ಮಂಡಿ, ಆ.24: ಆರೋಗ್ಯ ಕಾರ್ಯಕರ್ತರ ತ್ಯಾಗವನ್ನು ಕೋವಿಡ್ ಸಂದರ್ಭದಲ್ಲಿ ಬಹಳಷ್ಟು ನೋಡಿದ್ದೇವೆ. ಆದರೆ ಇತ್ತೀಚೆಗೆ ಹಿಮಾಚಲ ಪ್ರದೇಶದ ಮಂಡಿ ಎಂಬಲ್ಲಿ ಕಮಲಾ ದೇವಿ ಎಂಬ ಆರೋಗ್ಯ ಕಾರ್ಯಕರ್ತೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಪ್ರವಾಹದಿಂದ ತುಂಬಿದ್ದ ನದಿಯನ್ನು ದಾಟಿ ಹುರಾಂಗ್ ಗ್ರಾಮವನ್ನು ತಲುಪಿ ಶಿಶುಗಳಿಗೆ ಲಸಿಕೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಜನರು ಮೆಚ್ಚುಗೆಯ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಭೂಕುಸಿತದಿಂದಾಗಿ ರಸ್ತೆಗಳು ಮುಚ್ಚಿ ಹೋಗಿದ್ದರೂ, ಕಮಲಾ ದೇವಿ ಅವರು ಧೈರ್ಯ ಮತ್ತು ದೃಢಸಂಕಲ್ಪದಿಂದ ತಮ್ಮ ಕರ್ತವ್ಯವನ್ನು ಸಮರ್ಪಣಾ ಮನೋಭಾವನೆಯಿಂದ ನಿರ್ವಹಿಸಿದ್ದು, ತಮ್ಮ ಕೆಲವನ್ನು ಸರಿಯಾದ ನಿರ್ವಹಿಸದವರಿಗೆ ಈ ಘಟನೆ ಒಂದು ಆತ್ಮವಿಮರ್ಶೆ ಮಾಡುವ ವೇದಿಕೆಯನ್ನು ಒದಗಿಸಿದೆ.
ಪ್ರಾಣವನ್ನೇ ಪಣಕ್ಕಿಟ್ಟು ಪ್ರವಾಹದಿಂದ ತುಂಬಿದ್ದ ನದಿಯನ್ನು ದಾಟಿ ಶಿಶುಗಳಿಗೆ ಲಸಿಕೆ ಹಾಕಿದ ಆರೋಗ್ಯ ಕಾರ್ಯಕರ್ತೆ
ಪ್ರಾಣವನ್ನೇ ಪಣಕ್ಕಿಟ್ಟು ಪ್ರವಾಹದಿಂದ ತುಂಬಿದ್ದ ನದಿಯನ್ನು ದಾಟಿ ಶಿಶುಗಳಿಗೆ ಲಸಿಕೆ ಹಾಕಿದ ಆರೋಗ್ಯ ಕಾರ್ಯಕರ್ತೆ
Date:




By
ForthFocus™