Sunday, January 19, 2025
Sunday, January 19, 2025

ಶ್ರಾವಣ ಹುಣ್ಣಿಮೆಯ ಚಂದ್ರನೊಂದಿಗೆ ಗುರು ಗ್ರಹದ ಹುಣ್ಣಿಮೆ

ಶ್ರಾವಣ ಹುಣ್ಣಿಮೆಯ ಚಂದ್ರನೊಂದಿಗೆ ಗುರು ಗ್ರಹದ ಹುಣ್ಣಿಮೆ

Date:

ನಾಳೆ ರವಿವಾರ ಶ್ರಾವಣ ಹುಣ್ಣಿಮೆ. ನಮಗೆ ತಿಳಿದಿರುವಂತೆ ಹುಣ್ಣಿಮೆಯ ದಿನ ಸಂಪೂರ್ಣ ಚಂದ್ರ ಇಡೀ ರಾತ್ರಿ ಕಾಣುತ್ತದೆ. ಸಂಜೆಯಾಗುತ್ತಿದ್ದಂತೆ ಪೂರ್ವ ಆಕಾಶದಲ್ಲಿ ಚಂದ್ರೋದಯ. ಇಡೀ ರಾತ್ರಿ ಆಕಾಶದಲ್ಲಿ ತಿರುಗುತ್ತಾ ಮುಂದಿನ ದಿನದ ಸೂರ್ಯೋದಯಕ್ಕೆ ಚಂದ್ರ ಅಸ್ತ. ಇದೇ ರೀತಿ ವರ್ಷದಲ್ಲಿ ಕೆಲವು ದಿನ ಗುರು ಗ್ರಹವೂ ಇಡೀ ರಾತ್ರಿ ಕಾಣುತ್ತದೆ. ಸಂಜೆಯಾಗುತ್ತಿದ್ದಂತೆ ಪೂರ್ವ ಆಕಾಶದಲ್ಲಿ ಉದಯಿಸಿ ಮುಂದಿನ ದಿನ ಸೂರ್ಯೋದಯಕ್ಕೆ ಅಸ್ತ. ರವಿವಾರ ಶ್ರವಣ ನಕ್ಷತ್ರದ ಪಕ್ಕದಲ್ಲಿ ಚಂದ್ರನಿರುತ್ತದೆ. ಹಾಗಾಗಿ ಶ್ರಾವಣ ಹುಣ್ಣಿಮೆ.

ನಾಳೆಯ ಮತ್ತೊಂದು ವಿಶೇಷವೆಂದರೆ ಚಂದ್ರ ಹಾಗೂ ಗುರು ಗ್ರಹ ಜೊತೆ ಜೊತೆಗೆ ಹುಣ್ಣಿಮೆ ಆಚರಿಸುತ್ತಿವೆ. ಇದೊಂದು ಅಪರೂಪದ ವಿದ್ಯಮಾನ. ಚಂದ್ರ, ಗುರು ಗ್ರಹ ಹಾಗೂ ಶ್ರಾವಣ ನಕ್ಷತ್ರ ಜೊತೆಜೊತೆಗೆ ಕಾಣುತ್ತಿವೆ. ದೂರದರ್ಶಕದಲ್ಲಿ ಗುರು ಗ್ರಹ ನೋಡಲು ಇಡೀ ವರ್ಷದಲ್ಲೇ ಈ ತಿಂಗಳಿಡೀ ಒಳ್ಳೆಯ ಕಾಲ. ನೋಡಿ ಆನಂದಿಸಿ.

ಆಕಾಶದಲ್ಲಿ ನೋಡುವಾಗ ಚಂದ್ರ, ಗುರು ಗ್ರಹಕ್ಕಿಂತ ದೊಡ್ಡದಾಗಿ ಕಾಣುತ್ತಿದೆ. ಇದಕ್ಕೆ ಕಾರಣ ಚಂದ್ರ ಗುರು ಗ್ರಹಕ್ಕಿಂತ ಚಿಕ್ಕದಾಗಿದ್ದರೂ ಭೂಮಿಗೆ ತುಂಬಾ ಹತ್ತಿರವಿರುವುದೇ. ವಾಸ್ತವವಾಗಿ ಚಂದ್ರ ಈ ದಿನ 3 ಲಕ್ಷದ 74 ಸಾವಿರದ 484 ಕಿಮೀ ದೂರದಲ್ಲಿದ್ದರೆ, ಗುರುಗ್ರಹ ಭೂಮಿಯಿಂದ 58 ಕೋಟಿ 80 ಲಕ್ಷ ಕಿಮೀ ದೂರದಲ್ಲಿದೆ. ಸುಮಾರು ಒಂದೂವರೆ ಸಾವಿರ ಪಟ್ಟು ಆಳದಲ್ಲಿದೆ ಗುರುಗ್ರಹ. ಚಂದ್ರನಿಗಿಂತ ಗುರುಗ್ರಹ ಅದೆಷ್ಟು ದೊಡ್ಡದೆಂದರೆ ಗುರು ಗ್ರಹದ ಹೊಟ್ಟೆ ಖಾಲಿಯಾಗಿದ್ದರೆ 60 ಸಾವಿರ ಚಂದ್ರರನ್ನು ತುಂಬಬಹುದು.

ಶ್ರಾವಣ ಮಾಸವೆಂದರೆ ಹುಣ್ಣಿಮೆ ಚಂದ್ರ, ಆ ದಿನ ಶ್ರವಣ ನಕ್ಷತ್ರದ ಪಕ್ಕದಲ್ಲಿ ಇರುವುದು. ಈ ಶ್ರವಣ ನಕ್ಷತ್ರವು ಭೂಮಿಯಿಂದ ಸುಮಾರು 16.7 ಜ್ಯೋತಿರ್ವರ್ಷ ದೂರದಲ್ಲಿದೆ. ಒಂದು ಜ್ಯೋತಿರ್ವರ್ಷವೆಂದರೆ ಸುಮಾರು ಒಂದು ಲಕ್ಷ ಕೋಟಿ ಕಿಮೀ (946 ಬಿಲಿಯನ್ ಕಿಮೀ.) ಈ ನಕ್ಷತ್ರ ನಮ್ಮ ಸೂರ್ಯನಿಗಿಂತ ಎಂಟು ಪಟ್ಟು ದೊಡ್ಡದು. ಹಾಗಾಗಿ ಈ ನಕ್ಷತ್ರದಲ್ಲಿ 8000 ಗುರು ಗ್ರಹಗಳನ್ನು ತುಂಬಬಹುದು. (ನಮ್ಮ ಸೂರ್ಯ ನಮ್ಮ ಗುರು ಗ್ರಹಕ್ಕಿಂತ 1000 ಪಟ್ಟು ದೊಡ್ಡದು.) ಆಶ್ಚರ್ಯ ವಲ್ಲವೇ ಈ ಖಗೋಳ ವಿಶ್ವ. ಇಂದಿನ ದಿನ ಶ್ರವಣ ನಕ್ಷತ್ರ, ಚಂದ್ರ ಹಾಗೂ ಗುರು ಗ್ರಹ ಅಕ್ಕಪಕ್ಕದಲ್ಲಿ ಕಾಣಲಿವೆ.

-ಡಾ ಎ ಪಿ ಭಟ್, ಉಡುಪಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!