Tuesday, November 17, 2026
Tuesday, November 17, 2026

ಭಾರತದ ಎಲ್.ಪಿ.ಜಿ ಪೂರೈಕೆ ನಿರಂತರ: ಇಂಡಿಯನ್ ಆಯಿಲ್

ಭಾರತದ ಎಲ್.ಪಿ.ಜಿ ಪೂರೈಕೆ ನಿರಂತರ: ಇಂಡಿಯನ್ ಆಯಿಲ್

Date:

ನವದೆಹಲಿ, ಏ.4: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಬೆಳವಣಿಗೆಗಳು ಜಾಗತಿಕ ಇಂಧನ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತಿದ್ದರೂ, ಭಾರತದ ಎಲ್.ಪಿ.ಜಿ ಪೂರೈಕೆ ಸ್ಥಿರ ಮತ್ತು ಸಮರ್ಪಕವಾಗಿದೆ. ಒಂದು ಹೇಳಿಕೆಯಲ್ಲಿ, ಇಂಡಿಯನ್ ಆಯಿಲ್ ಮನೆಗಳಿಗೆ ನಿರಂತರ ಎಲ್.ಪಿ.ಜಿ ಪೂರೈಕೆಯನ್ನು ಕಾಯ್ದುಕೊಂಡಿದೆ ಮತ್ತು ಪ್ರಸ್ತುತ ಪ್ರತಿದಿನ ಸುಮಾರು 28 ಲಕ್ಷ ಎಲ್.ಪಿ.ಜಿ ಸಿಲಿಂಡರ್‌ಗಳನ್ನು ವಿತರಿಸುತ್ತಿದೆ ಎಂದು ಹೇಳಿದೆ. ಇದು ಪ್ರಸ್ತುತ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಪ್ರಾರಂಭವಾಗುವ ಮೊದಲು ಸಾಮಾನ್ಯ ವಿತರಣಾ ಮಟ್ಟಕ್ಕೆ ಅನುಗುಣವಾಗಿದೆ. ಎಲ್.ಪಿ.ಜಿ ಮರುಪೂರಣಗಳನ್ನು ಬುಕಿಂಗ್ ಮಾಡಲು ಎಸ್.ಎಂ.ಎಸ್ ಮತ್ತು ಐವಿಅರ್.ಎಸ್. ನಂತಹ ಡಿಜಿಟಲ್ ವಿಧಾನಗಳನ್ನು ಬಳಸಲು ಕಂಪನಿಯು ಗ್ರಾಹಕರನ್ನು ಪ್ರೋತ್ಸಾಹಿಸಿದೆ.

ಪ್ರಸ್ತುತ, ಸುಮಾರು 87 ಪ್ರತಿಶತ ಬುಕಿಂಗ್‌ಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸ್ವೀಕರಿಸಲಾಗುತ್ತಿದೆ ಎಂದು ಇಂಡಿಯನ್ ಆಯಿಲ್ ಹೇಳಿದೆ. ಕೆಲವು ಎಲ್.ಪಿ.ಜಿ ವಿತರಕರ ದುಷ್ಕೃತ್ಯಗಳ ವರದಿಗಳನ್ನು ಸಾಮಾಜಿಕ ಮಾಧ್ಯಮ ಮತ್ತು ಗ್ರಾಹಕರ ದೂರುಗಳ ಮೂಲಕ ಗಮನಿಸಲಾಗಿದೆ. ಕಪ್ಪು ಮಾರುಕಟ್ಟೆ ಮತ್ತು ಸಂಗ್ರಹಣೆಯನ್ನು ನಿಗ್ರಹಿಸಲು, ಎಲ್.ಪಿ.ಜಿ ವಿತರಕರ ಅನಿರೀಕ್ಷಿತ ತಪಾಸಣೆ ನಡೆಸಲು ಕಾರ್ಯಕಾರಿ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅದು ಹೇಳಿದೆ. ಏಳು ಸಾವಿರ 500 ಕ್ಕೂ ಹೆಚ್ಚು ತಪಾಸಣೆಗಳನ್ನು ನಡೆಸಲಾಗಿದೆ ಮತ್ತು 141 ಎಲ್.ಪಿ.ಜಿ ವಿತರಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲಾವಿದರೆಂದರೆ ಕಲಾತಪಸ್ವಿಗಳು: ಪೇಜಾವರ ಶ್ರೀ

ಉಡುಪಿ, ನ.16: ತಮ್ಮ ಬದುಕನ್ನೇ ಯಕ್ಷಗಾನಕ್ಕೆ ಮುಡಿಪಾಗಿಟ್ಟು ಕಲಾರಸಿಕರನ್ನು ರಂಜಿಸಿ ಯಕ್ಷಗಾನವನ್ನು...

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ

ಉಡುಪಿ, ನ.16: ನಗರದ ಕವಿ ಮುದ್ದಣ ಮಾರ್ಗದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆಯ...

ಬಾಲಕಾರ್ಮಿಕ ಪದ್ಧತಿ ತಡೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ

ಧಾರವಾಡ, ನ.16: ಬಾಲಕಾರ್ಮಿಕ ಪದ್ಧತಿಯನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವುದು...
error: Content is protected !!