ನವದೆಹಲಿ, ಅ.3: ಪಾಕಿಸ್ತಾನ ಬಾಲ ಬಿಚ್ಚಿದರೆ, ಭೌಗೋಳಿಕವಾಗಿ ಉಳಿಯಬೇಕೇ ಅಥವಾ ಇತಿಹಾಸವಾಗಬೇಕೇ ಎಂಬುದನ್ನು ಆರಿಸಿಕೊಳ್ಳಬೇಕಾಗುತ್ತದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಎಚ್ಚರಿಸಿದ್ದಾರೆ. ರಾಜಸ್ಥಾನದ ಶ್ರೀ ಗಂಗಾನಗರ ಬಳಿಯ 22 ಎಂಡಿ ಗಡಿ ಗ್ರಾಮದಲ್ಲಿರುವ ಸೇನಾ ಠಾಣೆಯಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಜನರಲ್ ದ್ವಿವೇದಿ, ಆಪರೇಷನ್ ಸಿಂಧೂರ್‌ನ ಪ್ರಾಥಮಿಕ ಯಶಸ್ಸು ಪಾಕಿಸ್ತಾನದಲ್ಲಿ ಭಯೋತ್ಪಾದಕ ಗುಂಪುಗಳು ಬಳಸುತ್ತಿದ್ದ 9 ಸ್ಥಳಗಳನ್ನು ನಾಶಪಡಿಸುವುದಾಗಿದೆ. ಕಾರ್ಯಕ್ರಮದ ಸಂದರ್ಭದಲ್ಲಿ, ಆಪರೇಷನ್ ಸಿಂಧೂರ್ ಸಮಯದಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಕ್ಕಾಗಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮೂವರು ಅಧಿಕಾರಿಗಳು ಮತ್ತು ಹಲವಾರು ಜವಾನರನ್ನು ಸನ್ಮಾನಿಸಿದರು.
ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ಸೇನಾ ಮುಖ್ಯಸ್ಥ
ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ಸೇನಾ ಮುಖ್ಯಸ್ಥ
Date:




By
ForthFocus™