ದುಬೈ, ಸೆ.29: ಭಾನುವಾರ ದುಬೈ ನಲ್ಲಿ ನಡೆದ ಏಷ್ಯಾ ಕಪ್ ಫೈನಲ್ ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ ಅಜೇಯವಾಗಿ ದಿಗ್ವಿಜಯ ಸಾಧಿಸಿದೆ. ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಏಷ್ಯಾ ಕಪ್‌ನ ಸಂಪೂರ್ಣ ಪಂದ್ಯ ಶುಲ್ಕವನ್ನು ದೇಶದ ಸಶಸ್ತ್ರ ಪಡೆಗಳು ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ದಾನ ಮಾಡಲಿದ್ದಾರೆ.
“ನಮ್ಮ ಸಶಸ್ತ್ರ ಪಡೆಗಳು ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತ ಕುಟುಂಬಗಳನ್ನು ಬೆಂಬಲಿಸಲು ಈ ಪಂದ್ಯಾವಳಿಯ ನನ್ನ ಪಂದ್ಯ ಶುಲ್ಕವನ್ನು ದಾನ ಮಾಡಲು ನಾನು ನಿರ್ಧರಿಸಿದ್ದೇನೆ. ನೀವು ಯಾವಾಗಲೂ ನನ್ನ ಆಲೋಚನೆಗಳಲ್ಲಿರುತ್ತೀರಿ. ಜೈ ಹಿಂದ್,” ಎಂದು ಸೂರ್ಯಕುಮಾರ್ ಯಾದವ್ ಗೆಲುವಿನ ನಂತರ ‘X’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಟಿ20 ಪಂದ್ಯದಲ್ಲಿ ಭಾರತದ ಆಟಗಾರರು ಪ್ರತಿ ಪಂದ್ಯಕ್ಕೆ ನಾಲ್ಕು ಲಕ್ಷ ರೂ.ಗಳನ್ನು ಪಡೆಯುತ್ತಾರೆ. ಅಂದರೆ ಸೂರ್ಯಕುಮಾರ್ ಯಾದವ್ ಏಳು ಪಂದ್ಯಗಳಿಗೆ ಒಟ್ಟು 28 ಲಕ್ಷ ರೂ.ಗಳನ್ನು ದೇಣಿಗೆ ನೀಡಲಿದ್ದಾರೆ.




By
ForthFocus™