ತುಮಕೂರು, ಜು.30: ಚಿಕ್ಕನಾಯಕನಹಳ್ಳಿಯ ಮಹಾಕ್ಷೇತ್ರ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಿಯವರ ನೂತನ ದೇವಾಲಯ ನಿರ್ಮಾಣಕ್ಕೆ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಮ್ನ್ಯಾಯ ಶ್ರೀ ಶಾರದಾ ಪೀಠ ಶೃಂಗೇರಿ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮೀಜಿ ಹಾಗೂ ಶ್ರೀ ವಿದುಶೇಖರ ಭಾರತಿ ಸ್ವಾಮೀಜಿರವರು ಆಶೀರ್ವದಿಸಿ ದೇವಾಲಯದ ಆಡಳಿತ ಮಂಡಳಿಗೆ ಎರಡು ಲಕ್ಷದ ಚೆಕ್ ಹಸ್ತಾಂತರಿಸಿದರು. ಚಿಕ್ಕನಾಯಕನಹಳ್ಳಿ ಪಟ್ಟಣದ ಶುಕ್ರವಾರದ ಕೋಟೆಬಾಗಿಲು ಹೊಸಬೀದಿಯಲ್ಲಿ ನೆಲೆಸಿರುವ ಸುಮಾರು 750 ವರ್ಷಕ್ಕೂ ಹೆಚ್ಚಿನ ಇತಿಹಾಸ ಇರುವ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಿಯವರ ಮತ್ತು ಕಾರಣಿಕ ದೈವ ಧೂತರಾಯ ಸ್ವಾಮಿ, ನಾಗ ಪರಿವಾರ ದೇವತೆ, ಮುಖ್ಯಪ್ರಾಣ ಅಭಯ ಆಂಜನೇಯಸ್ವಾಮಿ, ಮಹಾ ಶಕ್ತಿ ಗಣಪತಿ ದೇವರ ದೇವಾಲಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕೇರಳ ಮಾದರಿಯಲ್ಲಿ ವಿನೂತನವಾಗಿ ದೇವಾಲಯ ನಿರ್ಮಾಣ ಮಾಡಲು ಅಮ್ಮನವರು ಅಪ್ಪಣೆ ನೀಡಿರುವುದರಿಂದ ದೇವಾಲಯ ಜೀರ್ಣೋದ್ದಾರ ಸಮಿತಿ, ಹಾಗೂ ಟ್ರಸ್ಟ್, ಸದ್ಭಕ್ತರು, ಗ್ರಾಮಸ್ಥರ ಸಹಕಾರದೊಂದಿಗೆ ದೇವಾಲಯದ ದೇವಾಲಯದ ನಿರ್ಮಾಣದ ಶೀಲಾಸ್ಥಾಪನೆ, ಷಡದಾರ ಪ್ರತಿಷ್ಠೆ ಪೂರ್ಣಗೊಂಡಿದ್ದು ಇನ್ನುಳಿದ ಕಟ್ಟಡ ಕಾಮಗಾರಿ ಕೆಲಸ ಪ್ರಾರಂಭ ಮಾಡಲು ಸಿದ್ದವಾಗಿದ್ದು ಈ ಹಿನ್ನಲೆಯಲ್ಲಿ ಸಮಿತಿಯವರು ಸಹಕಾರ ಆಶೀರ್ವಾದ ಕೋರಿ ಮನವಿ ಸಲ್ಲಿಸಲಾಗಿದ್ದು, ಮನವಿಗೆ ಸ್ಪಂದಿಸಿದ ಜಗದ್ಗುರುಗಳು ಶ್ರೀ ಶಾರದಾ ಪರಮೇಶ್ವರಿ ಸಹಿತ ಚಂದ್ರಮೌಳೇಶ್ವರ ಸ್ವಾಮಿ ಆಶೀರ್ವಾದದೊಂದಿಗೆ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಾಲಯದ ಕಮಿಟಿಯವರು ಶ್ರೀ ಮಹಾ ಲಕ್ಷ್ಮೀ ಮದ್ದರಲಕ್ಕಮ್ಮ ದೇವಾಲಯದ ಟ್ರಸ್ಟ್ ಸದಸ್ಯರು ಜೀರ್ಣೋದ್ದಾರ ಮಾಡಲು ಸಂಕಲ್ಪ ಮಾಡಿದ ವಿಚಾರ ಅತೀವ ಸಂತೋಷ ಉಂಟಾಗಿದೆ ಎಂದು ಜಗದ್ಗುರುಗಳು ತಿಳಿಸಿದ್ದು ಶ್ರೀ ಶಾರದಾ ಚಂದ್ರಮೌಳಿ ಆಶೀರ್ವಾದದಿಂದ ದೇವಾಲಯದ ನಿರ್ಮಾಣ ಕಾರ್ಯ ಶೀಘ್ರವಾಗಿ ಪೂರ್ಣಗೊಳ್ಳಲಿ ಎಂದು ಆಶೀರ್ವಾದ ನೀಡಿದರು. ಪೂಜ್ಯರ ಆಶೀರ್ವಾದದಿಂದ ಅಮ್ಮನವರ ದೇವಾಲಯದ ಕಾರ್ಯ ಶೀಘ್ರವಾಗಿ ನೆಡೆಯಲಿ ಎಂದು ಮಠದ ಆಡಳಿತ ಅಧಿಕಾರಿಗಳಾದ ಮುರಳಿ ಆಶಿಸಿದರು. ದೇವಾಲಯ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಚಿ.ನಿ ಪುರುಷೋತ್ತಮ್, ಖಜಾಂಚಿ ರಂಗರಾಜ ಅರಸ್, ಟ್ರಸ್ಟಿ ರವಿಕುಮಾರ್, ರಾಜಶೇಖರ್, ಅಕ್ಷತ, ಲಕ್ಷ್ಮೀಶ, ಬ್ರಿತಿ, ರಾಘವ್ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ಅಮ್ಮನವರ ದೇವಾಲಯ ನಿರ್ಮಾಣಕ್ಕೆ ಶೃಂಗೇರಿ ದೇವಳದಿಂದ ರೂ. 2 ಲಕ್ಷ ದೇಣಿಗೆ
ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ಅಮ್ಮನವರ ದೇವಾಲಯ ನಿರ್ಮಾಣಕ್ಕೆ ಶೃಂಗೇರಿ ದೇವಳದಿಂದ ರೂ. 2 ಲಕ್ಷ ದೇಣಿಗೆ
Date:




By
ForthFocus™