Wednesday, January 22, 2025
Wednesday, January 22, 2025

ದೇಹಕ್ಕೆ ಪೋಷಣೆ, ಚೈತನ್ಯ ನೀಡುವ ಚಿಕ್ಕು

ದೇಹಕ್ಕೆ ಪೋಷಣೆ, ಚೈತನ್ಯ ನೀಡುವ ಚಿಕ್ಕು

Date:

ಸಪೋಟ ಹಣ್ಣು (ಚಿಕ್ಕು ಹಣ್ಣು ) ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗಿದೆ. ಇದರಲ್ಲಿರುವ ಆರೋಗ್ಯ ಲಾಭಗಳ ಬಗ್ಗೆ ತಿಳಿಯೋಣ.

ಜ್ಯೂಸ್ ಕುಡಿಯಲು ಹೋದರೆ ಹೆಚ್ಚಾಗಿ ಜನರು ಇಷ್ಟಪಡುವಂತಹ ಜ್ಯೂಸ್ ಎಂದರೆ ಅದು ಚಿಕ್ಕು ಜ್ಯೂಸ್ ಎಂದು ಹೇಳಬಹುದು. ಯಾಕೆಂದರೆ ಈ ಹಣ್ಣು ತುಂಬಾ ರುಚಿಕರ. ಇದರಿಂದಾಗಿ ಹೆಚ್ಚಿನವರಿಗೆ ಇದು ಇಷ್ಟವಾಗುತ್ತದೆ. ಚಿಕ್ಕು ಹಣ್ಣಿಗೆ ವಿವಿಧ ರೀತಿಯ ಹೆಸರುಗಳು ಕೂಡ ಇವೆ. ಇದನ್ನು ಸಪೋಟ, ಲಮೂತ್, ಸಪೊಡಿಲ್ಲಾ, ನೋಸ್ ಬೆರ್ರಿ ಮತ್ತು ಸಪೋಟಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಭಾರತದಲ್ಲಿ ಸಪೋಟ ಹಣ್ಣನ್ನು ಹೆಚ್ಚಾಗಿ ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಬೆಳೆಯುತ್ತಾರೆ. ಈ ಹಣ್ಣಿನ ಜ್ಯೂಸ್, ಜಾಮ್, ಸ್ಮೂಥಿ, ಸಿಹಿ ತಿಂಡಿಗಳು ಇತ್ಯಾದಿಗಳನ್ನು ತಯಾರಿಸುವರು. 100 ಗ್ರಾಂ ಚಿಕ್ಕು ಹಣ್ಣಿನಲ್ಲಿ 83 ಕ್ಯಾಲರಿ ಇದೆ. ಆಹಾರದ ನಾರಿನಾಂಶವನ್ನು ಹೊಂದಿರುವಂತಹ ಇದು ವಿರೇಚಕ ಗುಣವನ್ನು ಹೊಂದಿದೆ.

ಚಿಕ್ಕು ಹಣ್ಣಿನ ಲಾಭಗಳು:

  • ಈ ಹಣ್ಣಿನಲ್ಲಿ ವಿಟಮಿನ್ ಸಿ, ಎ, ನಿಯಾಸಿನ್ ಮತ್ತು ಖನಿಜಾಂಶ ಗಳಾಗಿರುವಂತಹ ಕಬ್ಬಿನಾಂಶ, ಪೊಟಾಶಿಯಂ ಮತ್ತು ತಾಮ್ರವಿದೆ. ಆಂಟಿಆಕ್ಸಿಡೆಂಟ್, ಉರಿಯೂತ ಶಮನಕಾರಿ, ವೈರಲ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳು ಕೂಡ ಇದರಲ್ಲಿ ಇದೆ.
  • ಚಿಕ್ಕುವಿನಲ್ಲಿ ಇರುವಂತಹ ಕೆಲವೊಂದು ಖನಿಜಾಂಶಗಳಾಗಿರುವ ಕ್ಯಾಲ್ಸಿಯಂ, ತಾಮ್ರ ಮತ್ತು ಕಬ್ಬಿನಾಂಶವು ಮೂಳೆಯನ್ನು ಬಲಗೊಳಿಸುವುದು. ನಿಯಮಿತವಾಗಿ ಚಿಕ್ಕು ತಿಂದರೆ ಅದರಿಂದ ಮೂಳೆಗಳ ಗುಣಮಟ್ಟವು ಸುಧಾರಣೆ ಆಗುವುದು.
  • ತಾಮ್ರದ ಕೊರತೆ ಇದ್ದರೆ ಆಗ ಅಸ್ಥಿರಂಧ್ರತೆ ಸಮಸ್ಯೆ ಕಾಡುವುದು. ಚಿಕ್ಕು ಹಣ್ಣು ಮೂಳೆಗಳು, ಸ್ನಾಯುಗಳ ಮತ್ತು ಅಂಗಾಂಶಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.
  • ವಿಟಮಿನ್ ಸಿ, ಎ ಮತ್ತು ಆಂಟಿಆಕ್ಸಿಡೆಂಟ್ ಒಳಗೊಂಡಿರುವ ಚಿಕ್ಕು ಹಣ್ಣು ಪ್ರತಿರೋಧಕ ಶಕ್ತಿಯನ್ನು ಬಲಿಷ್ಠವಾಗಿ ಇಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಚರ್ಮದ ಆರೋಗ್ಯ ವೃದ್ಧಿಸುವುದು ಮತ್ತು ದೀರ್ಘಕಾಲಿಕ ಕಾಯಿಲೆಗಳ ಅಪಾಯ ತಗ್ಗಿಸುವುದು. ಇದು ವೈರಸ್, ಬ್ಯಾಕ್ಟೀರಿಯಾ ಮತ್ತು ಪರಾವಲಂಬಿಗಳ ದಾಳಿಯಿಂದ ರಕ್ಷಿಸುವುದು. ಇದನ್ನು ವ್ಯಾಯಾಮದ ಬಳಿಕ ಸೇವನೆ ಮಾಡಿದರೆ ಅದರಿಂದ ದೇಹಕ್ಕೆ ನೈಸರ್ಗಿಕ ಶಕ್ತಿ ಸಿಗುವುದು.
  • ಬೆಳೆಯುವ ಮಕ್ಕಳು ಮತ್ತು ಗರ್ಭಿಣಿಯರಿಗೆ ಇದು ತುಂಬಾ ಒಳ್ಳೆಯದು. ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಇದು ಒದಗಿಸುವುದು. ಇದರಿಂದ ಆರೋಗ್ಯಕರ ಜೀವನ ಸಾಗಿಸಬಹುದು.
  • ಚಿಕ್ಕು ಹಣ್ಣು ತ್ವಚೆಯ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿಸುವುದು. ಇದರಲ್ಲಿ ಇರುವಂತಹ ವಿಟಮಿನ್ ಎ, ಸಿ, ಇ ಮತ್ತು ಕೆ ಚರ್ಮವನ್ನು ಹೈಡ್ರೇಟ್ ಆಗಿಡುವುದು ಮತ್ತು ಚರ್ಮದ ಅಂಗಾಂಶಗಳನ್ನು ಪುನರ್ಶ್ಚೇತನಗೊಳಿಸುವುದು.
  • ವಯಸ್ಸಾಗುವ ಲಕ್ಷಣಗಳನ್ನು ನಿಧಾನಗೊಳಿಸುವುದು ಮತ್ತು ನೈಸರ್ಗಿಕವಾಗಿ ಕಾಂತಿಯುತ ವಾಗಿಸುವುದು. ಚಿಕ್ಕು ಹಣ್ಣಿನಿಂದ ಹೊರಬರುವಂತಹ ಹಾಲು ಚರ್ಮದ ಶಿಲೀಂಧ್ರ ದೂರ ಮಾಡಲು ಸಹಕಾರಿ.

ಮನೆಯ ಮುಂದೆ ಒಂದು ಚಿಕ್ಕು ಹಣ್ಣಿನ ಗಿಡ ನೆಡಿ ಚೈತನ್ಯಯುತ ಜೀವನ ನಿಮ್ಮದಾಗಲಿ.

-ರಮಿತಾ ಶೈಲೇಂದ್ರ ರಾವ್, ಕಾರ್ಕಳ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅಮೆರಿಕದಲ್ಲಿ H-1B ವೀಸಾ ಹೊಂದಿರುವವರ ಮಕ್ಕಳಿಗೆ ಹುಟ್ಟಿನಿಂದಲೇ ಪೌರತ್ವವಿಲ್ಲ: ಟ್ರಂಪ್ ಹೊಸ ಆದೇಶ

ನ್ಯೂಯಾರ್ಕ್, ಜ.22: ಅಮೆರಿಕದಲ್ಲಿ ನವಜಾತ ಶಿಶುವಿನ ಕನಿಷ್ಠ ಒಬ್ಬ ಪೋಷಕ ಅಮೆರಿಕನ್...

ಉಪ್ಪೂರು: ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ತ್ಯಾಜ್ಯದ ರಾಶಿ; ಉಡುಪಿ ಜಿಲ್ಲೆಯ ಸ್ವಚ್ಛತೆಗೆ ಇದೊಂದು ದೊಡ್ಡ ಕಪ್ಪುಚುಕ್ಕೆ

ಉಪ್ಪೂರು, ಜ.21: ಒಂದೆಡೆ ದೇಶಾದ್ಯಂತ ಸ್ವಚ್ಛತೆಯ ಕಾಳಜಿಯ ಬಗ್ಗೆ ಸರಣಿ ಕಾರ್ಯಕ್ರಮಗಳು...

ಪಾಳೆಕಟ್ಟೆ: ನೂತನ ಬಸ್ಸು ತಂಗುದಾಣಕ್ಕೆ ಭೂಮಿ ಪೂಜೆ

ಕೊಡವೂರು, ಜ.21: ಕೊಡವೂರು ವಾರ್ಡಿನ ಪಾಳೆಕಟ್ಟೆಯಲ್ಲಿ ಬಸ್ಸು ತಂಗುದಾಣಕ್ಕೆ ನಗರಸಭಾ ಸದಸ್ಯರಾದ...

ಸಂಚಾರ ಪ್ರಜ್ಞೆಯು ಜೀವನದ ಭಾಗವಾಗಬೇಕು: ಮನೋಹರ್ ಹೆಚ್ ಕೆ

ಮಣಿಪಾಲ, ಜ.21: ಮಾಹೆಯ ಎಂಐಟಿ, ಎನ್‌ಎಸ್‌ಎಸ್ ಘಟಕಗಳು, ಉಡುಪಿ ಜಿಲ್ಲಾ ಪೊಲೀಸ್​...
error: Content is protected !!