Monday, January 20, 2025
Monday, January 20, 2025

ಬದುಕು ರೂಪಿಸಿಕೊಳ್ಳಲು ವಿವೇಕ ಮುಖ್ಯವಾಗಿದ್ದು ಇದನ್ನು ಶ್ರೀಕೃಷ್ಣನು ಮನುಕುಲಕ್ಕೆ ತೋರಿಸಿದ್ದಾನೆ: ಡಾ| ಎಸ್.ಎಲ್ ಭೈರಪ್ಪ

ಬದುಕು ರೂಪಿಸಿಕೊಳ್ಳಲು ವಿವೇಕ ಮುಖ್ಯವಾಗಿದ್ದು ಇದನ್ನು ಶ್ರೀಕೃಷ್ಣನು ಮನುಕುಲಕ್ಕೆ ತೋರಿಸಿದ್ದಾನೆ: ಡಾ| ಎಸ್.ಎಲ್ ಭೈರಪ್ಪ

Date:

ಮುಂಬಯಿ: ಕೃಷ್ಣನ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಇರುವ ತಿಳುವಳಿಕೆ ನನಗಿಲ್ಲ. ಕೃಷ್ಣ ಅನ್ನುವ ದೇವರ ಬಗ್ಗೆ ವೇದ, ಉಪನಿಷತ್ತುನಲ್ಲಿ ಬಂದಿದೆ. ದಶಾವತಾರಗಳಲ್ಲಿ ಬಹಳ ಮುಖ್ಯವಾದುದು ಅಂದರೆ ರಾಮ-ಕೃಷ್ಣರ ಬದುಕಾಗಿದೆ. ಕರಾವಳಿ ಜನತೆ ಕೃಷ್ಣನ ಮಹಾನ್ ಅನುಭವಿಗಳು. ಬದುಕು ರೂಪಿಸಿಕೊಳ್ಳಲು ವಿವೇಕ ಮುಖ್ಯವಾಗಿದ್ದು ಇದನ್ನು ಶ್ರೀಕೃಷ್ಣನು ಮನುಕುಲಕ್ಕೆ ತೋರಿಸಿದ್ದಾನೆ. ಇಂತಹ ಸಾಧನೆ ಈ ಗೋಕುಲ ಮತ್ತೆ ಪುನರ್‌ರೂಪಿಸಿದೆ ಎಂದು ಕಾದಂಬರಿಕಾರ ಪದ್ಮಶ್ರೀ ಡಾ| ಎಸ್.ಎಲ್ ಭೈರಪ್ಪ ಹೇಳಿದರು.

ಅವರು ಸಯಾನ್ ಪೂರ್ವದ ಗೋಕುಲ ನೂತನ ಸಭಾಗೃಹದಲ್ಲಿ ಗೋಕುಲದ ಬ್ರಹ್ಮಕಲಶೋತ್ಸವ ಸಮಾರಂಭದ ನಾಲ್ಕನೇ ದಿನದ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಪ್ರಧಾನ ಅಭ್ಯಾಗತರಾಗಿ ಮುಂಬಯಿಯ ಹಿರಿಯ ಸಾಹಿತಿ, ವಿಜ್ಞಾನಿ, ಗೋಕುಲ ಮಾಸಿಕದ ಸಂಪಾದಕ ಡಾ| ವ್ಯಾಸರಾವ್ ನಿಂಜೂರು, ಮುಂಬಯಿಯ ಹಿರಿಯ ಸಾಹಿತಿ ಮಿತ್ರ ವೆಂಕಟ್ರಾಜ್, ಕಲ್ಕೂರ ಪ್ರತಿಷ್ಠಾನ ಮಂಗಳೂರು ಅಧ್ಯಕ್ಷ, ಕಸಾಪ ದ.ಕ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ ಉಪಸ್ಥಿತರಿದ್ದರು.

ವೈಕುಂಠ ಹುಡುಕಿಕೊಂಡು ಹೋಗಬೇಕಾಗಿಲ್ಲ ನಾವಿದ್ದಲೇ ಸೃಷ್ಟಿಸಬಹುದು: ಕಲ್ಕೂರ
ಪ್ರದೀಪ್ ಕಲ್ಕೂರ ಮಾತನಾಡಿ, ವೈಕುಂಠ ಹುಡುಕಿಕೊಂಡು ಹೋಗಬೇಕಾಗಿಲ್ಲ. ನಾವಿದ್ದಲ್ಲೇ ಸೃಷ್ಟಿಸಬಹುದು ಎಂದು ಡಾ| ಸುರೇಶ್ ರಾವ್ ತೋರಿಸಿ ಕೊಟ್ಟಿದ್ದಾರೆ. ನಾನು ಮುಂಬಯಿ ನಗರದ ನಮ್ಮವರ ಜೀವನ ಅದ್ಭುತವಾಗಿ ಆಶ್ವರ್ಯಕರ ರೀತಿಯಲ್ಲಿ ತಿಳಿದಿದ್ದೇನೆ. ಮುಂಬಯಿಗರ ಆತಿಥ್ಯ ಸತ್ಕಾರವೇ ಮನುಕುಲದ ಶ್ರೇಷ್ಠತೆ ಆಗಿದೆ. ಉಡುಪಿಯ ನಂತರ ಮುಂಬಯಿಯಲ್ಲಿ ರಾಜಾಂಗಣದ ಸೃಷ್ಟಿ ಮಾಡಿರುವುದು ಪ್ರಶಂಸನೀಯ. ಗೋಕುಲ ಮನುಕುಲದ ಸ್ವಾಯತ್ತೆಯನ್ನು ಜಾಗತಿಕವಾಗಿ ಪರಿಚಯಿಸಿದೆ ಎಂದರು.

ಕೃಷ್ಣನು ನನಗೆ ಬಲು ಹತ್ತಿರ – ಡಾ| ನಿಂಜೂರು
ಡಾ| ನಿಂಜೂರು ಮಾತನಾಡಿ ಕೃಷ್ಣನು ನನಗೆ ಬಲು ಹತ್ತಿರ. ಕಾರಣ ನಾನು ಉಡುಪಿಯವನು. ಆರಾಧ್ಯ ಕೃಷ್ಣನನ್ನು ಇಷ್ಟು ಸಣ್ಣ ಜಾಗದಲ್ಲಿ ಇಷ್ಟು ಭವ್ಯ ಸಂಕೀರ್ಣ ಮಾಡಿ ತೋರಿಸಿದ ಸುರೇಶ್ ರಾವ್ ಅವರ ತಂಡದ ಕೆಲಸ ಪ್ರಶಂಸನೀಯ ಎಂದರು.

ಗೋಕುಲಕ್ಕೆ ಬರುವುದು ಅಂದರೆ ತವರೂರ ಮನೆಗೆ ಹೋಗುವ ಅನುಭವ – ಮಿತ್ರ ವೆಂಕಟ್ರಾಜ್
ಗೋಕುಲದ ಸಂಭ್ರಮದ ಪ್ರವಾಸ ಸಾಗರೋತ್ತರವಾಗಿ ವ್ಯಾಪಿಸುತ್ತಿರುವುದು ಅಭಿನಂದನೀಯ. ಸುಮಾರು ಐದು ದಶಕಗಳ ನಿಕಟ ಪರಿಚಯ ಅನುಭವ ಇರುವ ಹಳೇ ಗೋಕುಲ ನವೀಕೃತಗೊಂಡು ಅದರ ಸೊಬಗನ್ನು ಅನುಭವಿಸುವುದು ನನ್ನನ್ನು ಮತ್ತಷ್ಟು ಪುಲಕಿತಗೊಳಿಸಿದೆ ಎಂದು ಮಿತ್ರ ವೆಂಕಟ್ರಾಜ್ ತಿಳಿಸಿದರು.

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಿಗ್ಗೆ ಸ್ವಸ್ತಿ ಪುಣ್ಯಾಹ ವಾಚನ, ಕೃಷ್ಣ ಮಂತ್ರ ಹೋಮ, ಶ್ರೀ ಅಷ್ಠಾಕ್ಷರ ಹೋಮ, ಮಹಾಪೂಜೆ, ಸಂಜೆ ನಾಗ ತಾನುತರ್ಪಣಾ, ಪ್ರಸನ್ನ ಪೂಜೆ, ಮಹಾಪೂಜೆ ನೆರವೇರಿಸಲ್ಪಟ್ಟವು. ಗೋಕುಲದ ಹಿರಿಯ ಪುರೋಹಿತ ವಿದ್ವಾನ್ ವೇ| ಮೂ| ಎಡಪದವು ಮುರಳೀಧರ ತಂತ್ರಿ, ಪುರೋಹಿತ ಕೃಷ್ಣರಾಜ ಉಪಾಧ್ಯಾಯ, ವಿದ್ವಾನ್ ಪಂಜ ಭಾಸ್ಕರ್ ಭಟ್, ವಿದ್ವಾನ್ ಎಸ್.ಎನ್ ಉಡುಪ, ದಿನೇಶ್ ಉಪಣ, ಪಡುಬಿದ್ರಿ ವಿ.ರಾಜೇಶ್ ರಾವ್ ಪೂಜಾದಿಗಳನ್ನು ನೆರವೇರಿಸಿದರು.

ಶಶಿಕಿರಣ್ ರಾವ್ ಮತ್ತು ತೃಪ್ತಿ ರಾವ್, ಎಸ್.ರಾಮವಿಠಲ್ ಕಲ್ಲೂರಾಯ ಮತ್ತು ಜ್ಯೋತಿ ಕಲ್ಲೂರಾಯ, ಎ.ಪಿ.ಕೆ ಪೋತಿ ಮತ್ತು ಸಹನಾ ಪೋತಿ ದಂಪತಿಗಳು ಪೂಜಾದಿಗಳ ಯಜಮಾನತ್ವ ವಹಿಸಿದ್ದರು. ಡಾ| ಮನೋಜ್ ಹುನ್ನೂರು ಪೂಜೆಯ ಸೇವಾರ್ಥಿಗಳಾಗಿದ್ದರು. ವಿವಿಧ ಭಜನಾ ಮಂಡಳಿಗಳು ಭಜನೆ ನಡೆಸಿದವು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ವಿದುಷಿ ನಳೀನ್ ರಾವ್ ಮತ್ತು ವಿದುಷಿ ವೀಣಾ ರಾವ್ ಇವರಿಂದ ಭಕ್ತಿ ರಸಮಂಜರಿ, ಸಂಜೆ ಮೈಸೂರು ಅಸೋಸಿಯೇಶನ್ ಮುಂಬಯಿ ಇದರ ಲಲಿತಾ ಕಲಾ ವಿಭಾಗದಿಂದ ಡಾ| ಬಿ.ಆರ್ ಮಂಜುನಾಥ ರಚನೆ, ನಿರ್ದೇಶಿತ ಸಾಕಾರ ಕನ್ನಡ ನಾಟಕ, ಅಮೃತಾ ನಾತು ಮತ್ತು ಗೌರವ್ ಬನ್ಗಿಯಾ ಇವರಿಂದ ರಸಮಂಜರಿ ಹಾಗೂ ವಿದ್ವಾನ್ ಪವಿತ್ರ ಭಟ್ ಮತ್ತು ಶಿಷ್ಯಂದಿರು ರಂಗನಾಥ ಒರಗಿರುವ ಪ್ರಭು ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

ಬಿಎಸ್‌ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಬಿಎಸ್‌ಕೆಬಿ ಉಪಾಧ್ಯಕ್ಷೆ ಶೈಲಿನಿ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಈ ಸಂದರ್ಭದಲ್ಲಿ ಸುಧೀರ್ ಆರ್.ಎಲ್ ಶೆಟ್ಟಿ, ಡಾ| ಸದಾನಂದ ಆರ್.ಶೆಟ್ಟಿ, ಡ್| ಪಿ.ಜಿ ರಾವ್, ಸುರೇಖಾ ಹೆಚ್.ದೇವಾಡಿಗ, ಡಾ| ಸುರೇಂದ್ರಕುಮಾರ್ ಹೆಗ್ಡೆ, ಪರೀತ ಶ್ರೀನಿವಾಸ ಭಟ್, ಭುಜಂಗ ರಾವ್, ತಾರಾ ಬಿ.ರಾವ್, ಬಿ.ರಮಾನಂದ ರಾವ್, ಮಹಿಳಾ ವಿಭಾಗಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ವಿಜಯಲಕ್ಷ್ಮೀ ಸುರೇಶ್ ರಾವ್ ಮತ್ತಿತರ ಪದಾಧಿಕಾರಿಗಳು, ಪಾಲ್ಗೊಂಡಿದ್ದರು.

ಮಮತಾ ಶಾಸ್ತ್ರಿ ಪ್ರಾರ್ಥನೆಗೈದರು. ಉಪಾಧ್ಯಕ್ಷ ವಾಮನ ಹೊಳ್ಳ ಸ್ವಾಗತಿಸಿದರು. ಡಾ| ರಮಾ ಉಡುಪ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸಿಎ ಹರಿದಾಸ ಭಟ್ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!