Home ಸುದ್ಧಿಗಳು ರಾಜ್ಯ ಕಾನೂನು ಸುಗಮಕಾರರ ಸಮಾವೇಶ

ಕಾನೂನು ಸುಗಮಕಾರರ ಸಮಾವೇಶ

800
0

ಹೊನ್ನಾವರ: ಲಿಂಗತ್ವ, ಮಹಿಳಾ ಕಾನೂನುಗಳು, ಮಹಿಳಾ ಪ್ರಕರಣಗಳ ನಿರ್ವಹಣೆ ವಿಷಯಗಳಲ್ಲಿ 3 ಹಂತದ 12 ದಿನಗಳ ತರಬೇತಿ ಪಡೆದ ಪೂರಕ ಕಾನೂನು ಸುಗಮಕಾರರ ಮತ್ತು ಈ ಸುಗಮಕಾರರ ಮೂಲಕ ಹಳ್ಳಿಗಳಲ್ಲಿ 3 ಹಂತಗಳಲ್ಲಿ ಮಾಹಿತಿ ಪಡೆದ ತಳಮಟ್ಟದ ಭಾಗಾರ್ಥಿಗಳ ಅನುಭವ ಹಂಚಿಕೆಗೆ ವೇದಿಕೆ ಕಲ್ಪಿಸುವ ಉದ್ದೇಶದೊಂದಿಗೆ ಸಮಾವೇಶ ಹೊನ್ನಾವರದಲ್ಲಿ ಇಂದು ನಡೆಯಿತು.

ಡೀಡ್ಸ್‌ನ ಟಾಗ್‌ಲೈನ್-ಕಾನೂನಿನ ನಡಿಗೆ ಮಹಿಳೆಯರ ಕಡೆಗೆ ಅನ್ನು ಅನಾವರಣಗೊಳಿಸುವ ಮೂಲಕ ಹೊನ್ನಾವರ ಪಟ್ಟಣ ಪಂಚಾಯತ್‌ನ ಅಧ್ಯಕ್ಷರಾದ ಶಿವರಾಜ್‌ ಸುರೇಶ್‌ ಮೇಸ್ತ್‌ ಸಮಾವೇಶವನ್ನು ಉದ್ಘಾಟಿಸಿದರು. ಡೀಡ್ಸ್‌ ನಿರ್ದೇಶಕಿ ಮರ್ಲಿನ್‌ ಮಾರ್ಟಿಸ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸಮಾರಂಭದಲ್ಲಿ ಹೊನ್ನಾವರ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷ ಗೌಡ ಪಾಟೀಲ, ಮುಗ್ವ ಚರ್ಚ್‌ನ ಧರ್ಮಗುರುಗಳಾದ ಸೆಬೆಸ್ಟಿನ್‌ ಫೆರ್ನಾಂಡಿಸ್‌ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪೂರಕ ಕಾನೂನು ಸುಗಮಕಾರರು, ಆಯ್ದ ತಳಮಟ್ಟದ ಭಾಗಾರ್ಥಿಗಳು ಪಡೆದುಕೊಂಡ ತರಬೇತಿಗಳು, ತಮಗಾದ ಪ್ರಯೋಜನಗಳು, ತಾವು ತರಬೇತಿಯ ನಂತರ ಮಾಡಿಕೊಂಡ ಬದಲಾವಣೆಗಳನ್ನು ಹಂಚಿಕೊಂಡರು.

ಎರ್ಮಿಲಿನ್‌ ಡಿಸೋಜ ಸ್ವಾಗತಿಸಿ, ಮಂಜುನಾಥ ಗೌಡ ಧನ್ಯವಾದವಿತ್ತರು. ಕ್ಲಾರಾ ಫೆರ್ನಾಂಡಿಸ್‌ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.