ಕುಂದಾಪುರ: ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ 7ರಿಂದ 9ನೇ ತರಗತಿಯ ವಿದ್ಯಾರ್ಥಿಗಳು
ಪಠ್ಯಪುಸ್ತಕದಿಂದಾಚೆಗಿನ ಅನುಭವಕ್ಕೆ ಸಾಕ್ಷಿಯಾದರು. ಸಂಸ್ಥೆಯ 7, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಕುಂದಾಪುರದ ಕೋಣಿಯಲ್ಲಿರುವ ಗದ್ದೆಗೆ ಹೋಗಿ, ಬಹಳ ಉತ್ಸಾಹದಿಂದ ಭತ್ತದ ಸಸಿಗಳನ್ನು ನೆಡುವುದರ ಮೂಲಕ ಗದ್ದೆ ನಾಟಿಯ ಸ್ವ ಅನುಭವವನ್ನು ಆನಂದಿಸಿದರು.
ಹೀಗೆ ಭಾರತೀಯರ ಪ್ರಧಾನ ಆಹಾರ ಧಾನ್ಯವಾದ ಭತ್ತ ಬೆಳೆಯುವ ವಿಧಾನ, ಆ ದಿಸೆಯಲ್ಲಿ ರೈತನ ಶ್ರಮ ಮತ್ತು ಅವರ ಮಹತ್ವವನ್ನು ಮನಗಂಡರು. ಸಂಸ್ಥೆಯ ಪ್ರಾಂಶುಪಾಲೆ ಚಿಂತನಾ ರಾಜೇಶ್ ಅವರ ಮಾರ್ಗದರ್ಶನ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ ಇವರ ಪ್ರೋತ್ಸಾಹ, ಶಿಕ್ಷಕರಾದ ದಿವ್ಯ ಎನ್., ಕವಿತಾ ಪಿ., ರವಿಚಂದ್ರ, ಪ್ರಕಾಶ್ ಬಿ., ಪವಿತ್ರಾ ಪುತ್ರನ್, ಸರೋಜಾ, ಆಶಾಲತಾ ಮತ್ತು ಪ್ರತಿಮಾ ರವರ ಸಹಯೋಗದೊಂದಿಗೆ ಭತ್ತದ ಗದ್ದೆ ನಾಟಿ ಕಾರ್ಯ ಜರುಗಿತು.
ಈ ವಿಶಿಷ್ಟವಾದ ಚಟುವಟಿಕೆಯನ್ನು ಸಂಸ್ಥೆಯ ಉಪ ಪ್ರಾಂಶುಪಾಲೆ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶುಭ ಕೆ.ಎನ್ ಹಾಗೂ ಪ್ರಾಥಮಿಕ ವಿಭಾಗದ ಸಹಾಯಕ ಮುಖ್ಯ ಶಿಕ್ಷಕಿ ಕವಿತಾ ಭಟ್ ಆಯೋಜಿಸಿದ್ದರು.