Friday, March 20, 2026
Friday, March 20, 2026

ಘೋಷಣೆ ಕೂಗಿದ್ದಕ್ಕಾಗಿ ಎಂಟು ಕಾಂಗ್ರೆಸ್ ಲೋಕಸಭಾ ಸಂಸದರು ಅಮಾನತು

ಘೋಷಣೆ ಕೂಗಿದ್ದಕ್ಕಾಗಿ ಎಂಟು ಕಾಂಗ್ರೆಸ್ ಲೋಕಸಭಾ ಸಂಸದರು ಅಮಾನತು

Date:

ನವದೆಹಲಿ, ಫೆ.3: ಸಭಾಪತಿ ದಿಲೀಪ್ ಸೈಕಿಯಾ ಅವರು ಕಾಂಗ್ರೆಸ್ ಸಂಸದರಾದ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಗುರುದೀಪ್ ಸಿಂಗ್ ಔಜ್ಲಾ, ಹಿಬಿ ಈಡನ್, ಡೀನ್ ಕುರಿಯಾಕೋಸ್, ಪ್ರಶಾಂತ್ ಪಡೋಲೆ, ಕಿರಣ್ ಕುಮಾರ್ ರೆಡ್ಡಿ, ಎಸ್ ವೆಂಕಟರಾಮನ್ ಮತ್ತು ಮಾಣಿಕ್ಕಮ್ ಟ್ಯಾಗೋರ್ ಅವರನ್ನು ಘೋಷಣೆ ಕೂಗಿದಕ್ಕಾಗಿ ಮತ್ತು ಕಾಗದ ಹರಿದು ಚೆಲ್ಲಿದಕ್ಕಾಗಿ ಅಮಾನತುಗೊಳಿಸಲಾಗಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸದಸ್ಯರನ್ನು ಪಟ್ಟಿ ಮಾಡಿ, ಅಧಿವೇಶನದ ಉಳಿದ ಅವಧಿಗೆ ಅವರನ್ನು ಅಮಾನತುಗೊಳಿಸಲು ಮುಂದಾದರು. ಇದನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು ಮತ್ತು ಲೋಕಸಭೆಯನ್ನು ಬುಧವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಶ್ಚಿಮ ಏಷ್ಯಾ ಪ್ರದೇಶಗಳಿಗೆ ಇಂದಿನಿಂದ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇವೆ ಆರಂಭ

ನವದೆಹಲಿ, ಮಾ.19: ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಇಂದಿನಿಂದ...

ನಿಟ್ಟೆ: ಐ.ಆರ್.ಎಸ್.ಎಂ ರಾಷ್ಟ್ರೀಯ ಸಿಂಪೋಸಿಯಂ

ನಿಟ್ಟೆ, ಮಾ.19: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ...

ಆರೋಗ್ಯ ಇಲಾಖೆಯ ವಿವಿಧ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಮಾ.19: ಆರೋಗ್ಯ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕಭೀ ಕಾರ್ಯಕ್ರಮದಡಿಯಲ್ಲಿ...
error: Content is protected !!