ವಾಯುವಿಹಾರ ವ್ಯಾಯಾಮದ ಒಂದು ಭಾಗವಾಗಿದೆ. ಹೆಚ್ಚಿನ ಜನರು ಇದನ್ನು ಮಾಡುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಬೆಳಗಿನ ವಾಯುವಿಹಾರ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಅದ್ಭುತ ಪರಿಣಾಮಗಳನ್ನು ಬೀರುತ್ತದೆ.
ಬೆಳಿಗ್ಗೆ ವಾಕಿಂಗ್ ಗೆ ಎದ್ದು ಹೊರಡುವುದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಉತ್ತಮವಾಗಿದೆ. ಹೆಚ್ಚಿನ ಅಧ್ಯಯನಗಳ ಪ್ರಕಾರ, 20 ರಿಂದ 30 ನಿಮಿಷಗಳು ಅಥವಾ ಅದಕ್ಕಿಂತ ಹೆಚ್ಚು ವಾಕಿಂಗ್ ಉತ್ತಮ ಫಲಿತಾಂಶಗಳನ್ನು ತೋರಿಸುತ್ತದೆ. ಪ್ರತಿ ವಾರ 5 ದಿನ ಅಥವಾ ಅದಕ್ಕಿಂತ ಹೆಚ್ಚು ವಾಕಿಂಗ್ ಉತ್ತಮ.
ಮುಂಜಾನೆ ನಿಯಮಿತ ವಾಯುವಿಹಾರದಿಂದ ಉಂಟಾಗುವ ಲಾಭಗಳು:
* ಪ್ರತಿನಿತ್ಯ ವಾಕಿಂಗ್ ಮಾಡುವುದರಿಂದ ನಮ್ಮಲ್ಲಿರುವ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ತನ್ಮೂಲಕ ಶೀತ ಅಥವಾ ಜ್ವರ ಬರುವ ಅಪಾಯವನ್ನು ಕಡಿಮೆ ಮಾಡುತ್ತದೆ. ದಿನಕ್ಕೆ ಕನಿಷ್ಠ 20 ನಿಮಿಷಗಳು, ವಾರದಲ್ಲಿ 5 ದಿನಗಳು ನಿಯಮಿತವಾಗಿ ವಾಯುವಿಹಾರ ಮಾಡುವವರಲ್ಲಿ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ 43% ಕಡಿಮೆ. ಒಂದು ವೇಳೆ ಆರೋಗ್ಯ ಕೈಕೊಟ್ಟರೂ ಗುಣಲಕ್ಷಣಗಳು ಅಷ್ಟೊಂದು ಭೀಕರವಾಗಿರುವುದಿಲ್ಲ ಎಂದು ಅಧ್ಯಯನಗಳು ಪ್ರತಿಪಾದಿಸಿವೆ.
* ಬೆಳಗಿನ ವಾಕಿಂಗ್ ನಿಮ್ಮ ದಿನವನ್ನು ಉತ್ತಮ ಮನಸ್ಥಿತಿಯಲ್ಲಿ ಆರಂಭಿಸಲು ಸಹಕರಿಸುತ್ತದೆ. ವಾಯುವಿಹಾರದಿಂದ ನಮ್ಮಲ್ಲಿರುವ ಸೃಜನಶೀಲತೆಗೆ ಹೆಚ್ಚುತ್ತದೆ. ಒಟ್ಟಾರೆ ಉತ್ತಮ ಮನಸ್ಥಿತಿಗೆ ಕಾರಣವಾಗುತ್ತದೆ.
* ನೀವು ನಡೆಯುವಾಗ, ನಿಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ ಮತ್ತು ಇದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದು ಕಾಲಾನಂತರದಲ್ಲಿ ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಒಟ್ಟಾರೆ ಪರಿಚಲನೆಗೆ ಸಹಾಯ ಮಾಡುತ್ತದೆ. ನೀವು ದಿನಕ್ಕೆ 2 ಮೈಲುಗಳಷ್ಟು ನಡೆಯುವುದರ ಮೂಲಕ ಸ್ಟ್ರೋಕ್ ಅಪಾಯವನ್ನು ಕಡಿಮೆ ಮಾಡಬಹುದು.
* ನೀವು ನಡೆಯುವಾಗ ನಿಮ್ಮ ಕೀಲುಗಳು ಕ್ರಿಯಾಶೀಲಗೊಂಡು ತನ್ಮೂಲಕ ಕೀಲುಗಳಿಗೆ ಹೆಚ್ಚಿನ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪಡೆಯಲು ಅನುವು ಮಾಡಿಕೊಡುವುದರಿಂದ ಅವುಗಳ ಕಾರ್ಯನಿರ್ವಹಣೆಗೆ ಪೂರಕ ವಾತಾವರಣ ಉಂಟಾಗುತ್ತದೆ.
ಇತರೆ ಲಾಭಗಳು:
* ಮನಸ್ಸು ಆಹ್ಲಾದಕರವಾಗುತ್ತದೆ.
* ಹೃದ್ರೋಗ, ಪಾರ್ಶ್ವವಾಯು, ಮಧುಮೇಹ ಮತ್ತು ಕ್ಯಾನ್ಸರ್ ರೋಗದ ಭೀತಿಯನ್ನು ಕಡಿಮೆ ಮಾಡುತ್ತದೆ.
* ಮೈಯಲ್ಲಿ ಅದಮ್ಯ ಶಕ್ತಿಯ ಸಂಚಾರ ಉಂಟಾಗುತ್ತದೆ.
* ನೆನಪಿನ ಶಕ್ತಿಯನ್ನು ಚುರುಕುಗೊಳ್ಳುತ್ತದೆ.
* ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಬಲಪಡಿಸುತ್ತದೆ.
* ತೂಕ ಹೆಚ್ಚಾಗುವುದನ್ನು ತಡೆಯುತ್ತದೆ, ಕಾಲು ಮತ್ತು ಹೊಟ್ಟೆಯ ಸ್ನಾಯುಗಳನ್ನು ಉತ್ತಮ ಸ್ಥಿತಿಯಲ್ಲಿಡುತ್ತದೆ.
-ಸಂಪಾದಕ
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
[email protected]