Saturday, February 28, 2026
Saturday, February 28, 2026

ಸಾಮಾಜಿಕ ಜೀವನ ಎಷ್ಟು ಮುಖ್ಯ?

ಸಾಮಾಜಿಕ ಜೀವನ ಎಷ್ಟು ಮುಖ್ಯ?

Date:

ವಳು ಕ್ರಿಯಾಶೀಲ ಜೀವನಶೈಲಿ ಅಳವಡಿಸಿಕೊಂಡಿದ್ದಳು. ನಡಿಗೆ, ವ್ಯಾಯಾಮ ಯಾವತ್ತೂ ಬಿಡಲಿಲ್ಲ. ಒಳ್ಳೆಯ ಹವ್ಯಾಸಗಳನ್ನು ರೂಡಿಸಿಕೊಂಡಿದ್ದಳು. ಮಾನಸಿಕ ಅಥವಾ ದೈಹಿಕ ಕಾಯಿಲೆ ಯಾವುದು ಇರದಿದ್ದರೂ ಏನೋ ಒಂದು ಕೊರತೆ ನಿರುತ್ಸಾಹ. ಹಾಗಾದರೆ ಏನು ಈ ಕೊರತೆ? ಇದರ ಬಗ್ಗೆ ತಿಳಿದುಕೊಳ್ಳೋಣ.

ಮನುಷ್ಯ ಒಬ್ಬ ಸಾಮಾಜಿಕ ಜೀವಿ. ಮನೆಯಲ್ಲಿ ಎಲ್ಲಾ ಸೌಲಭ್ಯ ಪ್ರೀತಿ ಇದ್ದರೂ ಕೂಡ ಸಾಮಾಜಿಕ ಒಡನಾಟ ಅಗತ್ಯ. ಜೀವನದಲ್ಲಿ ಎಲ್ಲವನ್ನು ಪಡೆದುಕೊಂಡರೂ ಸಾಮಾಜಿಕ ಜೀವನದಲ್ಲಿ ತೊಡಗದಿದ್ದರೆ ಜೀವನ ಸಂಪೂರ್ಣವೆನಿಸುವುದಿಲ್ಲ. ಮನೆಯ ಪರಿಸರ ನಮಗೆ ಖುಷಿ ಕೊಟ್ಟರೂ ಅದು ಒಂದು ಹಂತದವರೆಗೆ ಮಾತ್ರ. ಜೀವನದಲ್ಲಿ ಸಂತೃಪ್ತಿ ಸಿಗುವುದು ಮಾನಸಿಕ ದೈಹಿಕ ಸಾಮಾಜಿಕ ಜೀವನವಿದ್ದರೆ ಮಾತ್ರ.

ಏನು ಈ ಸಾಮಾಜಿಕ ಜೀವನ?: ಆರೋಗ್ಯಕರ ಸಾಮಾಜಿಕ ಜೀವನವೆಂದರೆ ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸುವುದು. ನಮ್ಮ ಜೀವನ ಸಂಗಾತಿ, ಗೆಳೆಯ, ಬಂಧು-ಬಳಗ, ನೆರೆಮನೆಯವರ ಹತ್ತಿರ ಒಳ್ಳೆಯ ಭಾಂಧವ್ಯ ಇಟ್ಟುಕೊಳ್ಳುವುದು. ಎಲ್ಲರ ಜೊತೆ ಸಮಯವನ್ನು ಕಳೆಯುವುದು. ದಿನಾಲು ಆತ್ಮೀಯರ ಜೊತೆ ಮಾತನಾಡುವುದು. ಚಿಕ್ಕಪುಟ್ಟ ಟ್ರಿಪ್, ಪಾರ್ಟಿ, ಒಟ್ಟಿಗೆ ಸೇರಿ ಹಬ್ಬಗಳ ಆಚರಣೆ. ಇದೆಲ್ಲವೂ ಮನುಷ್ಯನಿಗೆ ಅತಿ ಅವಶ್ಯಕ. ಇಲ್ಲದಿದ್ದರೆ ನಮ್ಮ ಆರೋಗ್ಯದ ಮೇಲೆ ಕೂಡ ವಿಪರೀತ ಒತ್ತಡ ಬೀಳಬಹುದು. ಬಿಪಿ, ಡಯಾಬಿಟಿಸ್, ಸ್ಟ್ರೆಸ್ ಬರಲೂಬಹುದು.

ಏನು ಮಾಡಬೇಕು?: ದಿನಾಲು 10 ನಿಮಿಷ ಅಥವಾ ವಾರದಲ್ಲಿ ಎರಡು ಅಥವಾ ಮೂರು ಬಾರಿ ನಮ್ಮ ಆತ್ಮೀಯರ ಜೊತೆ ಮಾತನಾಡಿ. ವಾರದಲ್ಲಿ ಕೆಲವು ಹೊಸ ವ್ಯಕ್ತಿಗಳನ್ನು ಭೇಟಿ ನೀಡಿ ಅವರ ಮನೆಗೆ ಹೋಗಿ ಭೇಟಿ ನೀಡಬೇಕೆಂದೇನೂ ಇಲ್ಲ. ಕೆಲಸಕ್ಕೆ ಹೋದಾಗ, ದೇವಸ್ಥಾನಕ್ಕೆ ಹೋದಾಗ ಯಾವುದೇ ಬ್ಯಾಂಕ್ ಅಥವಾ ಅಂಗಡಿಗೆ ಹೋದಾಗ ಹಲವರನ್ನು ಅಥವಾ ಕನಿಷ್ಠ ಒಬ್ಬ ಅಥವಾ ಒಬ್ಬ ಹೊಸ ವ್ಯಕ್ತಿಗಳ ಜೊತೆ ಮಾತನಾಡಿ ಅವರ ಬಗ್ಗೆ ತಿಳಿದುಕೊಳ್ಳಿ ಅವರ ಕೆಲಸ ಹವ್ಯಾಸ ಅವರಿಂದ ಜ್ಞಾನ ಪಡೆದುಕೊಳ್ಳಿ. ಯಾವುದೇ ವಿಷಯವಿರಬಹುದು. ಪರಿಚಯವಿಲ್ಲದಿದ್ದವರಿಗೆ ಸ್ಮೈಲ್ ಕೊಟ್ಟು ನೋಡಿ .ನಿಮಗೆ ಖುಷಿಯಾಗುತ್ತದೆ ಹೌದೋ ಅಲ್ಲವೋ ನೋಡಿ. ಶಾಲಾ ಕಾಲೇಜುಗಳಲ್ಲಿ ನಿಮ್ಮ ಫ್ರೆಂಡ್ಸ್ ಅನ್ನು ಬಿಟ್ಟು ಬೇರೆಯವರ ಹತ್ತಿರ ಮಾತನಾಡುವುದು. ಅವರ ಜೊತೆ ಆಟವಾಡುವುದು, ಅವರ ಬಗ್ಗೆ ತಿಳಿಯುವುದು ಇದೆಲ್ಲದರಿಂದ ನಮ್ಮ ಆರೋಗ್ಯ ಸುಧಾರಿಸಿ ಜೀವನ ಸಂಪೂರ್ಣವೆನಿಸುವುದು. ಇದರಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುವುದು, ದಾನ, ದೇಣಿಗೆ, ಇತರರಿಗೆ ಸಾಂತ್ವನ ನೀಡುವುದು, ಶೈಕ್ಷಣಿಕ ಸಹಾಯ ಮಾಡುವುದು, ಅನಾಥಾಶ್ರಮಕ್ಕೆ ಅಗತ್ಯ ವಸ್ತುಗಳನ್ನು ನೀಡುವುದು. ಇದು ನಮ್ಮ ಜೀವನದ ಒಂದು ಭಾಗವಾಗಲಿ.

ಸಾಮಾಜಿಕ ಜೀವನದ ಲಾಭಗಳು: ಮಾನಸಿಕ ಆರೋಗ್ಯ, ಭಾವನಾತ್ಮಕವಾಗಿ ಬೆಳೆಯುವುದು, ಒಂಟಿತನ ದೂರವಾಗುವುದು, ಒತ್ತಡ ಕಡಿಮೆಯಾಗುವುದು, ಸಂಬಂಧಗಳು ಸುಧಾರಿಸುವುದು, ದೈಹಿಕ ಆರೋಗ್ಯ ವೃದ್ಧಿಯಾಗುವುದು. ಜೀವನದಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯವಷ್ಟೇ ಮುಖ್ಯವಲ್ಲ, ಸಾಮಾಜಿಕ ಆರೋಗ್ಯ ಅಥವಾ ಜೀವನ ಅಷ್ಟೇ ಮುಖ್ಯ. ನಾವು ನಮ್ಮದನ್ನು ಬಿಟ್ಟು ಹೊರ ಬಂದರೆ ನಮಗೂ ಇತರರಿಗೂ ಲಾಭವಾಗುವುದು.

-ಡಾ. ಹರ್ಷಾ ಕಾಮತ್

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಡುಬಿ ಸಮುದಾಯದ ಕಲಾವಿದರ ಬಗ್ಗೆ ಪಠ್ಯವಾಗಲಿ: ಡಾ. ಜಾನಪದ ಎಸ್ ಬಾಲಾಜಿ

ಬ್ರಹ್ಮಾವರ, ಫೆ.27: ಮೇಕೆಕಟ್ಟು ನಂದಿಕೇಶ್ವರ ದೇಗುಲದ ಆವರಣದಲ್ಲಿ ಕನ್ನಡ ಜಾನಪದ ಪರಿಷತ್...

ಜಿಲ್ಲೆಯ ಅಗ್ನಿಶಾಮಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ಉಡುಪಿ, ಫೆ.27: ಬೈಂದೂರು ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ರಾಜೇಶ್ ಹಾಗೂ...

ಮೊಬೈಲ್ ಕ್ಯಾಂಟೀನ್ ವಾಹನ ಖರೀದಿಸಲು ಸಹಾಯಧನ: ಅರ್ಜಿ ಆಹ್ವಾನ

ಉಡುಪಿ, ಫೆ.27: ಪ್ರವಾಸೋದ್ಯಮ ಇಲಾಖೆ ವತಿಯಿಂದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ. ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ...

ಮಾ. 4: ಉಡುಪಿ ಕಂಬಳಕೆರೆಗೆ ಶಂಕುಸ್ಥಾಪನೆ

ಉಡುಪಿ, ಫೆ.27: ಉಡುಪಿ ಜಿಲ್ಲಾಡಳಿತ ಮತ್ತು ಯುವಜನ ಸಬಲೀಕರಣ ಇಲಾಖೆ ವತಿಯಿಂದ...
error: Content is protected !!