Home ಸುದ್ಧಿಗಳು ರಾಜ್ಯ ಓಮಿಕ್ರಾನ್ ತಡೆಗಟ್ಟಲು ರಾಜ್ಯ ಸರ್ಕಾರದ ಮಾರ್ಗಸೂಚಿ ಪ್ರಕಟ

ಓಮಿಕ್ರಾನ್ ತಡೆಗಟ್ಟಲು ರಾಜ್ಯ ಸರ್ಕಾರದ ಮಾರ್ಗಸೂಚಿ ಪ್ರಕಟ

707
0

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ರೂಪಾಂತರಿ ಓಮಿಕ್ರಾನ್ ವೈರಾಣು ಹರಡುವಿಕೆ ತಡೆಗಟ್ಟುವ ಇನ್ನಷ್ಟು ಕ್ರಮಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ಮಹತ್ವದ ಸಭೆ ನಡೆಯಿತು.

ಮಾರ್ಗಸೂಚಿಯಲ್ಲಿ ಏನಿದೆ?

* ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಕೊರೊನಾ ನಿಯಮ ಪಾಲನೆಗೆ ಕ್ರಮ. ಪರೀಕ್ಷೆ, ಸೋಂಕಿತರ ಪತ್ತೆ ಹಚ್ಚುವಿಕೆ, ಲಸಿಕೆ, ಆರೈಕೆ ಹೆಚ್ಚಳ.

* ಸಭೆ ಸಮಾರಂಭಗಳಿಗೆ 500 ಜನರ ಮಿತಿ, ಕೊರೊನಾ ನಿಯಮ ಪಾಲಿಸಲು ಸೂಚನೆ.

* ಶೈಕ್ಷಣಿಕ ಸಂಸ್ಥೆಗಳಲ್ಲಿ ಜನವರಿ 15, 2022 ವರೆಗೆ ಎಲ್ಲಾ ಸಾಂಸ್ಕೃತಿಕ/ ಫೆಸ್ಟ್/ ಕಾರ್ಯಕ್ರಮಗಳನ್ನು ಮುಂದೂಡಬೇಕು.

* 18 ರ ಕೆಳಗಿನ ವಿದ್ಯಾರ್ಥಿಗಳ ಪೋಷಕರು ಕಟ್ಟುನಿಟ್ಟಾಗಿ ಎರಡು ಡೋಸ್ ಲಸಿಕೆ ಪಡೆಯಬೇಕು.

* ಆರೋಗ್ಯ ಕಾರ್ಯಕರ್ತರು, 65ರ ವಯೋಮಿತಿ ದಾಟಿದವರ ಕಡ್ಡಾಯ ಪರೀಕ್ಷೆ.

* ಎರಡೂ ಡೋಸ್ ಪಡೆದವರಿಗೆ ಮಾತ್ರ ಮಾಲ್, ಥಿಯೇಟರ್, ಸಿನೆಮಾ ಪ್ರವೇಶ.

* ಮಾಸ್ಕ್ ಧರಿಸಲು ತಪ್ಪಿದ್ದಲ್ಲಿ ಮಹಾನಗರ/ನಗರಸಭೆ ವ್ಯಾಪ್ತಿಯಲ್ಲಿ ರೂ. 250 ದಂಡ, ಇತರೆ ಕಡೆಗಳಲ್ಲಿ 100 ರೂ. ದಂಡ.

* ಕಂಟೈನ್ಮೆಂಟ್ ಪ್ರದೇಶಗಳ ಬಗ್ಗೆ ನಿಗಾ.

* ಕೇರಳ/ ಮಹಾರಾಷ್ಟ್ರ ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ, ಕಟ್ಟುನಿಟ್ಟಿನ ತಪಾಸಣೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.