Saturday, February 28, 2026
Saturday, February 28, 2026

ಫೇಕ್ ಅಕೌಂಟ್ ಏನನ್ನು ಸೂಚಿಸುತ್ತದೆ?

ಫೇಕ್ ಅಕೌಂಟ್ ಏನನ್ನು ಸೂಚಿಸುತ್ತದೆ?

Date:

ಫ್.ಬಿ.ಯಲ್ಲಿ ಕಮೆಂಟ್ ಸೆಕ್ಷನ್ ಓದುವುದು ನನ್ನ ಅಭ್ಯಾಸ. ಜನರ ಮನಸ್ಥಿತಿಯನ್ನು ಅರಿಯಲು ಒಂದು ಪ್ರಯತ್ನ ಇದು. ನಾವು ವ್ಯಕ್ತಿ ಒಬ್ಬರಾದರೂ ಎರಡು ಮುಖ ಅಥವಾ ಅನೇಕ ಮುಖವನ್ನು ಹೊಂದಿದ್ದೇವೆ. ಈಗಂತೂ ಸಾಮಾಜಿಕ ಜಾಲತಾಣದಲ್ಲಿ ಅನೇಕ ಫೇಕ್ ಅಕೌಂಟ್ ಗಳ ಹಾವಳಿ ರಾರಾಜಿಸುತ್ತಿವೆ. ಎದುರಿಗೆ ಒಳ್ಳೆಯವರ ತರಹ ಇದ್ದು ತನ್ನ ಅಸ್ವಸ್ಥ ಮಾನಸಿಕತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ಸ್ ಗಳ ರೂಪದಲ್ಲಿ ತೋರಿಸುತ್ತಾರೆ. ಜನರು ಭಯದಿಂದ ತನ್ನ ಕೆಟ್ಟತನವನ್ನು ಪ್ರದರ್ಶಿಸಲು ಬಳಸುತ್ತಿರುವುದು ಈ ಫೇಕ್ ಅಕೌಂಟ್ ಗಳನ್ನು. ತನ್ನ ಅಸ್ಮಿತೆಯನ್ನು ಮರೆಮಾಡಿ ಮಾಡಿರುವಂತಹ ಫೇಕ್ ಅಕೌಂಟ್ ಗಳು ಏನನ್ನು ಸೂಚಿಸುತ್ತದೆ? ನಮ್ಮೊಳಗೆ ಕುದಿಯುತ್ತಿರುವ ಋಣಾತ್ಮಕ ಮಾತ್ರವಲ್ಲದೆ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ.

ಯಾವುದೇ ವಿಡಿಯೋ ಅಥವಾ ಫೋಟೋಸ್ ಗಳನ್ನು ನೋಡಿದರೆ ಅಲ್ಲಿ ಆ ವಿಡಿಯೋದಲ್ಲಿ ಇರುವವರಿಗೆ ಕೊಂಕುವುದು ಮುಖ್ಯವಾಗಿ ಅನೇಕ ವ್ಯೂಸ್ ಅಥವಾ ಶೇರ್ಸ್ ಆದ ವಿಡಿಯೋಗಳಲ್ಲಿ ಪ್ರಖ್ಯಾತ ವ್ಯಕ್ತಿ ಅಥವಾ ಯೂಟ್ಯೂಬರ್ ಗೆ ಹೀಗೆ ಯಾವುದೇ ಪೋಸ್ಟ್ ಗಳ ಕಮೆಂಟ್ ಸೆಕ್ಷನ್ ಹೋಗಿ ನೋಡಿದರೆ ತಲೆಬಿಸಿಯಾಗುವುದು ಸುಳ್ಳಲ್ಲ. ಈ ರೀತಿಯ ಆಲೋಚನೆ ಮಾಡುವ ವ್ಯಕ್ತಿಯು ಕೂಡ ಇರುತ್ತಾರೆಯೇ ಎಂದೆನಿಸಿ ಬಿಡುತ್ತದೆ. ಇತರರ ನೋವನ್ನು ತಿಳಿಯದ ಆ ವಿಡಿಯೋ ಯಾವ ಉದ್ದೇಶಕ್ಕಾಗಿ ಹಾಕಿದ್ದಾರೆಂದು ತಿಳಿಯದೆ ಒಟ್ಟಾರೆ ನಕಾರಾತ್ಮಕ ಕಮೆಂಟ್ಸ್ ಹಾಕುವ ಚಟ ಬೆಳೆದುಬಿಟ್ಟಿದೆ. ಇದು ಒಳ್ಳೆಯವರನ್ನು ಕೂಡ ಕೆಟ್ಟದ್ದನ್ನು ಮಾಡಿಸುತ್ತಿದೆ. ಸತ್ಯ ಬೇರೆ ಇದ್ದರೂ ಕೂಡ ಅದನ್ನು ಪರಿಶೀಲಿಸದೆ ಅವರದ್ದೇ ಆದ ಅಭಿಪ್ರಾಯವನ್ನು ಹಾಕುತ್ತಾರೆ. ಆ ಕಮೆಂಟ್ ಮೇಲೆ ಇನ್ನಷ್ಟು ಕಮೆಂಟ್ಗಳ ಸುರಿಮಳೆ. ಹೀಗೆ ಮುಂದುವರೆದರೆ ಇಡೀ ವಿಶ್ವದ ಮನಸ್ಥಿತಿ ಹೇಗಾಗಬಹುದೆಂದು ಯೋಚಿಸಿ.

ಸಾಮಾಜಿಕ ಜಾಲತಾಣವನ್ನು ಒಳ್ಳೆಯ ರೀತಿ ಬಳಕೆ ಮಾಡುವುದನ್ನು ಬಿಟ್ಟು ಈ ರೀತಿಯ ವರ್ತನೆಯಿಂದ ನಮ್ಮ ಮೇಲಷ್ಟೇ ಅಲ್ಲದೆ ಬೇರೆಯವರ ಮನಸ್ಥಿತಿಯನ್ನು ಹಾಳು ಮಾಡುತ್ತವೆ. ಒಳ್ಳೆಯವರಾಗಲು ವರ್ಷಗಳೇ ಬೇಕಾಗುತ್ತದೆ. ಆದರೆ ಕೆಟ್ಟರಾಗಲು ಒಂದು ಸೆಕೆಂಡು ಸಾಕು. ಎಲ್ಲರೂ ಕೆಟ್ಟ ಕಮೆಂಟ್ ಹಾಕುವುದಿಲ್ಲ ನಿಜ. ಆದರೆ ಒಳ್ಳೆಯ ಕಮೆಂಟ್ಗಿಂತ ಕೆಟ್ಟ ಕಮೆಂಟ್ಗಳು ಬೇಗ ಆಕರ್ಷಿಸುತ್ತದೆ. ಇತರರ ಜೀವನದ ಮೇಲೆ ಕಮೆಂಟ್ಸ್, ಬಾಡಿ ಶೇಮಿಂಗ್, ಅವರು ತೆಗೆದ ನಿರ್ಧಾರಗಳಿಗೆ ಹಾಸ್ಯ ಮಾಡುವುದು. ಹೀಗೆ ಎಲ್ಲರ ಮೇಲೆ ನಮ್ಮ ಹಕ್ಕು ಎನ್ನುವಂತೆ ಕಮೆಂಟ್ಸ್ ಹಾಕುವುದು ದಿನೇ ದಿನೇ ಜಾಸ್ತಿಯಾಗಿದೆ. ವಯಸ್ಸಾದಂತೆ ವಿವೇಕ ಬೆಳೆಯುವ ಬದಲು ಬೌದ್ಧಿಕ ದಿವಾಳಿತನ ನಡೆಯುತ್ತಿದೆ. ಇನ್ನೂ ಕೂಡ ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಪುಣ್ಯ ಭೂಮಿ ನರಕವಾಗುವುದಕ್ಕೆ ಬಹಳ ದಿನ ಬೇಕಾಗಿಲ್ಲ.

ಇದಕ್ಕೆ ಕಡಿವಾಣ ಹೇಗೆ?: ಮೊದಲು ಫೇಕ್ ಅಕೌಂಟ್ ಗಳನ್ನು ಗುರುತಿಸಿ ರಿಪೋರ್ಟ್ ಮಾಡುವುದು. ಮಕ್ಕಳಿಗೆ ಮೊಬೈಲ್ ಕೊಡದಿರುವುದು. ಇದನ್ನು ಎಷ್ಟರ ಮಟ್ಟಿಗೆ ಕಡಿವಾಣ ಹಾಕಬಹುದು ಗೊತ್ತಿಲ್ಲ. ನಮ್ಮ ವಿಡಿಯೋ ಅಥವಾ ಪೋಸ್ಟ್ಗಳ ಮೇಲೆ ಕಮೆಂಟ್ಸ್ ಹಾಕುತ್ತಿದ್ದರೆ ಕಮೆಂಟ್ ಸೆಕ್ಷನ್ ಅನ್ನು ಬಂದ್ ಮಾಡಿ ಇಡದಿರುವುದು. ಕೆಟ್ಟ ಕಮೆಂಟ್ಗಳನ್ನು ಡಿಲೀಟ್ ಮಾಡುವುದು.

ಜನರ ಮನಸ್ಥಿತಿ ಬದಲಿಸುವುದು ಕಷ್ಟ. ಹುಟ್ಟಿನಿಂದಲೇ ಒಳ್ಳೆಯ ಗುಣ ಬೆಳೆದು ಬರಬೇಕು. ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವ ಮನೋಭಾವ ಬೆಳೆಸಬೇಕು, ಅದನ್ನು ಚಿಕ್ಕಂದಿನಿಂದಲೂ ಮಕ್ಕಳಿಗೆ ಕಲಿಸಬೇಕು. ಯಾವುದು ತಪ್ಪು ಯಾವುದು ಸರಿ ಎಂಬ ತಿಳುವಳಿಕೆ ಬೆಳೆಸಬೇಕು. ಜಗತ್ತನ್ನು ಬದಲಿಸಲು ಸಾಧ್ಯವಿಲ್ಲ, ಆದರೆ ನಮ್ಮಿಂದಾಗುವ ಚಿಕ್ಕ ಪ್ರಯತ್ನ ಮಾಡಬಹುದು.

-ಡಾ.ಹರ್ಷಾ ಕಾಮತ್

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಡುಬಿ ಸಮುದಾಯದ ಕಲಾವಿದರ ಬಗ್ಗೆ ಪಠ್ಯವಾಗಲಿ: ಡಾ. ಜಾನಪದ ಎಸ್ ಬಾಲಾಜಿ

ಬ್ರಹ್ಮಾವರ, ಫೆ.27: ಮೇಕೆಕಟ್ಟು ನಂದಿಕೇಶ್ವರ ದೇಗುಲದ ಆವರಣದಲ್ಲಿ ಕನ್ನಡ ಜಾನಪದ ಪರಿಷತ್...

ಜಿಲ್ಲೆಯ ಅಗ್ನಿಶಾಮಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ಉಡುಪಿ, ಫೆ.27: ಬೈಂದೂರು ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ರಾಜೇಶ್ ಹಾಗೂ...

ಮೊಬೈಲ್ ಕ್ಯಾಂಟೀನ್ ವಾಹನ ಖರೀದಿಸಲು ಸಹಾಯಧನ: ಅರ್ಜಿ ಆಹ್ವಾನ

ಉಡುಪಿ, ಫೆ.27: ಪ್ರವಾಸೋದ್ಯಮ ಇಲಾಖೆ ವತಿಯಿಂದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ. ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ...

ಮಾ. 4: ಉಡುಪಿ ಕಂಬಳಕೆರೆಗೆ ಶಂಕುಸ್ಥಾಪನೆ

ಉಡುಪಿ, ಫೆ.27: ಉಡುಪಿ ಜಿಲ್ಲಾಡಳಿತ ಮತ್ತು ಯುವಜನ ಸಬಲೀಕರಣ ಇಲಾಖೆ ವತಿಯಿಂದ...
error: Content is protected !!