Home ಉದ್ಯೋಗಾವಕಾಶ ಏ.11- ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಏ.11- ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

568
0

ಉಡುಪಿ: ದಿಯಾ ಸಿಸ್ಟಮ್ (ಗ್ಲೋ ಟಚ್) ಮತ್ತು ಜನಸ್ನೇಹಿ ಮಂಗಳೂರು ಕಂಪೆನಿಗಳು ತಮ್ಮ ಕಂಪೆನಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಏಪ್ರಿಲ್ 11 ರಂದು ಬೆಳಗ್ಗೆ 9.45 ರಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಛೇರಿಯಲ್ಲಿ ನೇರ ಸಂದರ್ಶನ ನಡೆಸಲಿದೆ.

ದಿಯಾ ಸಿಸ್ಟಮ್ ಕಂಪೆನಿ ನಡೆಸುವ ಸಂದರ್ಶನಕ್ಕೆ ಬಿ.ಸಿ.ಎ, ಎಮ್.ಸಿ.ಎ, ಬಿ.ಕಾಂ, ಬಿ.ಎಸ್ಸಿ, ಎಮ್.ಎಸ್ಸಿ, ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್, ಬಿ.ಇ ಇಂಜಿನಿಯರಿಂಗ್ ಇತರೆ ಸ್ಟ್ರೀಮ್ಸ್ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಭಾಗವಹಿಸಬಹುದಾಗಿದೆ. ಜನಸ್ನೇಹಿ ಕಂಪೆನಿಗೆ ಯಾವುದೇ ವಿದ್ಯಾರ್ಹತೆ ಇರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ರಜತಾದ್ರಿ, ಮಣಿಪಾಲ ಉಡುಪಿ ಅಥವಾ ಮೊ.ನಂ: 9945856670, 8105618291 ಮತ್ತು 8197440155 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.