Wednesday, March 25, 2026
Wednesday, March 25, 2026

ಆನ್‌ಲೈನ್ ಗೇಮಿಂಗ್ ಚಟ; ಅಪ್ರಾಪ್ತ ಸಹೋದರಿಯರ ಆತ್ಮಹತ್ಯೆಯಲ್ಲಿ ಅಂತ್ಯ

ಆನ್‌ಲೈನ್ ಗೇಮಿಂಗ್ ಚಟ; ಅಪ್ರಾಪ್ತ ಸಹೋದರಿಯರ ಆತ್ಮಹತ್ಯೆಯಲ್ಲಿ ಅಂತ್ಯ

Date:

ಗಾಜಿಯಾಬಾದ್‌, ಫೆ.4: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಮೂವರು ಅಪ್ರಾಪ್ತ ಸಹೋದರಿಯರು ಆನ್‌ಲೈನ್ ಗೇಮಿಂಗ್ ವ್ಯಸನಕ್ಕೆ ಪೋಷಕರ ಆಕ್ಷೇಪಣೆ ಬಂದ ನಂತರ ತಮ್ಮ ಅಪಾರ್ಟ್‌ಮೆಂಟ್ ಕಟ್ಟಡದ ಒಂಬತ್ತನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಸವನ್ನಪ್ಪಿದವರನ್ನು ಪಖಿ (12), ಪ್ರಾಚಿ (14) ಮತ್ತು ವಿಶಿಕಾ (16) ಎಂದು ಗುರುತಿಸಲಾಗಿದೆ.

“ಘಟನಾ ಸ್ಥಳಕ್ಕೆ ತಲುಪಿ ತನಿಖೆ ನಡೆಸಿದ ನಂತರ, ಚೇತನ್ ಕುಮಾರ್ ಅವರ ಪುತ್ರಿಯರಾದ ಮೂವರು ಹುಡುಗಿಯರು ಕಟ್ಟಡದಿಂದ ಹಾರಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಯಿತು” ಎಂದು ಶಾಲಿಮಾರ್ ಗಾರ್ಡನ್‌ನ ಸಹಾಯಕ ಪೊಲೀಸ್ ಆಯುಕ್ತ ಅತುಲ್ ಕುಮಾರ್ ಸಿಂಗ್ ಹೇಳಿದರು. “ಅವರನ್ನು ಲೋನಿಯ ಆಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಸಾವನ್ನು ದೃಢಪಡಿಸಿದರು. ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ನಡೆಸುತ್ತಿದ್ದಾರೆ” ಎಂದು ಅವರು ಹೇಳಿದರು.

ಕೋವಿಡ್ ೧೯ ಸಾಂಕ್ರಾಮಿಕ ಸಮಯದಲ್ಲಿ ಅವರು ಆನ್‌ಲೈನ್ ಗೇಮ್ ಗೆ ವ್ಯಸನಿಯಾಗಿದ್ದರು ಮತ್ತು ಆನ್‌ಲೈನ್ ಟಾಸ್ಕ್ ಆಧಾರಿತ ಕೊರಿಯನ್ ಆಟವನ್ನು ಆಡುತ್ತಿದ್ದರು ಎಂದು ವರದಿಯಾಗಿದೆ. ಹುಡುಗಿಯರು ತಮಗೆ ಕೊರಿಯನ್ ಹೆಸರುಗಳನ್ನೇ ಇಟ್ಟುಕೊಳ್ಳುವಷ್ಟು ಗೇಮಿಂಗ್ ವ್ಯಸನಿಗಳಾಗಿದ್ದರು. ಸಹೋದರಿಯರು ಶಾಲೆಗೆ ಆಗಾಗ್ಗೆ ಗೈರಾಗುತ್ತಿದ್ದರು. ಮೂವರಲ್ಲಿ ಹಿರಿಯವಳಾದ ವಿಶಿಕಾ, ಕಲಿಕೆಯಲ್ಲಿ ಅಷ್ಟೊಂದು ಉತ್ತಮವಾಗಿ ತೊಡಗಿಸಿಕೊಳ್ಳಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜೀವನದ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ

Here are some suicide prevention helplines in India:

  • TeleMANAS: 1-8008914416/14416 (available 24/7)

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತರ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸರ್ಕಾರ ನಿರಂತರವಾಗಿ ಪ್ರಯತ್ನಗಳನ್ನು ಮಾಡಿದೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಮಾ.24: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ರಾಜ್ಯಸಭೆಯಲ್ಲಿ ಮಂಗಳವಾರ...

ಇನ್ಸಿಡೆಂಟ್ 2026: ನಿಟ್ಟೆ ವಿದ್ಯಾರ್ಥಿಗಳಿಗೆ ಬಹುಮಾನ

ಕಾರ್ಕಳ, ಮಾ.24: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಆಯೋಜಿಸಿದ ವಾರ್ಷಿಕ...

ಆಸ್ಟ್ರೋ ಮೋಹನ್ ಅವರಿಗೆ ಅಂತರರಾಷ್ಟ್ರೀಯ ಗೌರವ

ಉಡುಪಿ, ಮಾ.23: ಅಂತರರಾಷ್ಟ್ರೀಯ ಖ್ಯಾತಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕರು ಹಾಗೂ ಕ್ಯಾನನ್ ಇಓಎಸ್...
error: Content is protected !!