Home ಸುದ್ಧಿಗಳು ರಾಷ್ಟ್ರೀಯ ಭಾರತದ ಚೆಲುವೆಗೆ ಮಿಸ್ ಯುನಿವರ್ಸ್ ಕಿರೀಟ

ಭಾರತದ ಚೆಲುವೆಗೆ ಮಿಸ್ ಯುನಿವರ್ಸ್ ಕಿರೀಟ

975
0

ಐಲಾಟ್: ಇಸ್ರೇಲ್ ನ ಐಲಾಟ್ ನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಯುನಿವರ್ಸ್ ಕಿರೀಟ ಭಾರತದ ಬೆಡಗಿ ಹರ್ನಾಜ್ ಸಂಧು (21) ಪಾಲಾಗಿದೆ.

ತನ್ಮೂಲಕ ಸೌಂದರ್ಯ ಸ್ಪರ್ಧೆಯಲ್ಲಿ ಭಾರತಕ್ಕೆ 21 ವರ್ಷಗಳ ಬಳಿಕ ಮಿಸ್ ಯುನಿವರ್ಸ್ ಗೌರವ ಸಿಕ್ಕಿದೆ. ಮೆಕ್ಸಿಕೋದ 2020ದ ಮಾಜಿ ವಿಶ್ವ ಸುಂದರಿ ಆಂಡ್ರಿಯಾ ಮೆಜಾ ಹರ್ನಾಜ್ ಸಂಧುಗೆ ಕಿರೀಟ ತೊಡಿಸಿದರು.

ಪರಾಗ್ವೆ, ದಕ್ಷಿಣ ಆಫ್ರಿಕಾ ಬೆಡಗಿಯರು ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಗೌರವಕ್ಕೆ ಪಾತ್ರರಾದರು. 1994 ರಲ್ಲಿ ಸುಶ್ಮಿತಾ ಸೇನ್ ಮತ್ತು 2000ರಲ್ಲಿ ಲಾರಾ ದತ್ತಾ ಮಿಸ್ ಯುನಿವರ್ಸ್ ಕಿರೀಟ ಪಡೆದಿದ್ದರು. ಹರ್ನಾಜ್ ಸಂಧು ಕೆಲವು ಪಂಜಾಬಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಕಿರೀಟ ಧರಿಸಿದ ನಂತರ ಮಾತನಾಡಿದ ಅವರು, ನಾವು ನಮ್ಮಲ್ಲಿ ವಿಶ್ವಾಸವನ್ನು ಇಡಬೇಕು. ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ಇತರರೊಂದಿಗೆ ಹೋಲಿಕೆ ಮಾಡುವ ಬದಲು ನಮ್ಮ ಗುರಿ ಸಾಧನೆಗೆ ಒತ್ತು ಕೊಡಬೇಕು ಎಂದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.