ಮಂಗಳೂರು, ಡಿ.11: ಡಾ. ಪಿ. ದಯಾನಂದ ಪೈ – ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ, ಮಂಗಳೂರು ಇಲ್ಲಿ ದಿನಾಂಕ:೧೦-೧೨-೨೦೨೫ ರಂದು ಕಾಲೇಜಿನ ಐಕ್ಯೂಎಸಿ, ರಾಜ್ಯಶಾಸ್ತ್ರ ವಿಭಾಗ, ಮಾನವಿಕ ಸಂಘ, ಮತದಾರರ ಸಾಕ್ಷರತಾ ಕ್ಲಬ್ ಮತ್ತು ಮಾನವ ಹಕ್ಕುಗಳ ಕೋಶಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ಎಸ್.ಡಿ.ಎಂ ಕಾನೂನು ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಪ್ರೊ. ಮಹೇಶ್ಚಂದ್ರ ನಾಯಕ್ ಕಾಯ್ದೆಗಳ ಬಗ್ಗೆ ಉಪನ್ಯಾಸ ನೀಡಿದರು. ಮಾನವನಲ್ಲಿ ಮೃಗೀಯ ಗುಣಗಳ ಬದಲಿಗೆ ಮಾನವೀಯ ಗುಣಗಳನ್ನು ಬೆಳೆಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಈ ಎರಡು ಕಾಯ್ದೆಗಳ ಅವಶ್ಯಕತೆ, ಅದರ ಉಪಯೋಗಗಳು, ಅಪರಾಧಕ್ಕೆ ಶಿಕ್ಷೆಯ ಪ್ರಮಾಣ, ಕಾಯ್ದೆಯ ದುರುಪಯೋಗ ತಡೆಯುವ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅವರು ಮಾನವೀಯ ಯುವ ಮನಸ್ಸುಗಳಲ್ಲಿ ಮೌಲ್ಯಗಳನ್ನು ಬೆಳೆಸುವಲ್ಲಿ ಮೆಕಾಲೆ ಶಿಕ್ಷಣ ಪದ್ಧತಿಯ ಸ್ಥಾನದಲ್ಲಿ ಗುರುಕುಲ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು. ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿಯ ಅಧ್ಯಕ್ಷರಾದ ಬಿ ಶೇಷಪ್ಪ ಬಂಬಿಲ, ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಮಾನವ ಹಕ್ಕುಗಳ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ ದುಗ್ಗಪ್ಪ ಕಜೆಕಾರ್ ವಹಿಸಿದ್ದರು. ಕಾಲೇಜಿನ ಐಕ್ಯೂಎಸಿ ಸಂಚಾಲಕ ದೇವಿಪ್ರಸಾದ್, ಸಹ ಸಂಚಾಲಕಿ ಡಾ. ಜ್ಯೋತಿಪ್ರಿಯ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ನಸೀಮಾ ಬೇಗಂ ಎಸ್, ಮಾನವಿಕ ಸಂಘದ ಸಂಯೋಜಕರಾದ ಜ್ಯೋತಿ ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮತದಾರರ ಸಾಕ್ಷರತಾ ಕ್ಲಬ್ ಸಂಯೋಜಕರಾದ ವತ್ಸಲ ಪಿ. ನಿರೂಪಿಸಿ, ವಿದ್ಯಾರ್ಥಿನಿ ಪವನಾ ಸ್ವಾಗತಿಸಿ, ಕಾವ್ಯ ವಂದಿಸಿದರು. ಲಾವಣ್ಯ ಪ್ರಾರ್ಥಿಸಿದರು. ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಸದಸ್ಯರು, ಕಾಲೇಜಿನ ಬೋಧಕ-ಬೋಧಕೇತರರು, ವಿದ್ಯಾರ್ಥಿ್ಗಳು ಉಪಸ್ಥಿತರಿದ್ದರು.




By
ForthFocus™