ಯು.ಬಿ.ಎನ್.ಡಿ., ಆ.1: ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಹೋಬಳಿಯ ಅರೆನೂರಿನ ಹಕ್ಕಿಮಕ್ಕಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ತಾಯಿಯನ್ನು ಕೊಲೆ ಮಾಡಿ ತಂದೆಯನ್ನು ಥಳಿಸಿದ್ದಾನೆ. ಆರೋಪಿ ಪವನ್ (26) ತನ್ನ ತಾಯಿ ಭವಾನಿಯಿಂದ ಮದ್ಯಕ್ಕಾಗಿ ಹಣ ಕೇಳಿದ್ದಾನೆ. ಆಕೆ ನಿರಾಕರಿಸಿದಾಗ, ಮದ್ಯದ ಅಮಲಿನಲ್ಲಿ ಆರೋಪಿಯು ತನ್ನ ತಾಯಿಯ ಜತೆ ಜಗಳ ಆರಂಭಿಸಿ ಕೊಡಲಿಯಿಂದ ಕಡಿದು, ಆಕೆಯ ದೇಹವನ್ನು ಸುಟ್ಟು ಹಾಕಿದ್ದಾನೆ. ಬಳಿಕ ತನ್ನ ತಂದೆ ಸೋಮೆ ಗೌಡ ಅವರನ್ನು ಬೆಲ್ಟ್‌ನಿಂದ ಹೊಡೆದು ಬೆನ್ನಿನ ಮೇಲೆ ಗಂಭೀರವಾಗಿ ಗಾಯಗೊಳಿಸಿದ್ದಾನೆ.
ಪವನ್ ಬೆಂಗಳೂರಿನ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದನು ಮತ್ತು ಎರಡು ತಿಂಗಳ ಹಿಂದೆಯಷ್ಟೇ ಗ್ರಾಮಕ್ಕೆ ಮರಳಿದನು ಎನ್ನಲಾಗಿದೆ. ಪ್ರತಿದಿನ ಕುಡಿಯಲು ಹಣಕ್ಕಾಗಿ ತನ್ನ ಹೆತ್ತವರನ್ನು ಪೀಡಿಸುತ್ತಿದ್ದನು. ಪ್ರತಿನಿತ್ಯ ಜಗಳ ನಡೆಯುತ್ತಿತ್ತು ಎಂದು ನೆರೆಹೊರೆಯವರು ಹೇಳಿದ್ದರು. ಆಲ್ದೂರು ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.




By
ForthFocus™