ನವದೆಹಲಿ, ಜೂ.7: ಹಲವು ವರ್ಷಗಳ ನಂತರ ಪ್ರಧಾನಿಯೊಬ್ಬರು ಮೂರನೇ ಅವಧಿಗೆ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು. ಶುಕ್ರವಾರ ರಾಜ್ಯಸಭಾ ಇಂಟರ್ನ್‌ಶಿಪ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 1962 ರಲ್ಲಿ ಪಂಡಿತ್ ಜವಾಹರಲಾಲ್ ನೆಹರು ಅವರು ಮೂರನೇ ಅವಧಿಯನ್ನು ಪಡೆದಿದ್ದರು. ಸಂಸತ್ತು ಪ್ರಜಾಪ್ರಭುತ್ವದ ಶ್ರೇಷ್ಠ ದೇಗುಲವಾಗಿದೆ ಮತ್ತು ಚರ್ಚೆ, ಸಂವಾದ, ಮತ್ತು ಸಮಾಲೋಚನೆಗೆ ಸ್ಥಳವಾಗಿದೆ. ಸಂವಾದ, ಚರ್ಚೆಗಳಿಗೆ ಭಾರತೀಯ ಸಂವಿಧಾನ ಆಧಾರಸ್ಥಂಭವಾಗಿದೆ ಎಂದರು.
ಹಲವು ವರ್ಷಗಳ ನಂತರ ಪ್ರಧಾನಿಗೆ ಮೂರನೇ ಅವಧಿ ಸಿಕ್ಕಿದೆ: ಉಪರಾಷ್ಟ್ರಪತಿ ಜಗದೀಪ್ ಧನಕರ್
ಹಲವು ವರ್ಷಗಳ ನಂತರ ಪ್ರಧಾನಿಗೆ ಮೂರನೇ ಅವಧಿ ಸಿಕ್ಕಿದೆ: ಉಪರಾಷ್ಟ್ರಪತಿ ಜಗದೀಪ್ ಧನಕರ್
Date: