Home ಓದುಗರ ಮನದಾಳ ಇದೇನಾ ಸಭ್ಯತೆ ಇದೇನಾ ಸಂಸ್ಕೃತಿ?

ಇದೇನಾ ಸಭ್ಯತೆ ಇದೇನಾ ಸಂಸ್ಕೃತಿ?

730
0

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತ ಹೋಗಬೇಕಾದರೆ, ನವಂಬರ್ ಎರಡನೆ ವಾರದಿಂದ ಸಾಕಷ್ಟು ಬಸ್ಸುಗಳ ಶಾಲಾ ವಿದ್ಯಾರ್ಥಿಗಳನ್ನು ತುಂಬಿಕೊಂಡು ಕರಾವಳಿಯ ಪ್ರೇಕ್ಷಣೀಯ ಸ್ಥಳಗಳನೆಲ್ಲ ಸಂದರ್ಶಿಸುತ್ತಿರುವುದು ನಮಗೂ ನಿಮಗೂ ಗೊತ್ತಿರುವ ವಿಚಾರ‌.

ನೀವೊಮ್ಮೆ ಗಮನಿಸಿ ನೋಡಿ ಅಥವಾ ಅವರ ಹಿಂದೆ ಸುಮಾರು ಒಂದ ಹತ್ತು ನಿಮಿಷ ನಿಮ್ಮ ಗಾಡಿಯನ್ನ ಒಡಿಸಿದರೆ ನಿಮಗೆ ಆ ಬಸ್ಸಿನ ಒಳಗಿಂದ ಬಿಸಾಕುವ ಪ್ಲಾಸ್ಟಿಕ್ ಬಾಟಲಿ ಅಥವಾ ಇತರ ವಸ್ತುಗಳು ರಸ್ತೆಯಲ್ಲಿ ಬೀಳುವ ಪರಿಯನ್ನ ನೋಡಿದರೆ ನಮ್ಮ ಮುಂದಿನ ಜನಾಂಗ ಮೆಖಾಲೆಯ ಠಂಕಸಾಲೆಯಲ್ಲಿ ಶುಚಿತ್ವ, ಪರಿಸರ, ಶಿಸ್ತು ಇದನೆಲ್ಲ ಕಲಿಯುವುದು ಯಾವಾಗ ಅನ್ನಿಸುವುದಂತು ಸತ್ಯ.

ಇಷ್ಟೇ ಅಲ್ಲದೆ ಹಾದಿ ಬೀದಿಯಲ್ಲಿ ಮ್ಯೆದಾನಗಳಲ್ಲಿ ತಾವುಗಳು ಬಿಸಾಕಿದ ಪ್ಲಾಸ್ಟಿಕ್ ಪ್ಲೇಟುಗಳು, ಕಪ್ ಗಳು ಕರಾವಳಿಯನ್ನು ಎಷ್ಟು ಅಸಹ್ಯ ಮಾಡುತ್ತಿದೆ. ಇನ್ನಾದರು ಶಿಕ್ಷಕರು ದಯವಿಟ್ಟು ಎಚ್ಚೆತ್ತುಕೊಂಡು ಯಾವುದೇ ಕಾರಣಕ್ಕೆ ಮಕ್ಕಳನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗುವಾಗ ಅವರಿಗೆ ಅತ್ಯಗತ್ಯವಾದ ಶುಚಿತ್ವದ ನಿಯಮಗಳನ್ನು ಪಾಲಿಸುವಂತೆ ತಿಳಿಸಿ ಹೇಳುವುದು ಉತ್ತಮ.

ಸ್ವಚ್ಚ ಭಾರತ ಕೇವಲ ಗಾಂಧಿ ಜಯಂತಿಯಂದು ಶಾಲೆಯನ್ನು ಸ್ವಚ್ಚ ಮಾಡುವುದರಿಂದ ಸಾಧ್ಯವಿಲ್ಲ. ನಮ್ಮ ಮುಂದಿನ ಜನಾಂಗವಾದ ಮಕ್ಕಳಲ್ಲಿ ಈಗಲೇ ಆ ಬದಲಾವಣೆ ತಂದರೆ, ಮುಂದೆ ಭವಿಷ್ಯದಲ್ಲಿ ಸ್ವಚ್ಚ ಭಾರತ ಸರ್ವೋಚ್ಚ ಭಾರತವಾಗಿ ಪ್ರಪಂಚದಿಂದ ಪ್ರಶಂಸೆಗೊಳ್ಳಲು ಸಾದ್ಯ.

ಒಬ್ಬರಾದರೂ ಬದಲಾಗಬಹುದು ಎನ್ನುವ ಮಹದಾಸೆಯಲ್ಲಿ..

-ರವಿಕಿರಣ್ ಕೋಟ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.