Tuesday, March 31, 2026
Tuesday, March 31, 2026

ಲಾಲ್‌ಬಾಗ್‌: ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

ಲಾಲ್‌ಬಾಗ್‌: ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

Date:

ಬೆಂಗಳೂರು, ಜ.21: ಗಣರಾಜ್ಯೋತ್ಸವದ ಸಂಭ್ರಮದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು. ಈ ಬಾರಿಯ ಪ್ರದರ್ಶನವು ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಮತ್ತು ಕೃತಿಗಳ “ತೇಜಸ್ವಿ ವಿಸ್ಮಯ” ಥೀಮ್ ಅಡಿಯಲ್ಲಿ ಮೂಡಿಬಂದಿದೆ.

ಕರ್ವಾಲೋ ಕಾದಂಬರಿಯ ಕಾಲ್ಪನಿಕ ಚಿತ್ರಣ, ಬಿಳಿಗಿರಿ ರಂಗನ ಬೆಟ್ಟದ ಹಳ್ಳಿ ಸೊಗಡು ಹಾಗೂ ನಂದಿಗಿರಿಧಾಮದಂತಹ ಅದ್ಭುತ ಕಲಾಕೃತಿಗಳು ಪ್ರಕೃತಿ ಪ್ರೇಮಿಗಳ ಮನಗೆಲ್ಲಲಿವೆ.

ಜನವರಿ 26 ರವರೆಗೆ ನಡೆಯಲಿರುವ ಈ ಫಲಪುಷ್ಪ ಪ್ರದರ್ಶನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ, ಪ್ರಕೃತಿಯ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಿ ಎಂದು ಉಪಮುಖ್ಯಮಂತ್ರಿ ಹೇಳಿದರು.

ಸಾರಿಗೆ ಸಚಿವ ರಾಮಲಿಂಗರೆಡ್ಡಿ, ತೋಟಗಾರಿಕೆ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ಶಾಸಕರಾದ ಉದಯ್ ಗರುಡಾಚಾರ್, ಟಿ.ಎ. ಶರವಣ ಮುಂತಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬಿ.ಬಿ. ಹೆಗ್ಡೆ ಕಾಲೇಜು: ‘ಪ್ಲಾಸ್ಟಿಕಾಸುರ’ ಯಕ್ಷಗಾನ

ಕುಂದಾಪುರ, ಮಾ.30: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಕುವೈತ್‌: ವಿದ್ಯುತ್ ಘಟದ ಮೇಲೆ ಇರಾನ್ ದಾಳಿ; ಭಾರತೀಯ ಕಾರ್ಮಿಕ ಬಲಿ

ಕುವೈತ್ ನಗರ, ಮಾ.30: ಕುವೈತ್ ಸಚಿವಾಲಯದ ಅಧಿಕೃತ ವಕ್ತಾರರು ನೀಡಿದ ಹೇಳಿಕೆಯ...

ಮಾಹೆಯ ಬಿಎಸ್‌ಎಲ್‌-3 ಪ್ರಯೋಗಾಲಯಕ್ಕೆ ಭಾರತ ಸರ್ಕಾರದ ಮಾನ್ಯತೆ

ಮಣಿಪಾಲ, ಮಾ.30: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯ...
error: Content is protected !!