Home ಸುದ್ಧಿಗಳು ರಾಷ್ಟ್ರೀಯ ಗೆಳತಿಯನ್ನೇ ಕೊಂದು ಶವವನ್ನು ಮೆಡಿಕಲ್ ಶಾಪ್‌ನಲ್ಲಿ ಇಟ್ಟಿದ್ದ ಯುವಕ ಪೊಲೀಸರ ವಶಕ್ಕೆ

ಗೆಳತಿಯನ್ನೇ ಕೊಂದು ಶವವನ್ನು ಮೆಡಿಕಲ್ ಶಾಪ್‌ನಲ್ಲಿ ಇಟ್ಟಿದ್ದ ಯುವಕ ಪೊಲೀಸರ ವಶಕ್ಕೆ

569
0

ನವದೆಹಲಿ: ರಾಜ್ಯ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಗೆಳತಿಯನ್ನು ಕೊಲೆ ಮಾಡಿ ನಾಲ್ಕು ದಿನಗಳ ಕಾಲ ತನ್ನದೇ ಮೆಡಿಕಲ್ ಸ್ಟೋರ್ ನಲ್ಲಿ ಶವ ಇಟ್ಟ ಘಟನೆ ಛತ್ತೀಸ್ಗಢದ ಬಿಲಾಸ್ಪುರ ಜಿಲ್ಲೆಯಲ್ಲಿ ನಡೆದಿದೆ. ಗೆಳತಿಯ ಮೃತದೇಹವನ್ನು ಬಟ್ಟೆಯೊಂದರಲ್ಲಿ ಸುತ್ತಿ ಕಾರಿನಲ್ಲಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕೊಲೆಗಡುಕ ವ್ಯಕ್ತಿ ಆಶೀಶ್ ಸಾಹು ಎಂದು ತಿಳಿದುಬಂದಿದೆ. ಆತನ ಗೆಳತಿ ಪ್ರಿಯಾಂಕಾ ನಡುವೆ ಹಣಕಾಸಿನ ವಿಚಾರವಾಗಿ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇಬ್ಬರೂ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರು. ಷೇರು ಮಾರುಕಟ್ಟೆಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಆತನು ಪ್ರಿಯಾಂಕಾ ಬಳಿ ಸಾಲ ಪಡೆದಿದ್ದ 11 ಲಕ್ಷ ರೂಪಾಯಿಯನ್ನು ಹಿಂದಿರುಗಿಸುವಂತೆ ಆಕೆ ಒತ್ತಡ ಹೇರಿದ ಕಾರಣ ಕೊಲೆ ನಡೆದಿರಬಹುದು ಎಂದು ಬಿಲಾಸ್ಪುರದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್ 14ರಂದು ಕೊಲೆ ನಡೆದಿದ್ದು ಪ್ರಿಯಾಂಕಾಳ ಮೃತ ದೇಹವನ್ನು ಮೆಡಿಕಲ್ ಶಾಪ್ ನಲ್ಲಿ ಇಟ್ಟಿದ್ದ ಆರೋಪಿ ಆಶೀಶ್ ಸಾಹು ಶವ ವಿಲೇವಾರಿಗೆ ಕಾಯುತ್ತಿದ್ದ. ದೇಹವನ್ನು ಸಾಗಿಸುತ್ತಿದ್ದಾಗಲೇ ರೆಡ್ ಹ್ಯಾಂಡೆಡ್ ಆಗಿ ಆರೋಪಿ ಸಿಕ್ಕಿಬಿದ್ದಿದ್ದು ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.