Home ಸುದ್ಧಿಗಳು ರಾಷ್ಟ್ರೀಯ ಭಾರತಕ್ಕೆ ಎಂಟ್ರಿ ಕೊಟ್ಟ ಒಮಿಕ್ರಾನ್

ಭಾರತಕ್ಕೆ ಎಂಟ್ರಿ ಕೊಟ್ಟ ಒಮಿಕ್ರಾನ್

964
0

ನವದೆಹಲಿ: ವಿದೇಶಗಳಲ್ಲಿ ಒಮಿಕ್ರಾನ್ ಸದ್ದು ಜೋರಾಗಿರುವ ಬೆನ್ನಲ್ಲೇ ಭಾರತಕ್ಕೆ ಒಮಿಕ್ರಾನ್ ಎಂಟ್ರಿ ಕೊಟ್ಟಿದೆ. ದೇಶದಲ್ಲಿ ಎರಡು ಪ್ರಕರಣ ಕಂಡುಬಂದಿದ್ದು ಎರಡೂ ಕರ್ನಾಟಕದಲ್ಲಿ ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಿಳಿಸಿದ್ದಾರೆ.

ವಿದೇಶಗಳಲ್ಲಿ ಮತ್ತು ಇಂದು ಭಾರತದಲ್ಲಿ ಕಂಡುಬಂದಿರುವ ಒಮಿಕ್ರಾನ್ ಸಂಬಂಧಿತ ಪ್ರಕರಣಗಳು ಇಲ್ಲಿಯವರೆಗೆ ಗಂಭೀರ ರೋಗಲಕ್ಷಣಗಳನ್ನು ಹೊಂದಿಲ್ಲ.

ದೇಶದಲ್ಲಿ ಮತ್ತು ಜಗತ್ತಿನಾದ್ಯಂತ ಇದುವರೆಗೆ ಅಂತಹ ಎಲ್ಲಾ ಪ್ರಕರಣಗಳಲ್ಲಿ ಯಾವುದೇ ತೀವ್ರವಾದ ರೋಗಲಕ್ಷಣವನ್ನು ಗುರುತಿಸಲಾಗಿಲ್ಲ. ಈ ಕುರಿತು ಹೆಚ್ಚಿನ ಅಧ್ಯಯನ ಮಾಡಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ ಎಂದು ಲವ್ ಅಗರ್ವಾಲ್ ಹೇಳಿದರು.

ಅವರ ಎಲ್ಲಾ ಸಂಪರ್ಕಗಳನ್ನು ಗುರುತಿಸಲಾಗಿದೆ. ಆರೋಗ್ಯ ಸಚಿವಾಲಯವು ಸ್ಥಾಪಿಸಿದ 37 ಪ್ರಯೋಗಾಲಯಗಳ ಐ.ಎನ್.ಎಸ್.ಎ.ಸಿ.ಒ.ಜಿ ಒಕ್ಕೂಟದ ಜೀನೋಮ್ ಅನುಕ್ರಮ ಪ್ರಯತ್ನದ ಮೂಲಕ ಇದುವರೆಗೆ ಭಾರತದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ.

ನಾವು ಭಯಪಡುವ ಅಗತ್ಯವಿಲ್ಲ. ಕೋವಿಡ್ ಸೂಕ್ತ ನಡವಳಿಕೆಯ ಅಗತ್ಯವಿದೆ ಎಂದು ಐಸಿಎಂಆರ್ ಡಿಜಿ ಬಲರಾಮ್ ಭಾರ್ಗವ ಹೇಳಿದ್ದಾರೆ.

29 ದೇಶಗಳಲ್ಲಿ ಇಲ್ಲಿಯವರೆಗೆ ಒಮಿಕ್ರಾನ್ ರೂಪಾಂತರದ 373 ಪ್ರಕರಣಗಳು ವರದಿಯಾಗಿವೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.