳಂತೂ ಜೋರ್.

ಕೊಡಿ ಹಬ್ಬ, ತೇರು, ಜಾತ್ರೆ, ದೈವ ದೇವರ ಹರ್ಕೆ
ಬಹಳ ನಂಬಿಕೆ ಇಲ್ಲಿ ನಮ್ ಜನಕೆ.
ಯಕ್ಷಗಾನದ ರಾತ್ರಿ ಕಣ್ತುಂಬಿಕೊಳ್ಳುವ ಬಯ್ಕೆ
ಕಂಬಳವೆಂಬುವುದು ನಮ್ ಜನಗಳ ಪ್ರತಿಷ್ಠೆ
ನಮ್ದ್ ನೆಲ ನಮ್ದ್ ಜಲ
ನಾವ್ ಕುಂದಗನ್ನಡಿಗರೆಂಬುದೇ ನಮ್ಗೆ ಹೆಮ್ಮೆ.

-ರವಿರಾಜ್ ಬೈಂದೂರು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.