Home ಸುದ್ಧಿಗಳು ಪ್ರಾದೇಶಿಕ ಮಂಗಳೂರು ವಿವಿ ರ್ಯಾಂಕ್ ಪಟ್ಟಿ ಪ್ರಕಟ- ಡಾ. ಪಿ. ದಯಾನಂದ ಪೈ ಪಿ ಸತೀಶ್ ಪೈ...

ಮಂಗಳೂರು ವಿವಿ ರ್ಯಾಂಕ್ ಪಟ್ಟಿ ಪ್ರಕಟ- ಡಾ. ಪಿ. ದಯಾನಂದ ಪೈ ಪಿ ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎಸ್.ಡಬ್ಲ್ಯೂ ವಿಭಾಗಕ್ಕೆ ಪ್ರಥಮ ರ್ಯಾಂಕ್, ಬಿ.ಎ. ವಿಭಾಗದಲ್ಲಿ ಎಂಟನೇ ರ್ಯಾಂಕ್

588
0

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ರ್ಯಾಂಕ್ ಪಟ್ಟಿ ಪ್ರಕಟವಾಗಿದ್ದು, ದಕ್ಷಿಣ ಕನ್ನಡದ ಲೀಡ್ ಕಾಲೇಜಾಗಿರುವ ಡಾ. ಪಿ. ದಯಾನಂದ ಪೈ ಪಿ ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಇಲ್ಲಿಯ ವಿದ್ಯಾರ್ಥಿನಿ ರಮ್ಯಾ ಇವರಿಗೆ ಬಿ.ಎಸ್.ಡಬ್ಲ್ಯೂ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಬಿ.ಎ. ವಿಭಾಗದಲ್ಲಿ ತೇಜಸ್ವಿನಿ ಅವರಿಗೆ ಎಂಟನೇ ರ್ಯಾಂಕ್ ಲಭಿಸಿದೆ.

ಸತತವಾಗಿ ಡಾ. ಪಿ. ದಯಾನಂದ ಪೈ ಪಿ ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಇಲ್ಲಿಯ ಬಿ.ಎಸ್.ಡಬ್ಲ್ಯೂ ವಿಭಾಗಕ್ಕೆ ಎರಡನೇ ವರ್ಷದಲ್ಲಿ ಕೂಡ ಪ್ರಥಮ ರ್ಯಾಂಕ್ ಲಭಿಸಿರುವುದು ಕಾಲೇಜಿನ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಸಾಧನೆಗೆ ಡಾ. ಪಿ. ದಯಾನಂದ ಪೈ ಪಿ ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಪ್ರಾಂಶುಪಾಲರಾದ ಪ್ರೊ. ರಾಜಶೇಖರ ಹೆಬ್ಬಾರ್ ಇವರು ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದು, ಸಮಾಜಕಾರ್ಯ ವಿಭಾಗದ ಮತ್ತು ಬಿಎ ವಿಭಾಗದ ಸಂಯೋಜಕರು, ಮುಖ್ಯಸ್ಥರು ಹಾಗೂ ಬೋಧಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.