Home ಸುದ್ಧಿಗಳು ರಾಷ್ಟ್ರೀಯ ಖುಷ್ಬುಗೆ ಸುಪರ್ ಗ್ಲೋಬಲ್ ಇಂಟರ್ನ್ಯಾಶನಲ್ 2023 ರನ್ನರ್ ಅಪ್ ಕಿರೀಟ

ಖುಷ್ಬುಗೆ ಸುಪರ್ ಗ್ಲೋಬಲ್ ಇಂಟರ್ನ್ಯಾಶನಲ್ 2023 ರನ್ನರ್ ಅಪ್ ಕಿರೀಟ

1116
0

ಪಣಜಿ, ಜು. 30: ಫ್ಲೇಮ್ ಫೈರ್ ಪ್ರೊಡಕ್ಶನ್ಸ್ ನೇತೃತ್ವದಲ್ಲಿ ಗೋವಾದಲ್ಲಿ ನಡೆದ ನಡೆದ ಮಿಸೆಸ್ ಸುಪರ್ ಗ್ಲೋಬಲ್ ಇಂಟರ್ನ್ಯಾಶನಲ್ 2023 ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗಳೂರಿನ ಖುಷ್ಬು ವರ್ಮಾ ಸೆಕೆಂಡ್ ರನ್ನರ್ ಅಪ್ ಆಗಿ ಮೂಡಿಬಂದಿದ್ದಾರೆ. ನಾಲ್ಕು ಸುತ್ತಿನಲ್ಲಿ ನಡೆದ ಸ್ಪರ್ಧ್ವೆಯಲ್ಲಿ ಸೌಂದರ್ಯ. ಕೌಶಲ, ಬುದ್ಧಿಮತ್ತೆಯ ಆಧಾರದಲ್ಲಿ ಅಂಕಗಳನ್ನು ನೀಡಲಾಯಿತು. ಪರಿಚಯ ಸುತ್ತು, ಟ್ಯಾಲೆಂಟ್ ರೌಂಡ್, ಸಾಂಪ್ರದಾಯಿಕ ಉಡುಗೆ ಮತ್ತು ಪ್ರಶ್ನೋತ್ತರ ಸುತ್ತನ್ನು ಒಳಗೊಂಡಿದ್ದವು. ನಂತರ ಪಾಶ್ಚಾತ್ಯ ಉಡುಗೆಯಲ್ಲಿ ಕ್ಯಾಟ್ ವಾಕ್ ನಡೆಯಿತು. ತೀರ್ಪುಗಾರರು ಮತ್ತು ಉತ್ಸಾಹಿ ಪ್ರೇಕ್ಷಕರನ್ನು ತನ್ನದೇ ಶೈಲಿಯಲ್ಲಿ ಮೆಚ್ಚಿಸಿದ ಖುಷ್ಬು ರನ್ನರ್ ಅಪ್ ಪ್ರಶಸ್ತಿಗೆ ಪಾತ್ರರಾದರು.

ಕರ್ನಾಟಕ ಮೂಲದ ಖುಷ್ಬು ವರ್ಮಾ ಅವರು ಮಂಗಳೂರಿನ ರೋಶನಿ ನಿಲಯದ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ಮತ್ತು ಬೆಂಗಳೂರಿನ ಸೇಂಟ್ ಅಲೋಶಿಯಸ್ ಪದವಿ ಕಾಲೇಜಿನ ಹಳೆ ವಿದ್ಯಾರ್ಥಿ. ಅವರು ವೃತ್ತಿಪರ ಸಾಮಾಜಿಕ ಕಾರ್ಯಕರ್ತೆಯಾಗಿ ಸಮಾಜಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ದೆಹಲಿಯಲ್ಲಿ ನಡೆದ ಮಿಸೆಸ್ ಇಂಡಿಯಾ ಗ್ಯಾಲಕ್ಸಿ 2022 ರಲ್ಲಿ ಬೆಳ್ಳಿ ಪದಕ ಮತ್ತು ಬೆಸ್ಟ್ ವಾಕ್ ವಿಭಾಗದಲ್ಲಿ ಪ್ರಶಸ್ತಿ ಖುಷ್ಬು ಗಮನಾರ್ಹ ಸಾಧನೆಗಳಲ್ಲಿ ಸೇರಿವೆ.. ಮಿಸೆಸ್ ಇಂಡಿಯಾ ಅರ್ಥ್ 2022 ರಲ್ಲಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಮಿಸೆಸ್ ಇಂಡಿಯಾ ಏಷ್ಯಾ 2023 ರಲ್ಲಿ ಅತ್ಯುತ್ತಮ ಕ್ಯಾಟ್ ವಾಕ್ ವಿಜೇತ ಪ್ರಶಸ್ತಿಯನ್ನು ಅವರು ಪಡೆದಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.