ಮುಂಬಯಿ: ನ್ಯೂಜಿಲೆಂಡ್ ಎಡಗೈ ಬೌಲರ್ ಅಜಾಜ್ ಪಟೇಲ್ ಇಂದು ನೂತನ ದಾಖಲೆ ನಿರ್ಮಿಸಿದ್ದಾರೆ. ಮುಂಬಯಿಯಲ್ಲಿ ಹುಟ್ಟಿ ಬೆಳೆದ ಅಜಾಜ್ ಪಟೇಲ್ ಮುಂಬಯಿ ವಾಂಖೆಡೆ ಸ್ಟೇಡಿಯಂನಲ್ಲೇ ಇತಿಹಾಸ ನಿರ್ಮಿಸಿದ್ದಾರೆ.
ಇಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಎರಡನೇ ಟೆಸ್ಟ್ ನಲ್ಲಿ ಎಲ್ಲಾ 10 ವಿಕೆಟ್ ಪಡೆಯುವ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದ 3ನೇ ಆಟಗಾರ ಹಾಗೂ ನ್ಯೂಜಿಲೆಂಡಿನ ಮೊದಲ ಆಟಗಾರ ಎಂಬ ಇತಿಹಾಸ ನಿರ್ಮಿಸಿದ್ದಾರೆ.
ಇಂಗ್ಲೆಂಡ್ ನ ಜಿಮ್ ಲೇಕರ್ 1956ರಲ್ಲಿ ಆಸ್ಟ್ರೇಲಿಯ ವಿರುದ್ಧ 10 ವಿಕೆಟ್ ಪಡೆದಿದ್ದರು. ಅನಿಲ್ ಕುಂಬ್ಳೆ 1999ರಲ್ಲಿ ಪಾಕಿಸ್ತಾನದ ವಿರುದ್ಧ 10 ವಿಕೆಟ್ ಪಡೆದಿದ್ದರು. ಇದೀಗ 10 ವಿಕೆಟ್ ಕ್ಲಬ್ ಗೆ ಅಜಾಜ್ ಪಟೇಲ್ ಸೇರ್ಪಡೆಯಾಗಿದ್ದಾರೆ.
ಸ್ಕೋರ್ ವಿವರ: ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 325ಕ್ಕೆ ಆಲೌಟ್. ಮಾಯಂಕ್ ಅಗರ್ವಾಲ್ 150, ಅಕ್ಷರ್ ಪಟೇಲ್ 52.
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 62 ರನ್ನಿಗೆ ಸರ್ವಪತನವಾಗಿದೆ. ಅಶ್ವಿನ್ ಕೇವಲ 8 ರನ್ ನೀಡಿ 4 ವಿಕೆಟ್ ಪಡೆದರು.
ಭಾರತ ದ್ವಿತೀಯ ಇನ್ನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 69 ರನ್ ಗಳಿಸಿದೆ. ಆರಂಭಿಕ ಆಟಗಾರರಾದ ಮಾಯಂಕ್ ಅಗರ್ವಾಲ್ ಅಜೇಯ 38, ಚೇತೇಶ್ವರ ಪೂಜಾರ ಅಜೇಯ 29 ರನ್ ಗಳಿಸಿದ್ದು ಭಾರತ 332 ರನ್ನುಗಳ ಮುನ್ನಡೆ ಪಡೆದು ಉತ್ತಮ ಸ್ಥಿತಿಯಲ್ಲಿದೆ.